ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರಿಗೆ ನಾರ್ಥ್-ಸೌಥ್ ಸ್ಟ್ರಾಟಜಿ ಕಿರಿಕಿರಿ ಎದುರಾಯ್ತಾ ಅನ್ನೋ ಪ್ರಶ್ನೆ ಎದ್ದಿದೆ. ರಾಹುಲ್ ಗಾಂಧಿಯ ಸ್ಟ್ರಾಟಜಿ ಟೀಂ ಕಿರಿಕಿರಿಗೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ.
Advertisement
ಚುನಾವಣಾ ಸಿದ್ಧತೆಯ ಪ್ರತಿಸಭೆಗೂ ಎಐಸಿಸಿ ಸ್ಟ್ರಾಟಜಿ ಟೀಮ್ ಜೊತೆಗಿಟ್ಟುಕೊಳ್ಳಲು ಎಐಸಿಸಿ ಸೂಚಿಸಿದ್ಯಂತೆ. ಆದರೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಲೆಕ್ಕಾಚಾರಗಳೇ ಬೇರೆ. ರಾಜ್ಯದ ಮಟ್ಟಿಗೆ ಪಕ್ಷದ ಸಭೆಯಲ್ಲಿ ಹೊರಗಿನ ಹಸ್ತಕ್ಷೇಪ ಬೇಡ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: `ಮುಸ್ಲಿಂ’ ಏರಿಯಾದಲ್ಲಿ ಸಾವರ್ಕರ್ ಫೋಟೋ ಬೇಕಿತ್ತಾ..? – ಸಿದ್ದರಾಮಯ್ಯ ಹೇಳಿಕೆ ಫುಲ್ ವೈರಲ್
Advertisement
Advertisement
ರಾಹುಲ್ ಹೇಳಿದ್ದಾರೆ ಎಐಸಿಸಿ ಸ್ಟ್ರಾಟಜಿ ಟೀಂ ಜೊತೆಗೆ ಮುಂದುವರಿಯುವಂತೆ ಸುರ್ಜೆವಾಲ ಸಹ ನಿನ್ನೆಯ ಸಭೆಯಲ್ಲಿ ಸೂಚಿಸಿದ್ದಾರೆ. ಈ ಹಿಂದೆ ಪ್ರಶಾಂತ್ ಕಿಶೋರ್ ಟೀಂನಲ್ಲಿದ್ದ ಸುನೀಲ್ ಕುನಗೋಳು ಎಐಸಿಸಿ ಸ್ಟ್ರಾಟಜಿ ಟೀಂ ಪರವಾಗಿ ಕೆಪಿಸಿಸಿಗೆ ಕೆಲಸ ಮಾಡ್ತಿದ್ದಾರೆ. ಅವರ ಸಲಹೆ ಪಾಲಿಸಲು ಎಐಸಿಸಿ ಸೂಚನೆ ನೀಡಿದೆ ಎಂಬುದಾಗಿ ತಿಳಿದುಬಂದಿದೆ.
Advertisement
ಸುರ್ಜೆವಾಲ ಸೂಚನೆಗೆ ಸಿದ್ದರಾಮಯ್ಯ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದು, ನಮ್ಮ ರಾಜ್ಯದಲ್ಲಿ ನಮ್ಮದೇ ಲೆಕ್ಕಾಚಾರ ಬಿಟ್ಟು ಇನ್ಯಾರದೋ ತಂತ್ರಗಾರಿಕೆ ಯಾಕೆ ಬೇಕು ಎಂದು ಅಸಮಧಾನ ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮದರಸಾಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಕಡ್ಡಾಯ – ಶೀಘ್ರವೇ ಸರ್ಕಾರದ ಆದೇಶ ಸಾಧ್ಯತೆ