ಬೆಂಗಳೂರು: ಯಾರು ಯಾರ ನಾಯಕತ್ವವನ್ನು ತಪ್ಪಿಸೋಕೆ ಆಗಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮಾಜಿ ಸಿಎಂ ಸಿದ್ದರಾಮಯ್ಯಗೆ (Siddaramaiah) ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಒಂದೇ ಡಿಸಿಎಂ ನಾನೇ ಮಾಡಿಸಿದ್ದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಒಬ್ರೆ ಇದ್ರು. ಇಗಲೂ ಒಬ್ರೆ ಡಿಸಿಎಂ ಇದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ಒಂದೇ ಡಿಸಿಎಂ ಇತ್ತು. ಆಗಲೂ ಹೆಚ್ಚುವರಿ ಡಿಸಿಎಂ ಚರ್ಚೆ ಇತ್ತು. ಈಗಲೂ ಇದೆ, ಆದ್ರೆ ಒಂದೇ ಡಿಸಿಎಂ ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮದ ಇಳಿಸುವ ಶಕ್ತಿ ಬಿಜೆಪಿಗಿದೆ – ಗುಡುಗಿದ ವಿಜಯೇಂದ್ರ
ಹಿಂದೆಯೂ ಒಬ್ಬರೆ ಇದ್ರು. ಈಗಲೂ ಒಬ್ಬರೆ ಡಿಸಿಎಂ ಇದ್ದಾರೆ. ಸಿದ್ದರಾಮಯ್ಯ ಲೀಡರ್‌ಶಿಪ್ ತಪ್ಪಸಲು ಆಗಲಿಲ್ಲ. ಯಡಿಯೂರಪ್ಪ, ದೇವೇಗೌಡ ಕೂಡ ಲೀಡರ್ ಆಗಿದ್ದಾರೆ. ಲೀಡರ್ ಆದ ಮೇಲೆ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
