– ರಾಹುಲ್‌ಗೆ ಸದನದ ನಿಯಮಾವಳಿಗಳೇ ಗೊತ್ತಿಲ್ಲ
ನವದೆಹಲಿ: ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಗದ್ದಲದ ಮಧ್ಯೆ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ(Ant Paper Leak Bill) ಧ್ವನಿ ಮತದ ಮೂಲಕ ಅಂಗೀಕಾರಕೊಂಡಿದೆ.
ರಾಹುಲ್ ಗಾಂಧಿ (Rahul Gandhi) ಭಾಷಣಕ್ಕೆ ಸರ್ಕಾರದ ಪರವಾಗಿ ಸಚಿವ ಜಿತೇಂದ್ರ ಸಿಂಗ್(Jitendra Singh) ಉತ್ತರ ನೀಡಲು ಮುಂದಾದಾಗ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ಭಾಷಣದ ಆರಂಭದಿಂದ ಮಸೂದೆ ಅಂಗೀಕಾರ ಆಗುವವರೆಗೂ ಮೋದಿ ಸರ್ಕಾರ ಚೋರ್ ಸರ್ಕಾರ ಎಂದು ಸದಸ್ಯರು ಘೋಷಣೆ ಕೂಗುತ್ತಿದ್ದರು.
ವಿಪಕ್ಷಗಳ ಗದ್ದಲ ಮಧ್ಯೆಯೂ ಜಿತೇಂದ್ರ ಸಿಂಗ್, ವಿರೋಧ ಪಕ್ಷಗಳು ತೀವ್ರ ರಾಜಕಾರಣ ಮಾಡುತ್ತಿವೆ ಹಾಗೂ ವಿಪಕ್ಷ ನಾಯಕರು ಅಸಂವಿಧಾನಿಕ ಪದಗಳನ್ನು ಬಳಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ – ವರದಿ ಸಲ್ಲಿಕೆಗೆ ಅವಧಿ ವಿಸ್ತರಣೆ
ಲೋಕ ಕಲ್ಯಾಣ ಮಾರ್ಗದಲ್ಲಿ ರಾಹುಲ್ ಗಾಂಧಿ ನಡೆಸಿದ ಪ್ರತಿಭಟನೆಯನ್ನು ವ್ಯಂಗ್ಯವಾಡಿದ ಜಿತೇಂದ್ರ ಸಿಂಗ್, ತಮಗೆ ಪ್ರಧಾನಿಯಾಗಲು ಸಾಧ್ಯವಾಗಲಿಲ್ಲ ಎಂಬ ಹತಾಶೆಯಿಂದ ರಾಹುಲ್ ಗಾಂಧಿ ಪ್ರಧಾನಿ ನಿವಾಸದ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ದೂರಿದರು.
ಪ್ರಿಯಾಂಕಾ ಗಾಂಧಿ ಅವರು 152 ಬಾರಿ ಪೇಪರ್ ಲೀಕ್ ಆಗಿದೆ ಎಂದು ಆರೋಪಿಸಿದ್ದಾರೆ. ಆದರೆ ಈ ಲೆಕ್ಕ ಅವರಿಗೆ ಎಲ್ಲಿಂದ ಸಿಕ್ಕಿತು ಎಂಬುದು ನಮಗಂತೂ ಅರ್ಥವಾಗುತ್ತಿಲ್ಲ. ಇನ್ನು ನೀಟ್ (NEET) ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಾಹುಲ್ ಗಾಂಧಿ ʻಮೂರ್ಖʼ ಹೇಳಿಕೆಗೆ ರಿಜಿಜು ತೀವ್ರ ಆಕ್ಷೇಪ – ಲೋಕಸಭೆಯಲ್ಲಿ ಭಾರೀ ಗದ್ದಲ, ಕೋಲಾಹಲ
