– ರಾಮಲೀಲಾ ಮೈದಾನದಲ್ಲಿ ಅಣಕು ಮಹಾಭಿಯೋಗ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಸ್ಪಷ್ಟ ತೀರ್ಮಾನವಾಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಇಂಡಿ (INDIA) ಒಕ್ಕೂಟ ನಿರ್ಧಾರ ಕೈಗೊಂಡಿದೆ.
ಮುಂಬರುವ ನವರಾತ್ರಿ ಹಬ್ಬ(Navaratri) ಮುಗಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಬೃಹತ್ ಜನ ಆಂದೋಲನಕ್ಕೆ ವಿಪಕ್ಷಗಳ ಮೈತ್ರಿಕೂಟ ರಣತಂತ್ರ ರೂಪಿಸಿದೆ.
ಮಂಗಳವಾರ ರಾಹುಲ್ ನಿವಾಸದಲ್ಲಿ ನಡೆದ ಇಂಡಿ ಒಕ್ಕೂಟದ ಪ್ರಮುಖ ಸಂಸದರು ಮತ್ತು ಹಿರಿಯ ನಾಯಕರ ಮಹತ್ವದ ಸಭೆಯಲ್ಲಿ ಹೋರಾಟದ ಮುಂದಿನ ಹಂತಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. “ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ಒಗ್ಗಟ್ಟಾಗಿಯೇ ಹೋರಾಟ ಮುಂದುವರಿಸುತ್ತೇವೆ” ಎಂಬ ಸ್ಪಷ್ಟ ಸಂದೇಶವನ್ನು ನಾಯಕರು ಸಾರಿದ್ದಾರೆ. ಸಂಬಂಧ ತಾನು ಸಲ್ಲಿಸಿರುವ ಅರ್ಜಿಯ ಮೇಲಿನ ಸುಪ್ರೀಂ ಕೋರ್ಟ್ನ ನಿಲುವನ್ನು ಕಾದುನೋಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ದಸರಾ, ದುರ್ಗಾಪೂಜೆ ಹಾಗೂ ದೀಪಾವಳಿ ಹಬ್ಬಗಳ ಸಾಲು ಸಮೀಪಿಸುತ್ತಿರುವುದರಿಂದ ಬೃಹತ್ ಜನಸಜ್ಜುಗೊಳಿಸುವಿಕೆಯ ಸಮಯದ ಲೆಕ್ಕಾಚಾರದಲ್ಲಿರುವ ನಾಯಕರು, ಈ ನಡುವೆ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳ ನೇತೃತ್ವದ ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ಮಂಗಳವಾರ ನಡೆದ ಮಹತ್ವದ ಸಮಾಲೋಚನಾ ಸಭೆಯಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ನಾಯಕರು ರಾಮಲೀಲಾ ಮೈದಾನದಲ್ಲಿ ಅಣಕು ಸಂಸತ್ (Mock Parliament) ಆಯೋಜಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಇದರಲ್ಲಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಅಣಕು ಮಹಾಭಿಯೋಗ (Mock Impeachment) ಪ್ರಕ್ರಿಯೆ ನಡೆಸುವ ಚಿಂತನೆ ನಡೆಸಲಾಗಿದ್ದು, ಚುನಾವಣಾ ಆಯೋಗದ ವಿರುದ್ಧದ ತನ್ನ ಆಂದೋಲನವನ್ನು ತೀವ್ರಗೊಳಿಸಲು ವಿಪಕ್ಷಗಳಿಗೆ ಇದು ಹೊಸ ವೇದಿಕೆಯಾಗಲಿದೆ. ಇದನ್ನೂ ಓದಿ: ಸ್ಟಿಂಗ್ ಆಪರೇಷನ್ನ ಸೂತ್ರಧಾರಿ, ಪಾತ್ರಧಾರಿ ಎಲ್ರೂ ಕಾಂಗ್ರೆಸ್ನವರೇ: ಸಿ.ಟಿ ರವಿ
ದೇಶದಲ್ಲಿ ಯಾವುದೇ ಕ್ಷಣದಲ್ಲಾದರೂ ರಾಜಕೀಯ ಬೆಳವಣಿಗೆಗಳು ಸಂಭವಿಸಬಹುದಾಗಿದ್ದು, ಒಗ್ಗಟ್ಟಿನಿಂದ ಹಾಗೂ ತಕ್ಷಣ ಕಾರ್ಯಪ್ರವೃತ್ತರಾಗಲು ಮೈತ್ರಿಕೂಟ ಸಿದ್ಧವಾಗಿರಬೇಕು. ಕೇವಲ 24 ಗಂಟೆಗಳ ತುರ್ತು ನೋಟಿಸ್ನಲ್ಲಿ ದೆಹಲಿಗೆ ತಲುಪಲು ಎಲ್ಲಾ ಇಂಡಿ ನಾಯಕರು ಸನ್ನದ್ಧರಾಗಿರಬೇಕು ಎಂದು ಅವರು ಸೂಚಿಸಿದ್ದಾರೆ.
ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮರುಸ್ಥಾಪಿಸುವ ತನ್ನ ಸ್ಪಷ್ಟ ಗುರಿ ಈಡೇರುವವರೆಗೂ ವಿರೋಧ ಪಕ್ಷಗಳ ಹೋರಾಟ ಮುಂದುವರಿಯಲಿದೆ ಎಂದು ರಾಹುಲ್ ಗಾಂಧಿ ಪುನರುಚ್ಚರಿಸಿದರು.

