ಡೆಹ್ರಾಡೂನ್: ಕೇದಾರನಾಥ ದೇಗುಲದಲ್ಲಿರುವ ವಿಗ್ರಹವನ್ನು ನಾಯಿಯಿಂದ ಸ್ಪರ್ಶಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನೋಯ್ಡಾದ ವ್ಯಕ್ತಿಯ ವಿರುದ್ಧ ದೇಗುಲ ಸಮಿತಿ ಎಫ್‍ಐಆರ್ ದಾಖಲಿಸಿದೆ.
ನೋಯ್ಡಾದ ವಿಕಾಶ್ ತ್ಯಾಗಿ ಅವರು ಸಾಕಿದ ಹಸ್ಕಿ ಎನ್ನುವ ನಾಯಿಯು ದೇವಾಲಯವನ್ನು ಪ್ರವೇಶಿಸಿತ್ತು. ವಿಕಾಶ್ ತ್ಯಾಗಿ ಅವರು ಚಾರ್‍ಧಾಮ್ ಯಾತ್ರೆಯ ಸಮಯದಲ್ಲಿ ತಮ್ಮ ಮುದ್ದಿನ ನಾಯಿ ಹಸ್ಕಿಯನ್ನು ಕಳೆದ 4 ವರ್ಷಗಳಿಂದ ಪವಿತ್ರ ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಿದ್ದರು.
ಅಷ್ಟೇ ಅಲ್ಲದೇ ದೇವಸ್ಥಾನದ ಹೊರಗಿರುವ ನಂದಿ ವಿಗ್ರಹವನ್ನು ಅದರ ಕಾಲುಗಳಿಂದ ಸ್ಪರ್ಶಿಸಿದ್ದಾರೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಆದರೆ ಘಟನೆಯ ಬಗ್ಗೆ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ಮದ್ವೆಯಾಗಲೆಂದು ಹುಡುಗಿ ನೋಡ್ಕೊಂಡು ಬರಲು ಹೋದ ಯುವಕ ನೀರುಪಾಲು
ಇದು ವಿವಾದವಾಗುತ್ತಿದ್ದಂತೆ ತ್ಯಾಗಿ ಹಸ್ಕಿ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬದರಿನಾಥ್ ಮತ್ತು ತುಂಗನಾಥದಲ್ಲಿ ತಮ್ಮ ನಾಯಿಯ ಹಳೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವೀಡಿಯೋದಲ್ಲಿ ಹಸ್ಕಿಗೆ ಕೇದಾರನಾಥ ದೇಗುಲದಲ್ಲಿ ಅಲ್ಲಿನ ಅರ್ಚಕರೊಬ್ಬರು ತಿಲಕವನ್ನು ಇಟ್ಟಿದ್ದಾರೆ. ಅಷ್ಟೇ ಅಲ್ಲದೇ ದೇವಾಲಯ ಕಮಿಟಿ ವಿರುದ್ಧ ಕಿಡಿಕಾರಿದ್ದಾರೆ.
ಇನ್‍ಸ್ಟಾಗ್ರಾಮ್‍ನಲ್ಲಿ ಏನಿದೆ?:
ನಾನು ಹಸ್ಕಿ ಮತ್ತು ನನಗೆ ಈಗ 4.5 ವರ್ಷ ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಅಪ್‍ಲೋಡ್ ಮಾಡಲಾಗಿದೆ. ನಾನು 4 ವರ್ಷಗಳಲ್ಲಿ ಪ್ರಯಾಣಿಸಿದಷ್ಟು, 70 ವರ್ಷ ವಯಸ್ಸಿನ ವ್ಯಕ್ತಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಏಕೆಂದರೆ ನನ್ನ ಪೋಷಕರು ನನ್ನನ್ನು ಎಲ್ಲೆಡೆ ಕರೆದುಕೊಂಡು ಹೋಗುತ್ತಾರೆ.
View this post on Instagram
ನನ್ನ ತಂದೆ ತಾಯಿಯರು ನನ್ನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದಲ್ಲ. ಆದರೆ ನನ್ನ ಹೆತ್ತವರು ಆ ಸಮಸ್ಯೆಯೊಂದಿಗೆ ಹೋರಾಡುತ್ತಾರೆ. ಆದರೆ ಯಾವಾಗಲೂ ನನ್ನನ್ನು ಕರೆದುಕೊಂಡು ಹೋಗುತ್ತಾರೆ ಎಂದು ಹಸ್ಕಿಯೇ ಹೇಳಿರುವ ರೀತಿಯಲ್ಲಿ ಶೀರ್ಷಿಕೆಯನ್ನು ಹಾಕಿದ್ದಾರೆ. ಇದನ್ನೂ ಓದಿ: ಚಾರ್ ಧಾಮ್ ಯಾತ್ರೆ – ಇಲ್ಲಿ ವರೆಗೆ 46 ಯಾತ್ರಿಕರು ಹೃದಯಾಘಾತದಿಂದ ಸಾವು
ಈ ಬಗ್ಗೆ ಮಾತನಾಡಿದ ಬದರಿನಾಥ್ ಕೆದರನಾಥ್ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್ ಮಾತನಾಡಿ, ಕೋಟಿಗಟ್ಟಲೆ ಜನರು ಬಾಬಾ ಕೇದಾರನಾಥದಲ್ಲಿ ನಂಬಿಕೆ ಹೊಂದಿದ್ದಾರೆ. ಯೂಟ್ಯೂಬರ್ ವಿಕಾಶ್ ತ್ಯಾಗಿಯ ಇಂತಹ ಚಟುವಟಿಕೆಗಳಿಂದ ಅನೇಕರ ಭಾವನೆಗಳಿಗೆ ಘಾಸಿಯಾಗಿದೆ. ಈ ಜನರಿಗೆ ಯಾವುದೇ ಭಕ್ತಿ ಇಲ್ಲ, ಅವರು ಹಿನ್ನೆಲೆಯಲ್ಲಿ ಬಾಲಿವುಡ್ ಹಾಡುಗಳನ್ನು ಪ್ಲೇ ಮಾಡುವ ರೀಲ್‍ಗಳು ಮತ್ತು ವೀಡಿಯೋಗಳನ್ನು ಚಿತ್ರೀಕರಿಸಲು ಮಾತ್ರ ಇಲ್ಲಿಗೆ ಬರುತ್ತಾರೆ. ಬಾಬಾ ಕೇದಾರನಾಥನ ಆಶೀರ್ವಾದ ಪಡೆಯಲು ಬರುವ ಯಾತ್ರಾರ್ಥಿಗಳಿಗೆ ಇದು ಅಡ್ಡಿಯಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.