LatestMain PostNational

ಪಾಪುವಿನಂತೆ ರಾಹುಲ್ ಗಾಂಧಿಯನ್ನು ಮುದ್ದು ಮಾಡಿದ ಅಜ್ಜಿ

Advertisements

ತಿರುವನಂತಪುರಂ: ವೃದ್ಧೆಯೊಬ್ಬರು ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ಅವರನ್ನು ಹೋಟೆಲ್‌ವೊಂದರಲ್ಲಿ ಮಗುವಿನಂತೆ ಮುದ್ದಾಡಿದ ವೀಡಿಯೋ ವೈರಲ್ ಆಗುತ್ತಿದೆ.

ಕೇರಳದ ವಯನಾಡುವಿನ ಹೋಟೆಲ್‍ವೊಂದಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದರು. ಅಲ್ಲಿ ಪಕ್ಷದ ಹಿರಿಯ ಮುಖಂಡ ಕೆ.ಸಿ ವೇಣುಗೋಪಾಲ್ ಜೊತೆ ಮಾತನಾಡುತ್ತಿದ್ದರು. ಆಗ ಅಲ್ಲೇ ಇದ್ದ ವೃದ್ಧೆಯೊಬ್ಬರಿಗೆ ರಾಹುಲ್ ಗಾಂಧಿ ತಮ್ಮ ತಟ್ಟೆಯಲ್ಲಿದ್ದ ಆಹಾರವನ್ನು ನೀಡಿದ್ದಾರೆ. ಇದರಿಂದಾಗಿ ಖುಷಿಯಾದ ವೃದ್ಧೆಯು ತಬ್ಬಿಕೊಂಡು ಹಾರೈಸಿದ್ದಾರೆ.

ಈ ವೀಡಿಯೋವನ್ನು ಕಾಂಗ್ರೆಸ್‍ ಅಧಿಕೃತ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಅವರ ಬಳಿ ವೃದ್ಧೆ ನಮ್ಮೊಂದಿಗೆ ಏಕೆ ಕುಳಿತುಕೊಳ್ಳಬಾರದು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಫೇಕ್ ವೀಡಿಯೋ ವೈರಲ್ – ಬಿಜೆಪಿ ಶಾಸಕರ ವಿರುದ್ಧ ಎಫ್‍ಐಆರ್

ಆಗ ಕೆಸಿ ವೇಣುಗೋಪಾಲ್ ತಮ್ಮ ಟೇಬಲ್ ಮೇಲಿದ್ದ ತಟ್ಟೆಯಿಂದ ಆಹಾರವನ್ನು ತೆಗೆದು ಆಕೆಯ ಕೈಗೆ ಕೊಟ್ಟಿದ್ದಾರೆ. ಇದೇ ರೀತಿ ರಾಹುಲ್ ಗಾಂಧಿ ಅವರು ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಸಂತೋಷಗೊಂಡ ವೃದ್ಧೆ ಪ್ರೀತಿಯಿಂದ ರಾಹುಲ್‍ಗಾಂಧಿಯನ್ನು ತಬ್ಬಿ ಹಾರೈಸುತ್ತಾರೆ. ಇದನ್ನೂ ಓದಿ: ಮದುವೆಯಾಗಿ ನವವಧುವನ್ನು ಸೇನಾ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದ ತಾಲಿಬಾನ್‌ ಕಮಾಂಡರ್‌

Live Tv

Leave a Reply

Your email address will not be published.

Back to top button