ದೊಡ್ಮನೆ ಸ್ಪರ್ಧಿಗಳಿಗೆ ಡಬಲ್ ಧಮಾಕಾ- ಈ ವಾರಾಂತ್ಯ ನೋ ಎಲಿಮಿನೇಷನ್?

Public TV
1 Min Read
bigg boss 1 4

ನ್ನಡದ ಬಿಗ್ ಬಾಸ್ (Bigg Boss Kannada 11)  2 ವಾರಗಳು ಕಳೆದಿವೆ. ಈಗಾಗಲೇ ಸ್ಪರ್ಧಿಗಳ ಮಧ್ಯೆ ಉಳಿವಿಗಾಗಿ ಜಟಾಪಟಿ ನಡೆಯುತ್ತದೆ. 16 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಈ ವಾರ ಬಹುತೇಕರು ನಾಮಿನೇಟ್ ಆಗಿದ್ದು, ಹೊರ ಹೋಗುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಈ ವಾರ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಇದನ್ನೂ ಓದಿ:ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ನಯನತಾರಾ

bigg boss 1 5

ಈ ವಾರ ಕೆಲ ನಿಯಮಗಳನ್ನು ಬ್ರೇಕ್ ಮಾಡಿ ಎಲ್ಲರೂ ನಾಮಿನೇಟ್ ಆದರು. ಬಿಗ್ ಬಾಸ್ ಕೆಂಗಣ್ಣಿಗೆ ಎಲ್ಲರೂ ಗುರಿಯಾದರು. ಆ ನಂತರ ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆಗಲು ಕೆಲವು ಅವಕಾಶ ನೀಡಿದರು ಬಿಗ್ ಬಾಸ್. ಸದ್ಯ ಭವ್ಯಾ ಗೌಡ, ಧನರಾಜ್, ಧರ್ಮ ಕೀರ್ತಿರಾಜ್, ರಂಜಿತ್, ತ್ರಿವಿಕ್ರಮ್, ಮಾನಸಾ, ಐಶ್ವರ್ಯಾ, ಗೋಲ್ಡ್ ಸುರೇಶ್, ಹಂಸಾ, ಅನುಷಾ ರೈ ನಾಮಿನೇಷನ್ ಲಿಸ್ಟ್‌ನಲ್ಲಿ ಇದ್ದಾರೆ. ಹಾಗಾದರೆ ಇವರ ಪೈಕಿ ಹೊರ ಹೋಗುವವರು ಯಾರು? ಈ ಪ್ರಶ್ನೆಗೆ ಉತ್ತರ ಸಿಗಬೇಕು ಎಂದರೆ ಭಾನುವಾರದ ಕಿಚ್ಚನ ಪಂಚಾಯಿತಿ ಎಪಿಸೋಡ್ (ಅ.13) ಪ್ರಸಾರ ಆಗುವವರೆಗೂ ಕಾಯಲೇಬೇಕು.

bigg boss 1 2

ಇನ್ನೂ ಒಟಿಟಿ ಜಿಯೋ ಸಿನಿಮಾದಲ್ಲಿ ಈವರೆಗೆ ಯಾವುದೇ ವೋಟಿಂಗ್ ಲೈನ್ ಬಿಟ್ಟಿಲ್ಲ. ಕಳೆದ ಬಾರಿ ನವರಾತ್ರಿ ಸಂದರ್ಭದಲ್ಲಿ ಬಿಗ್ ಬಾಸ್ ಯಾವುದೇ ಎಲಿಮಿನೇಷನ್ ಮಾಡಿರಲಿಲ್ಲ. ಎಲಿಮಿನೇಷನ್ ಪ್ರಕ್ರಿಯೆ ನಡೆಸಿದ್ದರೂ ಕೊನೆಯಲ್ಲಿ ಡ್ರಾಮಾ ಮಾಡಿ ಸ್ಪರ್ಧಿಗಳನ್ನು ಹಿಂದಕ್ಕೆ ಕರೆಯಲಾಯಿತು. ಈ ಬಾರಿಯೂ ಅದೇ ರೀತಿಯಲ್ಲಿ ನಡೆಯಬಹುದು ಎಂದು ಊಹಿಸಿಲಾಗಿದೆ. ಇನ್ನೊಂದು ಕಡೆ ದೊಡ್ಮನೆ ಆಟ ಶುರು ಆದಾಗ ಇದ್ದ, ಸ್ವರ್ಗ ಮತ್ತು ನರಕದ ಕಾನ್ಸೆಪ್ಟ್ ಅನ್ನೇ ಬಿಗ್ ಬಾಸ್ ಕ್ಲೋಸ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದನ್ನು ಕಾದುನೋಡಬೇಕಿದೆ.

Share This Article