ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳಿಗೆ ಪೂರಕವಾಗಿಯೇ ಈಶಾನ್ಯ ರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು, ತ್ರಿಪುರ, ನಾಗಲ್ಯಾಂಡ್ನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ.
ಮೇಘಾಲಯದಲ್ಲಿ ಮಾತ್ರ ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್ಪಿಪಿ ಹೆಚ್ಚು ಸ್ಥಾನ ಗಳಿಸಿದರೂ ಬಹುಮತ ಗಳಿಸುವಲ್ಲಿ ವಿಫಲವಾಗಿದೆ. ಅತಂತ್ರ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಕಾನ್ರಾಡ್ ಅವರು ಬೆಂಬಲ ಪಡೆಯಲು ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿ ಈ ವಿಚಾರ ತಿಳಿಸಿದ್ದಾರೆ.
Advertisement
Sri @SangmaConrad , Chief Minister of Meghalaya, called @AmitShah ji, Hon'ble Home Minister, and sought his support and blessings in forming the new Government.
.
— Himanta Biswa Sarma (@himantabiswa) March 2, 2023
Advertisement
ತ್ರಿಪುರಾದಲ್ಲಿ ಮಾತ್ರ ಬಿಜೆಪಿಗೆ ಅಂದುಕೊಂಡಷ್ಟು ಸುಲಭವಾಗಿ ಗೆಲುವು ದಕ್ಕಲಿಲ್ಲ. ಮಾಣಿಕ್ಯ ರಾಜವಂಶದ ಪ್ರದ್ಯೋತ್ ಬಿಕ್ರಮ್ ವರ್ಮಾ ನೇತೃತ್ವದ ತಿಪ್ರಾ ಮೋಥಾ ಪಕ್ಷ ಕೆಸರಿ ಪಡೆಗೆ ಭಾರೀ ಸ್ಪರ್ಧೆ ನೀಡಿತ್ತು. ಐಪಿಎಫ್ಟಿ ಜೊತೆಗೆ ಸ್ಪರ್ಧೆ ಮಾಡಿದ್ದ ಬಿಜೆಪಿ ಅಂತಿಮವಾಗಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಸಫಲವಾಯಿತು.
Advertisement
BJP's win in Tripura & Nagaland is an affirmation of North East's continued resolve to prosper on the path paved by vision of Hon PM @narendramodi Ji. The future is glorious & safe.
Much gratitude to @JPNadda Ji for his continued guidance.@BJP4Tripura @BJP4Nagaland pic.twitter.com/qVLzIr48vw
— Himanta Biswa Sarma (@himantabiswa) March 2, 2023
Advertisement
ಇದೇ ವೇಳೆ, ತಿಪ್ರಾ ಮೊಥಾ ಬೆಂಬಲ ನೀಡಿದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಬಿಟ್ಟು ಉಳಿದೆಲ್ಲಾ ಬೇಡಿಕೆಗಳಿಗೆ ಸ್ಪಂದಿಸೋದಾಗಿ ಬಿಜೆಪಿ ಬಿಗ್ ಆಫರ್ ನೀಡಿದೆ. ಕಾಂಗ್ರೆಸ್ ಹೆಚ್ಚು ಕಡಿಮೆ ವಾಷ್ಔಟ್ ಆಗಿದೆ. ಎರಡು ರಾಜ್ಯಗಳಲ್ಲಿ ಗೆದ್ದ ಬಿಜೆಪಿ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಪ್ರಧಾನಿ ಮೋದಿ ಮಾತನಾಡಿ, ಈಶಾನ್ಯ ರಾಜ್ಯಗಳ ಜನತೆಗೆ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಈ ಮಹಿಳೆ ದಿನಕ್ಕೆ 22 ಗಂಟೆ ನಿದ್ರೆ ಮಾಡ್ತಾಳಂತೆ – ಒಮ್ಮೊಮ್ಮೆ 4 ದಿನ ಆದ್ರೂ ಎದ್ದೇಳಲ್ವಂತೆ!
60 ವರ್ಷಗಳ ಇತಿಹಾಸವುಳ್ಳ ನಾಗಲ್ಯಾಂಡ್ನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರು ಗೆದ್ದುಬೀಗಿದ್ದಾರೆ. ಎನ್ಡಿಪಿಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಹೆಕಾನಿ ಜಖಾಲು ಮತ್ತು ಸಲ್ಹತುನೋ ಕ್ರುಸೆ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ.
I thank the people of Nagaland for blessing the @NDPPofficial–@BJP4Nagaland alliance with yet another mandate to serve the state. The double engine government will keep working for the state's progress. I laud our party workers for their hardwork which ensured this result.
— Narendra Modi (@narendramodi) March 2, 2023
ತ್ರಿಪುರಾ 60 ಸ್ಥಾನ
ಬಿಜೆಪಿ + 33
ಎಡರಂಗ + 14
ಟಿಎಂಪಿ – 13
ನಾಗಾಲ್ಯಾಂಡ್ – 60 ಸ್ಥಾನ
ಬಿಜೆಪಿ+ಎನ್ಡಿಪಿಪಿ – 37
ಎನ್ಪಿಎಫ್ – 02
ಕಾಂಗ್ರೆಸ್ – 00
ಇತರರು – 21
Thank you Tripura! This is a vote for progress and stability. @BJP4Tripura will continue to boost the state's growth trajectory. I am proud of all Tripura BJP Karyakartas for their spectacular efforts at the grassroots.
— Narendra Modi (@narendramodi) March 2, 2023
ಮೇಘಾಲಯ 59 ಸ್ಥಾನ
ಎನ್ಪಿಪಿ -25
ಕಾಂಗ್ರೆಸ್ – 05
ಬಿಜೆಪಿ – 04
ಇತರರು – 25