LatestMain PostNational

ಚಾರ್ ಧಾಮ್ ಯಾತ್ರೆ – ಇಲ್ಲಿಯವರೆಗೆ 46 ಯಾತ್ರಿಕರು ಹೃದಯಾಘಾತದಿಂದ ಸಾವು

ಡೆಹ್ರಾಡೂನ್: ಮೇ 3 ರಂದು ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆ ಪ್ರಾರಂಭವಾದಾಗಿನಿಂದ ದೇಗುಲಗಳಿಗೆ ಹೋಗುವ ಮಾರ್ಗದಲ್ಲಿ ಇಲ್ಲಿವರೆಗೆ 48 ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅವುಗಳಲ್ಲಿ 46 ಜನರು ಹೃದಯಾಘಾತ ಹಾಗೂ ಇತರ ಹೃದಯ ಸಂಬಂಧಿ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕ ರಕ್ತದೊತ್ತಡ, ಹೃದಯಾಘಾತಗಳಿಂದ ಹೆಚ್ಚಿನ ಚಾರ್‌ಧಾಮ್ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಉತ್ತರಾಖಂಡ ಸರ್ಕಾರ ಈ ಹಿಂದೆಯೇ ಯಾತ್ರಾರ್ಥಿಗಳಿಗೆ ಚಾರಣವನ್ನು ಪ್ರಾರಂಭಿಸುವುದಕ್ಕೂ ಮೊದಲು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಸೂಚಿಸಿತ್ತು. ಇದನ್ನೂ ಓದಿ: ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿರುವುದು ಹೆಮ್ಮೆ ಎನಿಸಿತು: ನಿಖತ್ ಜರೀನ್

ಹೆಚ್ಚುತ್ತಿರುವ ಯಾತ್ರಾರ್ಥಿಗಳ ಸಾವಿನ ಹಿನ್ನೆಲೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಯಾತ್ರಾರ್ಥಿಗಳಿಗೆ ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿ, ಬಳಿಕವೇ ತೀರ್ಥಯಾತ್ರೆಗೆ ತೆರಳುವಂತೆ ಮನವಿ ಮಾಡಿದ್ದರು. ಚಾರ್ ಧಾಮ್ ಯಾತ್ರಾ ಸ್ಥಳದಲ್ಲಿ ಅಗತ್ಯ ವಸ್ತುಗಳ ಸೀಮಿತ ವ್ಯವಸ್ಥೆಗಳಿರುವುದರಿಂದ, ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಂಡೇ ಪ್ರಯಾಣವನ್ನು ಪ್ರಾರಂಭಿಸಬೇಕಾಗಿ ಸೂಚನೆ ನೀಡಿದ್ದಾರೆ.

ಶುಕ್ರವಾರ ಉತ್ತರಾಖಂಡ ಸರ್ಕಾರ ಚಾರ್ ಧಾಮ್ ಯಾತ್ರೆಯ ಆಫ್‌ಲೈನ್ ನೋಂದಣಿ ಅವಧಿಯನ್ನು ಒಂದು ತಿಂಗಳಿಂದ ಒಂದು ವಾರಕ್ಕೆ ಕಡಿತಗೊಳಿಸಿದೆ. ಪ್ರಯಾಣದ ಮಾರ್ಗಗಳಲ್ಲಿ ಸುಮಾರು 20 ಸ್ಥಳಗಳಲ್ಲಿ ನೋಂದಣಿ ಮಾಡಲಾಗುತ್ತಿದೆ ಎಂದು ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿ ತಿಳಿಸಿದ್ದಾರೆ. ಇದನ್ನೂ ಓದಿ: ಬಕಲ್‌ ಹಾಕದೇ ISI ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸಿದರೆ 2 ಸಾವಿರ ದಂಡ – ಚೆಕ್‌ ಮಾಡೋದು ಹೇಗೆ?

2 ವರ್ಷಗಳ ಕಾಲ ಕೋವಿಡ್-19 ಕಾರಣದಿಂದಾಗಿ ಚಾರ್ ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಪೂರ್ಣ ಪ್ರಮಾಣದಲ್ಲಿ ಯಾತ್ರೆ ಪ್ರಾರಂಭವಾಗಿರುವುದರಿಂದ ಯಾತ್ರಿಕರ ಸಂಖ್ಯೆಯೂ ಹೆಚ್ಚಾಗಿದೆ.

ಅಕ್ಷಯ ತೃತೀಯ ಹಿನ್ನೆಲೆ ಮೇ 3ರಂದು ಗಂಗೋತ್ರಿ ಹಾಗೂ ಯಮುನೋತ್ರಿ ಪೋರ್ಟಲ್‌ಗಳನ್ನು ತೆರೆಯಲಾಗಿದೆ. ಮೇ 6ರಂದು ಕೇದಾರನಾಥ ಹಾಗೂ ಮೇ 8ರಂದು ಬದರಿನಾಥ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ.

Leave a Reply

Your email address will not be published.

Back to top button