ಬೆಂಗಳೂರು: ಗುತ್ತಿಗೆದಾರರಿಗೆ ಜೀವಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಬಂಧನಕ್ಕೊಳಪಟ್ಟಿರುವ ಶಾಸಕ ಮುನಿರತ್ನ (Munirathna) ಪೊಲೀಸ್ ಕಸ್ಟಡಿ (Police Custody) ಅಂತ್ಯವಾಗಲಿದ್ದು ಮಂಗಳವಾರ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟೆಕ್ಕಣ್ಣನವರ್ ಖುದ್ದು ವಿಚಾರಣೆಯ ನೇತೃತ್ವ ವಹಿಸಿದ್ದಾರೆ. ವಿಚಾರಣೆಯಲ್ಲಿ ಇದು ನನ್ನ ಆಡಿಯೋ ಅಲ್ಲ ಅಂತ ಮುನಿರತ್ನ ಪುನರುಚ್ಛರಿಸಿದ್ದಾರೆ.
ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಲಾಗಿದೆ. ಮುಡಾ, ನಾಗಮಂಗಲ ಗಲಭೆ ಕೇಸ್ ಡೈವರ್ಟ್ ಮಾಡಲು ನನ್ನನ್ನು ಬಲಿಪಶು ಮಾಡುತ್ತಿದ್ದಾರೆ ಎಂಬುದಾಗಿ ದೂರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮುನಿರತ್ನ ಬೈದಿದ್ದು ಇನ್ನೂ ಸಾಬೀತಾಗಿಲ್ಲ, ಇದು ಸಿಡಿ ಶಿವು ಕೆಲಸ: ರಮೇಶ್ ಜಾರಕಿಹೊಳಿ
ಇಂದು ಸಂಜೆ ಹೊತ್ತಿಗೆ ಮುನಿರತ್ನ ಅವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಲಾಯಿತು.