ಇಂದು ಮುಸ್ಲಿಮರಿಗೆ ಈದ್ ಮಿಲಾದ್ ಹಬ್ಬದ ಸಂಭ್ರಮ. ಈ ದಿನವನ್ನು ಪ್ರವಾದಿ ಮೊಹಮ್ಮದರ ಜನ್ಮ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಇದನ್ನು ಕೆಲವರು ಜನ್ಮ ದಿನವಾಗಿ ಸಂತೋಷ ಸಂಭ್ರಮದಿಂದ ಆಚರಣೆ ಮಾಡಿದ್ರೆ, ಕೆಲವರು ಪ್ರವಚನ, ದಾನ ಧರ್ಮ, ಉಪವಾಸ ಮಾಡುವ ಮೂಲಕ ಆಚರಿಸುತ್ತಾರೆ. ಹೀಗಾಗಿ ಈದ್ ಮಿಲಾದ್ ವಿಶೇಷವಾಗಿ ಸಿಹಿಯಾಗಿ ನೂರಾನಿ ಖೀರ್ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು
* ಹಾಲು – ಮುಕ್ಕಾಲು ಲೀಟರ್
* ಅಕ್ಕಿ ಹಿಟ್ಟು – 3-4 ಟೀ ಚಮಚ
* ಸಕ್ಕರೆ – 3-4 ಚಮಚ
* ಬದಾಮಿ ಪೌಡರ್ – 4 ಚಮಚ
* ಪಿಸ್ತಾ- 1 ಟಿ ಚಮಚ
* ಏಲಕ್ಕಿ ಪೌಡರ್ – ಚಿಟಿಕೆ
* ಕಂಡೆನ್ಸಡ್ ಮಿಲ್ಕ್ – ಅರ್ಧ ಕಪ್
* ಡ್ರೈಫ್ರೂಟ್ಸ್
* ಟೂಟಿಫ್ರೂಟಿ
Advertisement
Advertisement
ಮಾಡುವ ವಿಧಾನ
* ಒಂದು ಬೌಲ್‍ಗೆ ಅಕ್ಕಿಹಿಟ್ಟು, ಬದಾಮಿ ಪೌಡರ್ ಅನ್ನು ಮಿಕ್ಸ್ ಮಾಡಿ ಅದಕ್ಕೆ ಸ್ವಲ್ಪ ನೀರು ಸೇರಿಸಿ 30 ನಿಮಿಷ ತೆಗೆದಿಡಿ..
* ಅರ್ಧಗಂಟೆ ಬಳಿಕ ನಿಮ್ಮ ಮಿಶ್ರಣ ನೀರಿನಲ್ಲಿ ಮೆದು ಆಗಿರುತ್ತದೆ. ಈ ಮಿಶ್ರಣವನ್ನು ಕಾಯಿಸಿ ಆರಿಸಿದ ಹಾಲಿನಲ್ಲಿ ಮಿಕ್ಸ್ ಮಾಡಿ ಎರಡೂ ಬೆರೆತುಕೊಳ್ಳುವಂತೆ ಮಂದ ಉಷ್ಣಾಂಶದಲ್ಲಿ ಕುದಿಸಿರಿ. ಮಿಶ್ರಣ ಪಾತ್ರೆ ತಳಕ್ಕೆ ಹತ್ತಿಕೊಳ್ಳದಂತೆ ಚಮಚದಿಂದ ತಿರುಗುಸುತ್ತಿರಿ. ಹೀಗೆ 15 ನಿಮಿಷ ಈ ಮಿಶ್ರಣವನ್ನು ಕುದಿಸಬೇಕು.
* 15 ನಿಮಿಷದ ಬಳಿಕ ಈ ಮಿಶ್ರಣಕ್ಕೆ ಕಂಡೆನ್ಸಡ್ ಮಿಲ್ಕ್ ಸೇರಿಸಬೇಕು. ನಂತರ ಮತ್ತೆ ಕುದಿಸಬೇಕು. (ಹಾಲು ಕುದಿಯುವಾಗ ಉಕ್ಕದಂತೆ ಮತ್ತು ಪಾತ್ರೆಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಬೇಕು). ಕುದಿಸಿದ ಹಾಲನ್ನು ಒಂದು ಬೌಲ್ ನಲ್ಲಿ ತೆಗೆದಿಟ್ಟುಕೊಳ್ಳಿ.
* ಬಳಿಕ ಮತ್ತೊಂದು ಪ್ಯಾನ್‍ನಲ್ಲಿ ಸಕ್ಕರೆಯನ್ನು ಹಾಕಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಂಡು ಬೇಯಿಸಿ. ನೀರಿನಲ್ಲಿ ಸಕ್ಕರೆ ಸಂಪೂರ್ಣ ಕರಗಿದ ನಂತರ ಗೋಲ್ಡನ್ ಬ್ರೌನ್ ಪಾಕದಂತೆ ಬರುತ್ತದೆ. ಅದನ್ನು ತೆಗೆದಿರಿಸಿದ ಹಾಲಿನ ಮಿಶ್ರಣದ ಮೇಲೆ ಉದುರಿಸಿ. ಡ್ರೈಫ್ರೂಟ್ಸ್, ಟೂಟಿ ಫ್ರೂಟಿ ಹಾಕಿ ಅಲಂಕರಿಸಿ ಸರ್ವ್ ಮಾಡಿ..