ಚಿತ್ರದುರ್ಗ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ರಾಜಕೀಯ ಜ್ಞಾನ ಇಲ್ಲ ಎನ್ನುತ್ತಿದ್ದೆ. ಆದರೆ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೂ ರಾಜಕೀಯ ಜ್ಞಾನ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕುಟುಕಿದರು.
Advertisement
ಬೆಂಗಳೂರಿನಿಂದ ಬಾಗಲಕೋಟೆಗೆ (Bagalkote) ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ಗೆ ಇಂಧನ ತುಂಬಿಸಲು ಕ್ಯಾದಿಗೆರೆ ಗ್ರಾಮದ ಬಳಿ ಲ್ಯಾಂಡ್ ಮಾಡಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬ್ಬಕ್ಕ ವರ್ಸಸ್ ಟಿಪ್ಪು ಚರ್ಚೆ ಆಗಲಿದೆ ಎಂದು ಶಾ ಹೇಳಿದ್ದು ಸಿದ್ಧಾಂತವೇ? ಗಾಂಧಿ ವರ್ಸ್ಸ್ ಸಾವರ್ಕರ್ ಎನ್ನುವುದು ಸಿದ್ಧಾಂತವೇ? ಸಿದ್ದರಾಮಯ್ಯನನ್ನು ಮುಗಿಸಿ ಎನ್ನುವುದು ಸಿದ್ಧಾಂತವೇ ಎಂದು ಸರಣಿ ಪ್ರಶ್ನೆ ಕೇಳಿದ ಅವರು, ಬಿಜೆಪಿಗರ ಸಿದ್ಧಾಂತ ಇದೇ ರೀತಿಯದ್ದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪತ್ನಿ ಕೊಂದು ವಾಟ್ಸಾಪ್ ಸ್ಟೇಟಸ್ ಹಾಕಿದ ಪತಿ; ಕೊನೆಗೆ ತಾನೂ ನೇಣಿಗೆ ಶರಣು
Advertisement
ಪದೇ ಪದೇ ಕರ್ನಾಟಕಕ್ಕೆ ನಡ್ಡಾ, ಮೋದಿ, ಶಾ ಬರುತ್ತಿದ್ದಾರೆ. ಅವರೆಲ್ಲ ನೂರು ಸಲ ರಾಜ್ಯಕ್ಕೆ ಬಂದರೂ ಪ್ರಯೋಜನವಿಲ್ಲ. ರಾಜ್ಯದ ಜನ ಬಿಜೆಪಿಯನ್ನು ಸೋಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.
Advertisement
ಕಾಂಗ್ರೆಸ್ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತದೆ ಎಂಬ ಶೋಭಾ ಕರಂದ್ಲಾಜೆ (Shobha Karandlaje) ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಯಾರ ಓಲೈಕೆಯನ್ನೂ ಮಾಡಲ್ಲ. ಕಾಂಗ್ರೆಸ್ ಪಕ್ಷ ಮನುಷ್ಯತ್ವದ ರಾಜಕಾರಣ ಮಾಡುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ದಲಿತರೆಲ್ಲ ಮನುಷ್ಯರು ಎಂದು ತಿಳಿಸಿದರು.
Advertisement
ಹಾಗೆಯೇ ರಾಜ್ಯದಲ್ಲಿ ಶುದ್ಧ ನೀರಿನ ಘಟಕದಲ್ಲಿ ಭಾರೀ ಅವ್ಯವಹಾರವಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಯಾವುದರ ಬಗ್ಗೆಯೂ ತನಿಖೆ ನಡೆಸಲು ಸಿದ್ಧವಿಲ್ಲ. ದಾಖಲೆ ಕೇಳಿ ನುಣುಚಿಕೊಳ್ಳುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಅಕ್ರಮ ಆಗಿದ್ದರೆ ತನಿಖೆ ನಡೆಸಿ ಎಂದು ಸವಾಲು ಹಾಕಿದರು. ರಾಜ್ಯ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿದ್ದೇವೆ. ಆರೋಪದ ಬಗ್ಗೆ ತನಿಖೆ ಮಾಡಲಿ ಎಂದರು. ಇದನ್ನೂ ಓದಿ: ಮುಸ್ಲಿಂನನ್ನು ಸ್ವರಾ ಭಾಸ್ಕರ್ ಮದುವೆಯಾಗಿದ್ದಕ್ಕೆ ಶ್ರದ್ಧಾ ವಾಕರ್ ಪ್ರಕರಣ ನೆನಪಿಸಿದ ಸಾಧ್ವಿ
ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯರಿಂದ ಟಿಪ್ಪು ಜಯಂತಿ, ಜಾತಿ-ಬೇಧ ಎಂದು ಆರೋಪಿಸಿದ್ದ ಕರಂದ್ಲಾಜೆ ಹೇಳಿಕೆಗೆ, ಪಾಪ ಕರಂದ್ಲಾಜೆಗೆ ಏನೂ ಗೊತ್ತಿಲ್ಲ. ಜಾತಿ, ಧರ್ಮ ಎಂದರೇನು ಎಂದು ತಿಳಿದಿಲ್ಲವೆಂದು ಕುಟುಕಿದರಲ್ಲದೇ, ನಾವು ಎಲ್ಲಾ ಜಾತಿಯ ಬಡವರಿಗೆ ಕಾರ್ಯಕ್ರಮ ನೀಡಿದ್ದೇವೆ ಎಂದು ಹೇಳಿದರು. ಈ ವೇಳೆ ಮಾಜಿ ಸಚಿವರಾದ ಜಮೀರ್ ಅಹಮ್ಮದ್ (Zameer Ahmed Khan) ಹಾಗೂ ಹೆಚ್.ಸಿ.ಮಹದೇವಪ್ಪ ಇದ್ದರು.LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k