ಲಕ್ನೋ: ಸೆಕ್ಯೂರಿಟಿ ಒಬ್ಬರು ಗೇಟ್ ಬಾಗಿಲು ತೆಗೆಯೋದು ತಡವಾಗಿದ್ದಕ್ಕೇ ಕುಡಿದ ಮತ್ತಿನಲ್ಲಿದ್ದ ಮಹಿಳೆ ಸಿಬ್ಬಂದಿಯ ಕಾಲರ್ಪಟ್ಟಿ ಹಿಡಿದು ಎಳೆದಾಡಿದ್ದಾಳೆ. ಬಾಯಿಗೆ ಬಂದಂತೆ ಬೈದಿದ್ದು, ಸಮುದಾಯವನ್ನೂ ನಿಂದಿಸಿದ್ದಾಳೆ.
ಸೆಕ್ಯೂರಿಟಿ ಕಾಲರ್ ಹಿಡಿದು ಎಳೆದಾಡಿ ತನ್ನ ದರ್ಪ ತೋರಿಸಿದ್ದು, ಹಲ್ಲೆಗೂ ಮುಂದಾಗಿರುವ ಘಟನೆ ನೋಯ್ಡಾದ ಜೇಪೆ ಗ್ರೂಪ್ ಸೊಸೈಟಿ ಠಾಣಾ ವ್ತಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸಿನಿಮಾ ನೋಡಿಕೊಂಡು ಬರುತ್ತಿದ್ದಾಗ ಭೀಕರ ಅಪಘಾತ – ನವ ವಿವಾಹಿತೆ ಸ್ಥಳದಲ್ಲೇ ಸಾವು, ಪತಿ ಗಂಭೀರ
अपनी गाड़ी में नोएडा पुलिस के साथ महिला pic.twitter.com/YzF5rrSTNz
— Neetu jha (@ReporterNeetu) August 21, 2022
ಗೇಟ್ ಬಾಗಿಲು ತೆಗೆಯಲು ವಿಳಂಬ ಮಾಡಿದ ಕಾರಣಕ್ಕೆ ಮಹಿಳೆ ಸೆಕ್ಯೂರಿಟಿ ಗಾರ್ಡ್ಗೆ ಬಾಯಿಗೆ ಬಂದಂತೆ ನಿಂಧಿಸಿದ್ದಾಳೆ. ಅಲ್ಲದೇ ಕೊರಳ ಪಟ್ಟಿ ಹಿಡಿದು ಎಳೆದಾಡಿದ್ದಾಳೆ. ಇದೇ ವೇಳೆ ಮಹಿಳೆಯರಿಗೆ ಗೌರವಿಸುವುದನ್ನು ಕಲಿಯಿರಿ ಎಂದು ಉಪದೇಶ ಮಾಡಿದ್ದಾಳೆ. ಜೊತೆಗೆ ಬಿಹಾರದ ಸಮುದಾಯವನ್ನೂ ನಿಂದಿಸಿದ್ದಾಳೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ಗೆ ಜೀವ ಬೆದರಿಕೆ- ಶಿರಚ್ಛೇದನ ಮಾಡುವುದಾಗಿ ಫೇಸ್ಬುಕ್ನಲ್ಲಿ ಪೋಸ್ಟ್
ವೀಡಿಯೋ ಗಮನಿಸಿದ ದೆಹಲಿ ಮಹಿಳಾ ಆಯೋಗದ ಆಯುಕ್ತರಾದ ಸ್ವಾತಿ ಮಾಲಿವಾಲ್ ಅವರು ನೋಯ್ಡಾದ ಪೊಲೀಸರಿಗೆ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಹಿಳೆ ರಂಪಾಟ ಮಾಡಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.