ಮುಂಬೈ: ಶಿವಸೇನಾ ಸ್ಥಾಪಕ ಬಾಳಾಸಾಹೇಬ್ ಅವರ ಮೇಲಿನ ಗೌರವದಿಂದಾಗಿ ಆದಿತ್ಯ ಠಾಕ್ರೆ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಶಿವಸೇನಾದ ಏಕನಾಥ್ ಶಿಂಧೆ ಬಣ ತಿಳಿಸಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣ ಗೆಲುವು ಸಾಧಿಸಿದ್ದು, ಸರ್ಕಾರವನ್ನು ಬೆಂಬಲಿಸಲು ವಿಪ್ ಧಿಕ್ಕರಿಸಿದ ಉದ್ಧವ್ ಠಾಕ್ರೆ ಬಣದ 16 ಶಾಸಕರನ್ನು ಅಮಾನತುಗೊಳಿಸುವಂತೆ ನೂತನವಾಗಿ ಆಯ್ಕೆಯಾದ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಮನವಿ ಸಲ್ಲಿಸಿದೆ. ಇದನ್ನೂ ಓದಿ: ಮಹಾ ಹೈಡ್ರಾಮಾ ಅಂತ್ಯ – ವಿಶ್ವಾಸ ಪರೀಕ್ಷೆ ಗೆದ್ದ ಏಕನಾಥ್ ಶಿಂಧೆ
Advertisement
Advertisement
ಆದಿತ್ಯ ಠಾಕ್ರೆ ಹೊರತುಪಡಿಸಿ ನಮ್ಮ ವಿಪ್ ಧಿಕ್ಕರಿಸಿದಸಿದವರನ್ನು ಅನರ್ಹಗೊಳಿಸುವಂತೆ ನಾವು ನೋಟಿಸ್ ನೀಡಿದ್ದೇವೆ. ಬಾಳಾಸಾಹೇಬ್ ಠಾಕ್ರೆ ಅವರ ಮೇಲಿನ ಗೌರವದ ಕಾರಣದಿಂದ ನಾವು ಆದಿತ್ಯ ಠಾಕ್ರೆ ಹೆಸರನ್ನು ನೀಡಿಲ್ಲ ಎಂದು ಶಿಂಧೆ ಬಣದ ಶಾಸಕ ಭರತ್ ಗೊಗವಾಲೆ ತಿಳಿಸಿದ್ದಾರೆ.
Advertisement
ಪಕ್ಷದ ಮೂರನೇ ಎರಡರಷ್ಟು ಶಾಸಕರ ಬೆಂಬಲದ ಆಧಾರದ ಮೇಲೆ ಶಿಂಧೆ ಬಣ ನಮ್ಮದು ನಿಜವಾದ ಶಿವಸೇನಾ ಎಂದು ಹೇಳಿಕೊಂಡಿದೆ. ಶಿವಸೇನಾದ 40 ಶಾಸಕರು ಬಂಡಾಯವೆದ್ದಿದ್ದ ಶಿಂಧೆ ಬಣವನ್ನು ಸೇರಿದ್ದಾರೆ. ಸೇನಾ ಬಂಡಾಯ ಶಾಸಕರೂ ಸೇರಿ ಶಿಂಧೆ ಬಣವನ್ನು ಒಟ್ಟು 55 ಶಾಸಕರು ಸೇರಿದ್ದರು. ಇದನ್ನೂ ಓದಿ: ಪಾಪುವಿನಂತೆ ರಾಹುಲ್ ಗಾಂಧಿಯನ್ನು ಮುದ್ದು ಮಾಡಿದ ಅಜ್ಜಿ
Advertisement
ನಮ್ಮ ನಿಲುವು ಬಾಳಾಸಾಹೇಬ್ ಠಾಕ್ರೆಯವರ ಪರಂಪರೆಗೆ ಗೌರವ ಸಲ್ಲಿಸಿದೆ. ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪಕ್ಷವನ್ನು ದುರ್ಬಲಗೊಳಿಸಿದ್ದಾರೆ ಎಂದು ಶಿಂಧೆ ಬಣದವರು ವಾದಿಸಿದ್ದಾರೆ.