CrimeDistrictsKarnatakaLatestMain Post

ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಹೆಡ್ ಕಾನ್ಸ್​ಟೇಬಲ್​ಗೆ ರೌಡಿಶೀಟರ್‌ನಿಂದ ಚಾಕು ಇರಿತ

ಬೆಂಗಳೂರು: ಮಹಿಳಾ ಕಾನ್ಸ್​ಟೇಬಲ್​ಗೆ ರೌಡಿಶೀಟರ್ ಓರ್ವ ಚಾಕು ಇರಿದಿರುವ ಘಟನೆ ನಗರ ಹೆಎಎಲ್ ಠಾಣಾ ವ್ಯಾಪ್ತಿಯ ಜ್ಯೋತಿ ನಗರದಲ್ಲಿ ಘಟನೆ ನಡೆದಿದೆ.

ವಿನುತಾ ಚಾಕು ಇರಿತಕ್ಕೊಳಗಾದ ಹೆಡ್ ಕಾನ್ಸ್​ಟೇಬಲ್​ ಎಂದು ಗುರುತಿಸಲಾಗಿದ್ದು, ರೌಡಿಶೀಟರ್ ಶೇಖ್ ಷರೀಫ್ ಈ ಕೃತ್ಯವನ್ನು ಎಸಗಿದ್ದಾನೆ. ಆಗಸ್ಟ್ 5 ರಂದು ಆರೋಪಿಯನ್ನು ಬಂಧಿಸಲು ವಿನುತಾ ಹೋಗಿದ್ದರು. ಈ ವೇಳೆ ಕಾನ್ಸ್​ಟೇಬಲ್‍ಗೆ ಆರೋಪಿ ಚಾಕು ಇರಿದಿದ್ದಾನೆ.

ಇತ್ತೀಚೆಗಷ್ಟೇ ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿದ್ದ ಆರೋಪಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದನು. ಅಲ್ಲದೇ ಮತ್ತೆ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ ಎಂಬ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ಆತನನ್ನು ಠಾಣೆಗೆ ಕರೆತರಲು ಆಗಸ್ಟ್ 5 ರಂದು ಮಹಿಳಾ ಹೆಡ್‍ ಕಾನ್ಸ್​ಟೇಬಲ್​ ವಿನುತಾ ಹಾಗೂ ತಂಡ ಹೋಗಿತ್ತು. ಇದನ್ನೂ ಓದಿ: ಶ್ರೀಲಂಕಾ ತಲುಪಿರುವ ಹಡಗು ಯಾವುದೇ ದೇಶಗಳಿಗೂ ತೊಂದರೆ ಕೊಡಲ್ಲ: ಚೀನಾ

ಆರೋಪಿ ಜ್ಯೋತಿನಗರದಿಂದ ರೆಡ್ಡಿ ಪಾಳ್ಯಕ್ಕೆ ತೆರಳುತ್ತಿರುವ ಬಗ್ಗೆ ಮಾಹಿತಿ ದೊರೆತ ಪೊಲೀಸರು, ಮಾಹಿತಿ ಆಧಾರದ ಮೇಲೆ ರಾತ್ರಿ 9.30ಕ್ಕೆ ಆತನನ್ನು ಕರೆದುಕೊಂಡು ಹೋಗಲು ತಂಡ ಮುಂದಾಗಿದೆ. ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದನು. ಆದರೆ ಸ್ಥಳೀಯರ ಸಹಾಯದಿಂದ ಆತನ್ನನ್ನು ಹಿಡಿದು ಠಾಣೆಗೆ ಕರೆತರಲಾಯಿತು. ಘಟನೆ ನಂತರ ಚಿಕಿತ್ಸೆ ಪಡೆದು ಇದೀಗ ಚೇರಿಸಿಕೊಂಡಿರುವ ಕಾನ್ಸ್​ಟೇಬಲ್​, ಆರೋಪಿ ವಿರುದ್ಧ ಐಪಿಸಿ 307, 353, 354 ಅಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಕೈ ನಾಯಕರಿಗೆ ನಾರ್ಥ್ ಸೌತ್ ತಂತ್ರ ಕಿರಿಕಿರಿ- ರಾಹುಲ್ ಗಾಂಧಿ ತಂತ್ರಗಾರಿಕೆಗೆ ತೀವ್ರ ಅತೃಪ್ತಿ

Live Tv

Leave a Reply

Your email address will not be published.

Back to top button