-ತನಿಖೆ ಮಾಡಿದ್ರೆ ಡೈರೆಕ್ಟರ್, ಪ್ರೊಡ್ಯೂಸರ್ಗಳು ಅವರೇ ಅಂತ ಗೊತ್ತಾಗುತ್ತೆ
-ಸ್ಟಿಂಗ್ ಬಗ್ಗೆ ಮೊದಲು ಮಾತಾಡಿದ ಡಿಕೆಶಿ ಬ್ರೈನ್ ಮ್ಯಾಪಿಂಗ್ ಮಾಡಬೇಕು
ಬೆಂಗಳೂರು: ಸ್ಟಿಂಗ್ನ ಸೂತ್ರಧಾರಿ, ಪಾತ್ರಧಾರಿ ಎಲ್ರೂ ಕಾಂಗ್ರೆಸ್ನವರೇ. ತನಿಖೆ ಮಾಡಿದ್ರೆ ಡೈರೆಕ್ಟರ್, ಪ್ರೊಡ್ಯೂಸರ್ಗಳು ಅವರೇ ಅಂತ ಗೊತ್ತಾಗುತ್ತೆ ಎಂದು ಮಾಜಿ ಸಚಿವ ಸಿಟಿ ರವಿ (CT Ravi) ಹೇಳಿದ್ದಾರೆ.
ಮುಖ್ಯಮಂತ್ರಿಗಳು ಸ್ಟಿಂಗ್ ಅಂದ ಮೇಲೆ ಯಾರಾದ್ರು ತನಿಖೆ ನಡೆಸಬೇಕಲ್ಲ? ಸಿಬಿಐ (CBI) ತನಿಖೆ ನಡೆಸಿದ್ರೆ ಸೂಕ್ತ ಆಗುತ್ತದೆ. ಆದರೆ ಸ್ಟಿಂಗ್ ಆಪರೇಷನ್ ಬಗ್ಗೆ ಗೃಹ ಸಚಿವರು (Home Minister) ಏನು ಮಾತಾನಾಡುತ್ತಿಲ್ಲ. ಎಲ್ಲಾ ತಿಳಿದು ಅವರು ಏಕೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ಮರ್ಯಾದೆ ಹೋಗುತ್ತೆ ಅಂತಾ ಮಾತನಾಡುತ್ತಿಲ್ಲ. ಗೃಹ ಸಚಿವರು ಇದರ ಬಗ್ಗೆ ಮಾತನಾಡಬೇಕು. ಸಿದ್ದರಾಮಯ್ಯ (Siddaramaiah) ಸಿಎಂ ಸ್ಥಾನದಿಂದ ಇಳಿದ ಮೇಲೆ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಇದರ ಸೂತ್ರದಾರಿ ಹಾಗೂ ಪಾತ್ರದಾರಿಗಳು ಎಲ್ಲರೂ ಕಾಂಗ್ರೆಸ್ನವರೇ ಇದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಹೆಚ್ಡಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 3 ವರ್ಷದಿಂದ ಗ್ಯಾರಂಟಿ ಮೂಲಕ ಬಂದ ಸರ್ಕಾರ. ಆದರೆ ಇದೀಗ ಹಗರಣಗಳ ಗ್ಯಾರಂಟಿಯಾಗಿದೆ. ರಾಜ್ಯದಲ್ಲಿ ಹಗರಣಗಳದೇ ಸದ್ದು ನಡೆಯುತ್ತಿದೆ. ಹೀಗಾಗಿ ಈ ವಿಷಯ ಮುಚ್ಚಿ ಹಾಕಲು ಸ್ಟಿಂಗ್ ಆಪರೇಷನ್ ತಂದಿದ್ದಾರೆ. ಸ್ಟಿಂಗ್ ಆಪರೇಷನ್ ನೈಜ್ಯ ತನಿಖೆ ಮಾಡಿದ್ರೆ ಡೈರೆಕ್ಟರ್, ಪ್ರೊಡ್ಯೂಸರ್ ಎಲ್ಲರೂ ಕಾಂಗ್ರೆಸ್ನವರೇ. ಹೀರೋ, ಹೀರೋಯಿನ್ ಸೇರಿ ಸೈಡ್ ಡೈರೆಕ್ಟರ್ಗಳು ಕಾಂಗ್ರೆಸ್ನವರೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿಕೆಶಿ ಬ್ರೈನ್ ಮ್ಯಾಪಿಂಗ್ ಮಾಡಬೇಕು:
ಇದೇ ವೇಳೆ ಸ್ಟಿಂಗ್ ಆಪರೇಷನ್ ಬಗ್ಗೆ ಇಂದು ಸಿಎಂ ಡಿಕೆಶಿ ಅವರಿಂದ ಸರಣಿ ಸಭೆ ಬಗ್ಗೆ ಮಾತನಾಡಿ, ಹೆಚ್ಚಿನ ಮಾಹಿತಿ ಸಿಎಂ ಅವರಿಗೆ ಗೊತ್ತಿದೆ. ಹೀಗಾಗಿ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಕಾಂಗ್ರೆಸ್ನವರ ಬ್ರೈನ್ ಮ್ಯಾಫಿಂಗ್ ಮಾಡಬೇಕಾಗಿದೆ. ಬೇಕಿದ್ದರೆ ಬಿಜೆಯಿಯವರದ್ದು ಬ್ರೈನ್ ಮ್ಯಾಪಿಂಗ್ ಮಾಡಲಿ. ಸ್ಟಿಂಗ್ ಬಗ್ಗೆ ಡಿಕೆ.ಶಿವಕುಮಾರ್ ಅವರು ಮೊದಲು ಮಾತನಾಡಿದ್ದು. ಹೀಗಾಗಿ ಮೊದಲು ಡಿಕೆಶಿ ಅವರ ಬ್ರೈನ್ ಮ್ಯಾಪಿಂಗ್ ಮಾಡಬೇಕಾಗಿದೆ. ಸ್ಟಿಂಗ್ ಆಪರೇಷನ್ ಇದೀಗ ಅವರ ಕೊರಳಿಗೆ ಸುತ್ತುತ್ತಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ಬಿಹಾ ರದಲ್ಲಿ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ದುರಂತ; 15 ವರ್ಷದೊಳಗಿನ 13 ಮಕ್ಕಳು ಸಾವು
ಎಸ್ಐಆರ್ ಮೂಲಕ ಬಿಜೆಪಿ ವೋಟ್ ಚೋರಿ ಅಂತಾ ಕಾಂಗ್ರೆಸ್ ಆರೋಪ ಪ್ರಕರಣ ಬಗ್ಗೆ ಮಾತನಾಡಿ, ವೋಟ್ ಚೋರಿ ಎಂಬುದು ಕಾಂಗ್ರೆಸ್ನವರ ಸುಳ್ಳು ಆರೋಪ. ವೋಟ್ ಚೋರಿ ಆಗಿದ್ರೆ ಮಲ್ಲಿಕಾರ್ಜುನ ಖರ್ಗೆ ಅಳಿಯ ಹೇಗೆ ಸಂಸದರಾಗುತ್ತಿದ್ದರು. ಎಸ್ಐಆರ್ ಮೂಲಕ ವೋಟ್ ಚೋರಿ ನಡೆದಿಲ್ಲ ಎಂದಿದ್ದಾರೆ.
ಇನ್ನೂ ಹಾಲಿನಿಂದ ಹಿಡಿದು ಎಲ್ಲದರ ದರವನ್ನು ಏರಿಕೆ ಮಾಡಿದ್ದಾರೆ. ಮೂರನೇ ಬಾರಿಗೆ ಹಾಲಿನ ದರ ಏರಿಕೆಗೆ ಮುಂದಾಗಿದೆ. ತೊಗರಿ, ರಾಗಿ ಜೋಳದ ಹಣ ನೀಡಿಲ್ಲ, ರೈತರಿಗೆ ಹಾಲಿನ ಪ್ರೋತ್ಸಾಹ ಹಣ ನೀಡಿಲ್ಲ. ಗುತ್ತಿಗೆ ನೌಕರರಿಗೆ 4 ತಿಂಗಳ ಸಂಬಳವನ್ನ ನೀಡಿಲ್ಲ. ಅಂಗವಿಕಲ, ವೃದ್ದೆ ಹಾಗೂ ವಿಧವಾ ಪಿಂಚಣಿ 8-9 ತಿಂಗಳಿನಿAದ ನೀಡಿಲ್ಲ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ನಕಲಿ ವಿಡಿಯೋ ಹಂಚಿಕೆ: ಸಿಸಿಬಿಯಲ್ಲಿ ಎಫ್ಐಆರ್ ದಾಖಲು, ಇಬ್ಬರು ವಶಕ್ಕೆ
ಸಂಪುಟದಲ್ಲಿ ಜನರ ವಿಷಯ ಚರ್ಚೆ ಆಗಬೇಕು. ಆದರೆ ಭವಿಷ್ಯದ ಕರ್ನಾಟಕದ ಬಗ್ಗೆ ಚರ್ಚೆ ಬಿಟ್ಟು ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ಮಾಡಿರುವುದು ದುರಂತ. ಸಿಎಂ ಅವರು ಸಚಿವರಿಗೆ ಹುಷಾರಾಗಿರಿ ಅಂತಾ ಹೇಳುತ್ತಾರೆ, ಆದರೆ ಮಾಡಬೇಡಿ ಅಂತಾ ಹೇಳಲ್ಲ. ಕ್ಯಾಮರಾ ಕಣ್ಣಿಗೆ ಕಾಣದಂತೆ ನೋಡಿಕೊಳ್ಳಿ ಅಂತಾ ಹೇಳಿ ಸಿಎಂ ಅವರು ಸಲಹೆ ನೀಡಿದ್ದಾರೆ. ಯಾವ ಸಚಿವರಿಗೂ ಸಹ ಮಾಡಬೇಡಿ ಅಂತಾ ಸಿಎಂ ಹೇಳಲಿಲ್ಲ. ಸದ್ಯ 189 ತಾಲೂಕಿನಲ್ಲಿ ಬರ ಇದೆ, ಅದು ಬಿಟ್ಟು ಸ್ಟಿಂಗ್ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚಿಸಿದ್ದಾರೆ. ಒಂದು ವೇಳೆ ರೈತರು ಸರ್ಕಾರದ ವಿರುದ್ಧ ರಸ್ತೆಗಿಳಿದ್ರೆ ಸರ್ಕಾರ ಏನ ಮಾಡುತ್ತೆ ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ಮನ್ಮುಲ್ ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣ – ಮತ್ತೆ ಮೂವರ ಬಂಧನ, 11ಕ್ಕೇರಿದ ಆರೋಪಿಗಳ ಸಂಖ್ಯೆ

