DistrictsLatestLeading NewsMain PostNational

ಬೆಲ್ಟ್‌ ಹಾಕದೇ ISI ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸಿದರೆ 2 ಸಾವಿರ ದಂಡ – ಚೆಕ್‌ ಮಾಡೋದು ಹೇಗೆ?

ನವದೆಹಲಿ: ಬೆಲ್ಟ್‌ ಹಾಕದೇ ಇಂಡಿಯನ್‌ ಸ್ಟ್ಯಾಂಡರ್ಡ್‌ ಇನ್‌ಸ್ಟಿಟ್ಯೂಟ್‌(ಐಎಸ್‌ಐ) ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸಿ  ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿದರೆ ಇನ್ನು ಮುಂದೆ 2 ಸಾವಿರ ರೂ. ದಂಡವನ್ನು ಪಾವತಿಸಬೇಕಾಗುತ್ತದೆ.

ಮೋಟಾರು ವಾಹನ ಕಾಯ್ದೆಯಲ್ಲಿ ದಂಡದ ಮೊತ್ತವನ್ನು ಏರಿಕೆ ಮಾಡಲಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ಮತ್ತು ಸರಿಯಾದ ಹೆಲ್ಮೆಟ್‌ ಧರಿಸದೇ ಇದ್ದಲ್ಲಿ 2 ಸಾವಿರ ರೂ. ದಂಡವನ್ನು ವಿಧಿಸಲಾಗುತ್ತದೆ.

ಯಾವುದಕ್ಕೆ ಎಷ್ಟು ದಂಡ?
ನೀವು ಹೆಲ್ಮೆಟ್ ಧರಿಸಿದ್ದರೂ ಮೋಟಾರ್ ಸೈಕಲ್ ಅಥವಾ ಸ್ಕೂಟರ್ ಓಡಿಸುವಾಗ ಬ್ಯಾಂಡ್/ಬಕಲ್ ಬಿಚ್ಚಿದ್ದರೆ 1,000 ರೂ. ದಂಡ ತೆರಬೇಕಾಗುತ್ತದೆ.

ನಿಮ್ಮ ಹೆಲ್ಮೆಟ್ BSI (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣೀಕರಣವನ್ನು ಹೊಂದಿಲ್ಲದಿದ್ದರೆ ನಿಮಗೆ 1,000 ರೂ. ದಂಡ ವಿಧಿಸಬಹುದು.

ನೀವು ಇತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಉದಾಹರಣೆಗೆ ಹೆಲ್ಮೆಟ್‌ ಧರಿಸಿಯೂ ರೆಡ್‌ ಸಿಗ್ನಲ್‌ ಜಂಪ್‌ ಮಾಡಿದರೆ 2,000 ರೂ. ದಂಡವನ್ನು ವಿಧಿಸಲಾಗುತ್ತದೆ. ಇದನ್ನೂ ಓದಿ: ದೂರು ಪರಿಹರಿಸಿ, ಇಲ್ಲವೇ ದಂಡ ಪಾವತಿಸಿ – ಒಲಾ, ಉಬರ್‌ಗಳಿಗೆ ಸರ್ಕಾರ ವಾರ್ನಿಂಗ್

ಚೆಕ್‌ ಮಾಡುವುದು ಹೇಗೆ?
ನೀವು ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿದ್ದೀರೋ ಇಲ್ಲವೋ ಎನ್ನುವುದನ್ನು ಆನ್‌ಲೈನಿನಲ್ಲೇ ಪರಿಶೀಲನೆ ಮಾಡಬಹುದು.

www.echallan.parivahan.gov.in ತೆರಳಿ ‘Get Challan Detailsʼ ಕ್ಲಿಕ್‌ ಮಾಡಬೇಕು. ಇಲ್ಲಿ ಚಲನ್‌ ನಂಬರ್‌/ ವಾಹನ ಸಂಖ್ಯೆ/ ಡಿಎಲ್‌ ನಂಬರ್‌ ಪೈಕಿ ಒಂದನ್ನು ಆರಿಸಿ ಕಾಣುತ್ತಿರುವ ಕ್ಯಾಪ್ಚವನ್ನು ಎಂಟರ್‌ ಮಾಡಿ ‘Get Detail‘ ಕ್ಲಿಕ್‌ ಮಾಡಬೇಕು. ಉಲ್ಲಂಘನೆ ಮಾಡದೇ ಇದ್ದರೆ ಚಲನ್‌ ನೀಡಿಲ್ಲ ಎಂಬ ಸ್ಟೇಟಸ್‌ ಕಾಣುತ್ತದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದರೆ ದಂಡದ ಮಾಹಿತಿ ಅಲ್ಲಿ ಸಿಗುತ್ತದೆ.  ಇದನ್ನೂ ಓದಿ: ಹರ್ಯಾಣದಲ್ಲಿ ಮಾರುತಿಯಿಂದ ದೊಡ್ಡ ಫ್ಯಾಕ್ಟರಿ – ಸ್ಥಳೀಯರಿಗೆ ಶೇ.75 ಮೀಸಲಾತಿ, ನಿಯಮ ಏನು?

Leave a Reply

Your email address will not be published.

Back to top button