DistrictsKarnatakaLatestMain PostUdupi

ಉಡುಪಿ ಪ್ರವಾಸ ಕೈಗೊಂಡಿರುವ ನಿರ್ಮಲಾ ಸೀತಾರಾಮನ್

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದು, ಉಡುಪಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಎರಡು ಕಾರ್ಯಕ್ರಮಗಳ ಜೊತೆ ಮೂರು ದೇಗುಲಗಳ ದರ್ಶನ ಮಾಡಲಿದ್ದಾರೆ.

ಶುಕ್ರವಾರ ರಾತ್ರಿ ಮಣಿಪಾಲಕ್ಕೆ ಆಗಮಿಸಿ ತಂಗಿರುವ ಹಣಕಾಸು ಸಚಿವೆ, ಇಂದು ಉಡುಪಿಯಲ್ಲಿ ಮಣಿಪಾಲದ ಟಿ.ಎ.ಪೈ ಮ್ಯಾನೇಜ್‍ಮೆಂಟ್ ಇನ್‍ಸ್ಟಿಟ್ಯೂಟ್(ಟ್ಯಾಪ್ಮಿ) ಘಟಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಭಾಷಣ ಮಾಡಲಿದ್ದಾರೆ. ಉಡುಪಿ ಕುಕ್ಕಿಕಟ್ಟೆಯಲ್ಲಿ ಶ್ರೀ ವಿಶ್ವೇಶತೀರ್ಥ ಧಾಮವನ್ನು ಸಚಿವರು ಉದ್ಘಾಟಿಸಲಿದ್ದಾರೆ.  ಇದನ್ನೂ ಓದಿ: ಭಾರತ ಹಾಕಿ ತಂಡದಲ್ಲಿ ಹಾಸನದ ಶೇಷೇಗೌಡ

ಉಡುಪಿ ಕೃಷ್ಣಮಠ ಭೇಟಿ ನೀಡಿ ಪರಿಹಾರ ಸ್ವಾಮೀಜಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ಕಾರ್ಯಕ್ರಮ ನಿಗದಿಯಾಗಿದ್ದು, ಸಂಜೆ ಮಂಗಳೂರಿಗೆ ತೆರಳಿ ವಿಮಾನ ಮೂಲಕ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ರಾಜ್ಯಸಭಾ ಚುನಾವಣಾ ಮುನ್ನ ರಾಜ್ಯ ಭೇಟಿ ಮಹತ್ವ ಪಡೆದಿದೆ.

Leave a Reply

Your email address will not be published.

Back to top button