ಗಾಂಧಿನಗರ: ಯೂಟ್ಯೂಬ್ ವೀಡಿಯೋಗಳಿಂದ ಲಕ್ಷ ಲಕ್ಷ ಗಳಿಸುತ್ತಿದ್ದೇನೆ ಎಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿಕೊಂಡಿದ್ದಾರೆ.
ಯುಟ್ಯೂಬ್‍ನಿಂದ ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿರುವ ವೀಡಿಯೋ ಉಪನ್ಯಾಸಗಳ ವೀಕ್ಷಣೆಯು ಕೋವಿಡ್19 ಸಾಂಕ್ರಾಮಿಕದ ಸಂದರ್ಭದಲ್ಲಿ ಏರಿಕೆಯಾಗಿದ್ದು, ಯುಟ್ಯೂಬ್‍ನಿಂದ ತಿಂಗಳಿಗೆ ಗೌರವಧನದ ರೂಪದಲ್ಲಿ 4 ಲಕ್ಷ ರೂಪಾಯಿ ಪಡೆಯುತ್ತಿರುವುದಾಗಿ ನಿತಿನ್ ಗಡ್ಕರಿ ಹೇಳಿದ್ದಾರೆ.
Advertisement
The two-day aerial survey of #DelhiMumbaiExpressway has been completed. After thoroughly inspecting the highway, I am confident that the road will become an icon of #NewIndia and will open endless opportunities for millions of people. #PragatiKaHighway pic.twitter.com/0OC0ERouOZ
— Nitin Gadkari (@nitin_gadkari) September 17, 2021
Advertisement
ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ಗಡ್ಕರಿ ಅವರು ಎರಡು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿದ್ದಾರೆ. ನಾನು ಬಾಣಸಿಗನಾಗಿ ಮನೆಯಲ್ಲಿ ಅಡುಗೆ ತಯಾರಿ ಶುರು ಮಾಡಿದೆ ಹಾಗೂ ವೀಡಿಯೋ ಕಾನ್ಫರೆನ್ಸ್‍ಗಳ ಮೂಲಕ ಉಪನ್ಯಾಸಗಳನ್ನು ನೀಡಿದೆ. ಆನ್‍ಲೈನ್‍ನಲ್ಲಿ ನಾನು 950ಕ್ಕೂ ಹೆಚ್ಚು ಉಪನ್ಯಾಸಗಳನ್ನು ಪ್ರಸ್ತುತ ಪಡಿಸಿದ್ದೇನೆ. ವಿದೇಶದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೂ ಉಪನ್ಯಾಸಗಳನ್ನು ನೀಡಿದ್ದು, ಯುಟ್ಯೂಬ್‍ನಲ್ಲಿ ಆ ವೀಡಿಯೋಗಳು ಅಪ್‍ಲೋಡ್ ಆಗಿವೆ ಎಂದಿದ್ದಾರೆ. ಇದನ್ನೂ ಓದಿ: ಮೋದಿ ಜನ್ಮದಿನದಂದು 2 ಕೋಟಿ ಮಂದಿಗೆ ಕೋವಿಡ್ ಲಸಿಕೆ
Advertisement
ಯುಟ್ಯೂಬ್‍ನ ನನ್ನ ಚಾನೆಲ್‍ಗೆ ವೀಕ್ಷಕರ ಸಂಖ್ಯೆ ಹೆಚ್ಚಳವಾಗಿದೆ ಹಾಗೂ ನನಗೆ ಪ್ರತಿ ತಿಂಗಳು ಯುಟ್ಯೂಬ್ ಗೌರವಧನದ ರೂಪದಲ್ಲಿ 4 ಲಕ್ಷ ಪಾವತಿಸುತ್ತಿದೆ ಎಂದು ಗಡ್ಕರಿ ತಮ್ಮ ಪರ್ಯಾಯ ಗಳಿಕೆ ಮೂಲವನ್ನು ಬಹಿರಂಗ ಪಡಿಸಿದ್ದಾರೆ. ಭಾರತದಲ್ಲಿ ಯಾರು ಉತ್ತಮ ಕಾರ್ಯಗಳನ್ನು ಮಾಡುತ್ತಾರೆಯೋ ಅವರಿಗೆ ಪ್ರೋತ್ಸಾಹ ಸಿಗುವುದಿಲ್ಲ ಎಂದು ಗಡ್ಕರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
I believe that in battery capacity, we’ll become successful. 86% of batteries are being manufactured in India and in future we’ll take it to 100%. We’ll become manufacturing hub of electric vehicles & export them to the world: Union Road and Transport Minister Nitin Gadkari pic.twitter.com/hVFBcDbk89
— ANI (@ANI) September 17, 2021
ಗುಜರಾತ್‍ನ ಭರುಚ್‍ನಲ್ಲಿ ದೆಹಲಿ, ಮುಂಬೈ ಎಕ್ಸ್‍ಪ್ರೆಸ್‍ವೇ (ಡಿಎಂಇ) ಕಾಮಗಾರಿ ಪರಿಶೀಲನೆ ನಡೆಸಿ ರಸ್ತೆ ಕಾಮಗಾರಿ ನಡೆಸುವ ಗುತ್ತಿಗೆದಾರರು ಮತ್ತು ಸಲಹೆಗಾರರಿಗೆ ಸಚಿವಾಲಯವು ರೇಟಿಂಗ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಟೌಟ್ ಡ್ರೆಸ್‍ನಲ್ಲಿ ನೋರಾ ಫತೇಹಿ ಸಖತ್ ಹಾಟ್
The span b/w 2 pier of Narmada steel bridge is 120 metres & it’s built in record time of 32 months. We’ve thought about wildlife & spent Rs 1300 crores on this highway: Union Road & Transport Min Nitin Gadkari after inspecting the Bharuch section of the Delhi-Mumbai Expressway pic.twitter.com/ODFLGYyFL3
— ANI (@ANI) September 17, 2021
ಸಿನಿಮಾ ಮತ್ತು ಕ್ರೀಡಾ ಕ್ಷೇತ್ರದ ಸ್ಟಾರ್‍ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುವ ಪೆÇೀಸ್ಟ್ ಅಥವಾ ವೀಡಿಯೋಗಳಿಗೆ ಗೌರವಧನ ರೂಪದಲ್ಲಿ ಲಕ್ಷಾಂತರ ರೂಪಾಯಿ ಸಂದಾಯವಾಗುತ್ತದೆ. ಇಂಥದ್ದೇ ಮಾರ್ಗದಲ್ಲಿ ಗೌರವಧನ ಪಡೆಯುವಲ್ಲಿ ರಾಜಕಾರಣಿಗಳೂ ಹಿಂದಿಲ್ಲ ಎಂಬುದಕ್ಕೆ ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ತಾಜಾ ಉದಾಹರಣೆಯಾಗಿದ್ದಾರೆ.