‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದ ನಟಿ ಸನುಷಾ ಗೆ ರೈಲಿನಲ್ಲಿ ಲೈಂಗಿಕ ಕಿರುಕುಳ

Public TV
1 Min Read
SANUSHA

ತಿರುವನಂತಪುರಂ: ಇತ್ತೀಚಿಗೆ ನಟಿ ಅಮಲಾ ಪೌಲ್ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಬ್ಬ ನಟಿಯ ಮೇಲೆ ಲೈಂಗಿಕ ಕಿರುಕುಳ ನಡೆದಿದೆ. ಸಂತೆಯಲ್ಲಿ ನಿಂತ ಕಬೀರ ಚಿತ್ರದ ನಟಿ ಸನುಷ ಸಂತೋಷ್ ಗೆ ರೈಲಿನಲ್ಲಿ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.

23 ವರ್ಷದ ನಟಿ ಸನುಷಾ ಸಂತೋಷ್ ಕನ್ಯಾಕುಮಾರಿಯಿಂದ ತಿರುವನಂತಪುರಂಗೆ ಮಾವೆಲಿ ಎಕ್ಸ್ ಪ್ರೆಸ್‍ನ 2 ಟೈರ್ ಎಸಿ ಕೋಚ್‍ನಲ್ಲಿ ಪ್ರಯಾಣಿಸುತ್ತಿದ್ದರು. ಸನುಷಾ ಮೇಲಿನ ಬರ್ತ್‍ನಲ್ಲಿ ಮಲಗಿದ್ದ ವೇಳೆ ವ್ಯಕ್ತಿಯೊಬ್ಬ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ರೈಲಿನಲ್ಲಿ ನಾನು ನಿದ್ದೆ ಮಾಡುವಾಗ ಯಾರೋ ನನ್ನ ತುಟಿಯ ಮೇಲೆ ಕೈ ಸವರುತ್ತಿದ್ದ. ಕಣ್ಣು ಬಿಟ್ಟು ನೋಡಿದಾಗ ಶಾಕ್ ಆಯ್ತು. ತಕ್ಷಣ ನಾನು ಆತನ ಕೈಯನ್ನು ಬಿಗಿಯಾಗಿ ಹಿಡಿದು, ಆತನ ಬೆರಳುಗಳನ್ನು ತಿರುಚಿದೆ ಎಂದು ಸನುಷಾ ತಿಳಿಸಿದ್ದಾರೆ.

Sanusha Malayalam Actress 8

ನಂತರ ಆತನ ಕೈ ಹಿಡಿದು ಕೆಳಗೆ ಮಲಗಿದ ವ್ಯಕ್ತಿಯ ಸಹಾಯ ಕೇಳಿದೆ. ಆದರೆ ಅವರು ಯಾವುದೇ ಸಹಾಯ ಮಾಡಲಿಲ್ಲ. ನಾನು ಕಿರುಚುತ್ತಿದ್ದರೂ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಈ ಘಟನೆ ಮಧ್ಯರಾತ್ರಿ ಸುಮಾರು 1.10ಕ್ಕೆ ನಡೆದಿದ್ದು, ಸ್ಕ್ರಿಪ್ಟ್ ರೈಟರ್ ಉನ್ನಿ ಹಾಗೂ ರಂಜಿತ್ ಎಂಬ ಮತ್ತೊಬ್ಬ ಪ್ರಯಾಣಿಕರು ಮಾತ್ರ ನನ್ನ ಸಹಾಯಕ್ಕೆ ಬಂದರು ಎಂದು ಸನುಷಾ ಹೇಳಿದ್ದಾರೆ.

download 1

ಸಹಾಯಕ್ಕೆ ಬಂದ ಇಬ್ಬರು ಟಿಟಿಇ (ಟ್ರೈನ್ ಟಿಕೆಟ್ ಎಕ್ಸಾಮಿನರ್)ನನ್ನು ಕರೆಯಲು ಹೋದರು. ನಾನು ಆ ವ್ಯಕ್ತಿಯನ್ನು ಎಲ್ಲಿಯೂ ಹೋಗಲು ಬಿಡಲಿಲ್ಲ. ಟಿಟಿಇ ಬಂದು ಮಾಹಿತಿ ಪಡೆದ ನಂತರ ಮುಂದಿನ ರೈಲ್ವೇ ಸ್ಟೇಷನ್‍ನ ಪೊಲೀಸರಿಗೆ ಮಾಹಿತಿ ತಿಳಿಸಿದರು. ಅರ್ಧ ಗಂಟೆ ಆದ ಮೇಲೆ ನಾವು ತ್ರಿಶೂರ್ ತಲುಪಿದಾಗ ಪೊಲೀಸರು ಆತನನ್ನು ಬಂಧಿಸಿದರು. ಪೊಲೀಸರಿಗೆ ನಾನು ನನ್ನ ಹೇಳಿಕೆ ಕೊಟ್ಟು, ಅದೇ ರೈಲಿನಲ್ಲಿ ನನ್ನ ಪ್ರಯಾಣ ಮುಂದುವರೆಸಿದೆ ಎಂದು ಸನುಷಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಆನ್ಟೋ ಬೋಸ್ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿದ್ದು, ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಹೆಬ್ಬುಲಿ ನಾಯಕಿಯ ಮೇಲೆ ಲೈಂಗಿಕ ಕಿರುಕುಳ

04Sanusha Malayalam Actress 12

Sanusha1

01Sanusha 06 22 Stills 004

sanusha santhosh photo shoot stills 1

Sanusha 2

Share This Article
Leave a Comment

Leave a Reply

Your email address will not be published. Required fields are marked *