ನವದೆಹಲಿ: ಪಾಕಿಸ್ತಾನದಿಂದ ಯಾವುದೇ ಪರಮಾಣು ದಾಳಿಯ ಸೂಚನೆ ಬಂದಿಲ್ಲ, ಅಲ್ಲದೇ ʻಆಪರೇಷನ್ ಸಿಂಧೂರʼ (Operation Sindoor) ಕದನ ವಿರಾಮ ಮಾತುಕತೆಯಲ್ಲಿ ಅಮೆರಿಕದ ಪಾತ್ರ ಎಲ್ಲಿಯೂ ಇಲ್ಲ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಂ ಮಿಸ್ರಿ (Vikram Misri) ಸ್ಪಷ್ಟನೆ ನೀಡಿದ್ದಾರೆ.
ಆಪರೇಷನ್ ಸಿಂಧೂರ ಕದನ ವಿರಾಮ (Ceasefire) ಏರ್ಪಟ್ಟ ಬಳಿಕ ಡೊನಾಲ್ಡ್ ಟ್ರಂಪ್, ಭಾರತ (India) ಮತ್ತು ಪಾಕಿಸ್ತಾನದ (Pakistan) ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷವನ್ನು (Nuclear Conflict) ನಾವು ನಿಲ್ಲಿಸಿದ್ದೇವೆ ಎಂದು ಕ್ರೆಡಿಟ್ ಪಡೆಯಲು ಮುಂದಾಗಿದ್ದರು. ಪದೇ ಪದೇ ಈ ವಿಚಾರವನ್ನು ಒತ್ತಿ ಹೇಳುತ್ತಿದ್ದರು. ಈ ಕುರಿತು ವಿಕ್ರಂ ಮಿಸ್ರಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಭಾರತ, ಪಾಕ್ ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷ ನಿಲ್ಲಿಸಿದ್ದೇವೆ: ಟ್ರಂಪ್
ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯ ಸದಸ್ಯರಿಗೆ ಪಾಕಿಸ್ತಾನದಿಂದ ಯಾವುದೇ ಪರಮಾಣು ದಾಳಿಯ ಸೂಚನೆ ಬಂದಿಲ್ಲ. ಕದನ ವಿರಾಮ ಮನವಿ ಇಸ್ಲಾಮಾಬಾದ್‌ನಿಂದ ಬಂದಿದೆ. ನಿರ್ದಿಷ್ಟವಾಗಿ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ದೆಹಲಿಯಲ್ಲಿರುವ ತಮ್ಮ ಹೈಕಮಿಷನ್ ಕಚೇರಿಯನ್ನ ಸಂಪರ್ಕಿಸಿದ್ದಾರೆ. ಇದರಲ್ಲಿ ಎಲ್ಲಿಯೂ ಅಮೆರಿಕದ ಮಧ್ಯಸ್ಥಿಕೆ ಇರಲಿಲ್ಲ ಎಂದು ಮಿಶ್ರಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ – ಸುಪ್ರೀಂ
ಕಳೆದ ಏಪ್ರಿಲ್ 22ರಂದು ನಡೆದ ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆ ನಡೆಸಿತ್ತು. ಮೇ 7ರ ಮಧ್ಯರಾತ್ರಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) 9 ಉಗ್ರ ನೆಲೆಗಳನ್ನು ಉಡೀಸ್ ಮಾಡಿತ್ತು. ಇದನ್ನೂ ಓದಿ: ಬೆಂಗಳೂರಿನ IISc ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ
ಇದಾದ ಬಳಿಕ ಪಾಕಿಸ್ತಾನ ಮೇ 8, 9 ಮತ್ತು 10 ರಂದು ಭಾರತದ ಸೇನಾ ನೆಲೆಗಳ ಮೇಲೆ ದಾಳಿಗೆ ಯತ್ನಿಸಿತ್ತು. ಆದ್ರೆ ಪಾಕ್‌ನ ಎಲ್ಲ ದಾಳಿಗಳನ್ನು ವಿಫಲಗೊಳಿಸಿದ್ದ ಭಾರತದ ವಾಯುರಕ್ಷಣಾ ವ್ಯವಸ್ಥೆ, ಮರುದಿನವೇ ಪಾಕಿಸ್ತಾನದ ಪ್ರಮುಖ 9 ವಾಯುನೆಲೆಗಳನ್ನ ಧ್ವಂಸಗೊಳಿಸಿತ್ತು, ಕರಾಚಿ ಬಂದರು, ನೂರ್ ಖಾನ್ ವಾಯುನೆಲೆಯ ಮೇಲೂ ದಾಳಿ ಮಾಡಿತ್ತು. ಜೊತೆಗೆ ಪಾಕ್‌ನ ರೆಡಾರ್ ಕೇಂದ್ರವನ್ನೇ ಛಿದ್ರಗೊಳಿಸಿತ್ತು. ಇದರಿಂದ ಕಂಗಾಲಾದ ಪಾಕ್ ಮೇ 10 ರಂದು ಕದನ ವಿರಾಮಕ್ಕೆ ಮನವಿ ಮಾಡಿತು.