ಅಭಿಮಾಗಳಿಗೆ ಶಿವಣ್ಣ ವಾರ್ನಿಂಗ್ – ಯೂಟ್ಯೂಬ್ ನಂ.1 ಟ್ರೆಂಡಿಂಗ್ ನಲ್ಲಿ ದಿ-ವಿಲನ್ ಟೀಸರ್

Public TV
2 Min Read
Villan 7

ಬೆಂಗಳೂರು: ‘ದಿ ವಿಲನ್’ ಸಿನಿಮಾ ಚಿತ್ರತಂಡ ಸೋಮವಾರ ಸಂಜೆ 7 ಗಂಟೆಗೆ ಟೀಸರ್ ಬಿಡುಗಡೆ ಮಾಡಿದ್ದು, ಇದೀಗ ಯೂ ಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ವಿಡಿಯೋವಾಗಿದೆ. ಟೀಸರ್ ಬಿಡುಗಡೆ ಸುದ್ದಿಗೋಷ್ಟಿಯಲ್ಲಿ `ಸಿನಿಮಾವನ್ನು ಸಿನಿಮಾದಂತೆ ನೋಡಿ’ ಎಂದು ಹೇಳುವ ಮೂಲಕ ಶಿವಣ್ಣ ಅವರು ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ.

ದಿ ವಿಲನ್ ಸಿನಿಮಾದ ಬಿಡುಗಡೆಗೆ ದಿನಗಣನೇ ಶುರುವಾಗಿದ್ದು, ರಿಲೀಸ್ ಮುನ್ನ ಚಿತ್ರತಂಡ ಸಿನಿಮಾದ ನಾಲ್ಕು ಟೀಸರ್‌ಗಳನ್ನು ನಿದೇರ್ಶಕ ಪ್ರೇಮ್ ಅವರು ಬಿಡುಗಡೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಯೂಟ್ಯೂಬ್ ನಲ್ಲಿ ಸಖತ್ ಮಿಂಚುತ್ತಿದೆ.

THE VILLEN 1

ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಕಿಚ್ಚ ಸುದೀಪ್ ಅಭಿನಯದ ದಿ-ವಿಲನ್ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡುತ್ತಿದ್ದಂತೆ 8 ಲಕ್ಷದ 50 ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. ಈ ವಿಡಿಯೋದಲ್ಲಿ ಶಿವಣ್ಣ ಅವರ ಡೈಲಾಗ್‍ಗಳಿಗೆ ಈಗಾಗಲೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೇ ದಿ ವಿಲನ್ ಸಿನಿಮಾದಲ್ಲಿ ಶಿವಣ್ಣ ಅವರ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸುದೀಪ್ ಅವರು ದಿ ವಿಲನ್ ಅಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರತಂಡ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಅಕ್ಟೋಬರ್ 18 ರಂದು ದಿ ವಿಲನ್ ಸಿನಿಮಾ ತೆರೆ ಮೇಲೆ ಮಿಂಚಲು ಸಜ್ಜಾಗಿದೆ.

Shiva Rajkumar 0

ಶಿವಣ್ಣ ವಾರ್ನಿಂಗ್:
ಸೋಮವಾರ ನಡೆದ ದಿ ವಿಲನ್ ಸಿನಿಮಾ ಸುದ್ದಿಗೋಷ್ಟಿಯಲ್ಲಿ ಅಭಿಮಾನಿಗಳಿಗೆ ಶಿವಣ್ಣ ಅವರು ವಾರ್ನಿಂಗ್ ಮಾಡಿದ್ದು, ಈ ತಿಂಗಳು 18 ಕ್ಕೆ ‘ದಿ ವಿಲನ್’ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಸಿನಿಮಾವನ್ನ ಸಿನಿಮಾ ಥರ ನೋಡಿ. ನಾವು ಇಂಡಸ್ಟ್ರಿಯಲ್ಲಿ ಎಲ್ಲರೂ ಒಂದೇ. ನಾನು ಸುದೀಪ್ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ದೇವೆ. ನಾವು ಹೆಚ್ಚು ಅವರು ಕಮ್ಮಿ ಅಂತ ಜಗಳ ತೆಗೆಯಬೇಡಿ. ಅಭಿಮಾನಿಗಳಿಗೆ ಹೇಳುತ್ತಿದ್ದೇನೆ, ಯಾವುದೇ ಕಾರಣಕ್ಕೂ ಗಲಾಟೆಗೆ ಅವಕಾಶ ಕೊಡಬೇಡಿ. ನಾವು ಆ ಗಲಾಟೆ ಈ ಗಲಾಟೆ ಅಂತ ಸುದ್ದಿಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದೇವೆ. ಥಿಯೇಟರ್‌ಗೆ ಹೋಗಿ ನಿಮ್ಮ ಜೊತೆ ನಾನೇ ಬರುತ್ತೇನೆ ಸಿನಿಮಾವನ್ನ ಸಿನಿಮಾ ರೀತಿ ನೋಡಿ ಎಂದು ಖಡಕ್ ಸೂಚನೆ ನೀಡಿದರು.

311416

ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಿ ಸಿಸಿಮಾಗಳಂತಹ ಸೂಪರ್ ಡೂಪರ್ ಹಿಟ್ ಕೊಟ್ಟಂತ ನಿರ್ದೇಶಕ ಪ್ರೇಮ್, ಶಿವಣ್ಣ ಹಾಗೂ ಕಿಚ್ಚ ಸುದೀಪ್‍ರನ್ನು ಹಾಕಿಕೊಂಡು ದಿ ವಿಲನ್ ಸಿನಿಮಾವನ್ನು ಮಾಡಿದ್ದು, ಜನರಲ್ಲಿ ಕುತೂಹಲದ ಮಳೆಯನ್ನೇ ಸುರಿಸುತ್ತಿತ್ತು. ದಿ ವಿಲನ್ ಸಿನಿಮಾಕ್ಕೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿದ್ದು, ಸಿ.ಆರ್ ಮನೋಹರ್ ನಿರ್ಮಾಣ ಮಾಡಿದ್ದಾರೆ. ಸುದೀಪ್, ಶಿವಣ್ಣ, ಆಮಿ ಜಾಕ್ಸನ್ ಜೊತೆಯಲ್ಲಿ ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಸೇರಿದಂತೆ ಹಲವರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=_OPq9iESM-4

Share This Article
Leave a Comment

Leave a Reply

Your email address will not be published. Required fields are marked *