ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು ದೆಹಲಿಗೆ ಭೇಟಿ ನೀಡುವ ಮುನ್ನವೇ ಬಿಜೆಪಿ ಸರ್ಕಾರದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ನಾಯಕ ತೊಳ್ ತಿರುಮಾವಳವನ್ ಅವರ 60ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದ್ರಾವಿಡ ಸಿದ್ಧಾಂತದ ಬಗ್ಗೆ ತಿರುಮಾವಲನ್ ಅವರ ವಿವರಣೆಯೊಂದಿಗೆ ತರ್ಕಿಸಿದರು. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಹೆಡ್ ಕಾನ್ಸ್ಟೇಬಲ್ಗೆ ರೌಡಿಶೀಟರ್‌ನಿಂದ ಚಾಕು ಇರಿತ
Advertisement
Advertisement
ತಿರುಮಾವಲನ್ ಅವರು ಆರ್ಯನಿಸಂಗೆ ವಿರುದ್ಧವಾಗಿರುವುದು ದ್ರಾವಿಡ ಧರ್ಮ ಎಂದು ಒಮ್ಮೆ ಹೇಳಿದ್ದರು, ಅದು ನಿಜವಾದ ಮಾತು ಎಂದು ಶುರು ಮಾಡಿ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಯಾವಾಗಲೂ ತನ್ನ ನೀತಿಗಳ ಮೇಲೆ ಬಲವಾಗಿ ನಿಂತಿರುತ್ತದೆ. ತಿರುಮಾವಲನ್ ಹೇಳಿದಂತೆ ಡಿಎಂಕೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳಲು ಅಲ್ಲಿಗೆ ನಾನು ಹೋಗುತ್ತಿಲ್ಲ. ನಾನು ಕಾವಡಿಗೆ ಒಯ್ಯಲು ದೆಹಲಿಗೆ ಹೋಗುತ್ತಿದ್ದೇನೆ ಎಂದು ಅಂದುಕೊಂಡಿದ್ದೀರಾ? ಕೈಗಳನ್ನು ಕಟ್ಟಿ ಅವರು ಹೇಳುವುದನ್ನು ನಾನು ಕೇಳಲು ಅಲ್ಲಿಗೆ ಹೋಗುತ್ತಿದ್ದೇನೆ ಅಂದುಕೊಂಡಿದ್ದೀರಾ? ನಾನು ಕಲೈಂಞರ್ ಅವರ ಮಗ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಡಿಫರೆಂಟ್ ಕೇಶ ವಿನ್ಯಾಸಕ್ಕೆ ಯುವಕರ ಕ್ಯೂ!
Advertisement
ತಮಿಳುನಾಡಿಗೆ ಕಲ್ಯಾಣ ಯೋಜನೆಗಳನ್ನು ಪಡೆಯಲು ಕೇಂದ್ರ ಸರ್ಕಾರದೊಂದಿಗೆ ಮಾತನಾಡುವ ಜವಾಬ್ದಾರಿಯನ್ನು ಹೊಂದಿರುವುದರಿಂದ ದೆಹಲಿಗೆ ಹೋಗುತ್ತಿದ್ದೇನೆ. ಈ ಸಂಬಂಧವು ಕೇವಲ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಮಾತ್ರ. ಆದರೆ ಡಿಎಂಕೆ ಮತ್ತು ಬಿಜೆಪಿಯ ನಡುವೆಯಲ್ಲ. ಡಿಎಂಕೆ ಮತ್ತು ಬಿಜೆಪಿ ಸಿದ್ಧಾಂತಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಭರವಸೆ ನೀಡಿದ್ದಾರೆ.