Bengaluru CityDistrictsKarnatakaLatestMain Post

ಡಿಫರೆಂಟ್ ಕೇಶ ವಿನ್ಯಾಸಕ್ಕೆ ಯುವಕರ ಕ್ಯೂ!

ಬೆಂಗಳೂರು: ಪ್ರತಿಭೆ ಯಾರಪ್ಪನ ಸ್ವತ್ತಲ್ಲ ಎಂಬುದಕ್ಕೆ ಈ ಯುವಕನೇ ಸಾಕ್ಷಿ. ಒಂದು ಸಲ ಫೋಟೋ ನೋಡಿದ್ರೆ ಸಾಕು, ಥೇಟ್ ಆ ಚಿತ್ರದಲ್ಲಿರುವಂತೆ ಭಾವಚಿತ್ರವನ್ನ ಮೂಡಿಸ್ತಾರೆ.

ಹೌದು. ಜಕ್ಕೂರಿನ ಸ್ಪಿನ್ ಹೈ ಟೆಕ್ ಸಲೂನ್‍ನಲ್ಲಿ ಕೆಲಸ ಮಾಡುವ ರಮೇಶ್, ತಲೆಯ ಹಿಂಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರಬೋಸ್‍ರ ಭಾವಚಿತ್ರ ಬಿಡಿಸಿ ತನ್ನ ಕಲೆಯನ್ನ ವ್ಯಕ್ತಪಡಿಸಿದ್ದಾರೆ. ಇದೀಗ ಈ ಭಾವಚಿತ್ರಕ್ಕೆ ಇದೀಗಾ ಫುಲ್ ಡಿಮ್ಯಾಂಡ್ ಶುರುವಾಗಿದ್ದು, ನಮ್ಮ ಮಕ್ಕಳಿಗೂ ಈ ರೀತಿಯ ಕೇಶವಿನ್ಯಾಸ ಮಾಡಿ ಅಂತ ಸಾಕಷ್ಟು ಗ್ರಾಹಕರು ಬರ್ತಿದ್ದಾರಂತೆ.

ಅಂದಹಾಗೆ 75ನೇ ಸ್ವಾತಂತ್ರ್ಯೋತ್ಸವದ ವಿಶೇಷಕ್ಕೆ ಈ ಕೇಶವಿನ್ಯಾಸ ಮಾಡಿರುವ ರಮೇಶ್, ಈ ವಿನ್ಯಾಸಕ್ಕಾಗಿಯೇ 1 ರಿಂದ ಒಂದೂವರೆ ಗಂಟೆ ಸಮಯ ತಗೆದುಕೊಂಡಿದ್ದಾರೆ. ಒಂದೇ ಒಂದು ಸಲ ಫೋಟೋ ನೋಡಿ, ಅದರಂತೆಯೇ ಥೇಟ್, ಕೇಶ ವಿನ್ಯಾಸ ಮಾಡಿ ತನ್ನ ಕಲೆಯನ್ನ ತೋರಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ತಲುಪಿರುವ ಹಡಗು ಯಾವುದೇ ದೇಶಗಳಿಗೂ ತೊಂದರೆ ಕೊಡಲ್ಲ: ಚೀನಾ

ಈ ಸಂಬಂಧ ಸಲೂನ್‍ನ ಸಹದ್ಯೋಗಿ ಐಶ್ವರ್ಯಾ ಮಾತನಾಡಿ, ರಮೇಶ್ 6 ವರ್ಷದಿಂದ ವೃತ್ತಿ ಮಾಡ್ತಿದ್ದಾರೆ. ಅಮೃತ ಮಹೋತ್ಸವಕ್ಕೆ 10ಕ್ಕೂ ಹೆಚ್ಚು ಗ್ರಾಹಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನ ಕೇಶವಿನ್ಯಾಸ ಮಾಡಿದ್ದಾರೆ. ಈ ಹಿಂದೆ ಭಗತ್ ಸಿಂಗ್, ಮಹಾತ್ಮ ಗಾಂಧಿ ಸೇರಿ ಕೆಲ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನ ಮೂಡಿಸಿದ್ದರು. ನಮ್ಮ ಕಂಪನಿಯ ಸಹೋದ್ಯೋಗಿ ತನ್ನ ಕಲೆಯನ್ನ ರಾಷ್ಟ್ರಭಕ್ತರ ಭಾವಚಿತ್ರಗಳನ್ನ ಮೂಡಿಸುವ ಮೂಲಕ ವ್ಯಕ್ತಪಡಿಸ್ತಿರೋದು ಖುಷಿಯಾಗುತ್ತೆ ಎಂದರು.

ಒಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕಲೆಯಿರುತ್ತೆ. ರಮೇಶ್ ಕೂಡ ತನ್ನ ವೃತ್ತಿಯಲ್ಲಿ ತನ್ನ ಪ್ರತಿಭೆಯನ್ನ ತೋರಿಸಿದ್ದು, ಮುಂದಿನ ದಿನಗಳಲ್ಲಿ ಪುನೀತ್, ವಿಷ್ಣುವರ್ಧನ್, ಅಂಬರೀಶ್‍ರ ಭಾವಚಿತ್ರಗಳನ್ನ ಬಿಡಿಸುವ ಸಿದ್ಧತೆಯಲ್ಲಿದ್ದಾರೆ. ಅದೇನೆ ಆಗ್ಲಿ, ತನ್ನ ದೇಶಭಕ್ತಿ, ರಾಷ್ಟ್ರಪ್ರೇಮವನ್ನ ತನ್ನ ಕಲೆಯ ಮೂಲಕ ತೋರಿಸಿದ್ದು ಮಾತ್ರ ವಿಶೇಷ.

Live Tv

Leave a Reply

Your email address will not be published.

Back to top button