ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇವರ ವಿಶೇಷ ದರ್ಶನ ಮಾಡಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ವಿತ್ತ ಸಚಿವೆ ಉಡುಪಿಯಲ್ಲಿ ಎಡೆಬಿಡದ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ.
ಶುಕ್ರವಾರ ರಾತ್ರಿ ಮಣಿಪಾಲಕ್ಕೆ ಬಂದಿದ್ದ ಅವರು, ಕೊಲ್ಲೂರಿಗೆ ಭೇಟಿಯಾಗಿದ್ದಾರೆ. ಕೊಲ್ಲೂರು ದೇವಸ್ಥಾನದ ಪರವಾಗಿ ಪೂರ್ಣಕುಂಭ ಸ್ವಾಗತ ಮಾಡಲಾಯಿತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿರ್ಮಲಾ ಸೀತಾರಾಮನ್ ಅವರನ್ನು ಸ್ವಾಗತ ಮಾಡಿದರು. ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ದೇವಿಯ ವಿಶೇಷ ದರ್ಶನ ಮಾಡಿದ್ದಾರೆ. ವಿಶೇಷ ಪೂಜೆಯನ್ನು ಸಲ್ಲಿಕೆ ಮಾಡಿದ್ದಾರೆ. ನಂತರ ಕೊಲ್ಲೂರಿನ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳನ್ನು ಸಂದರ್ಶಿಸಿ ಮಹಾ ಪೂಜೆಯಲ್ಲಿ ಭಾಗಿಯಾದರು.
Advertisement
Advertisement
ಸಚಿವೆ ನಿರ್ಮಲಾ ಸೀತಾರಾಮನ್ ಮಾವ ಜೊತೆಗಿದ್ದು, ದೇವರ ದರ್ಶನ ಮಾಡಿದರು. ದೇವಸ್ಥಾನದ ಯಜ್ಞಶಾಲೆಯಲ್ಲಿ ಚಂಡಿಕಾ ಹೋಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿಯಾದರು. ಕೇಂದ್ರ ಸಚಿವರ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಬಿಜೆಪಿಯ ಕಾರ್ಯಕರ್ತರು ಸ್ಥಳೀಯ ನಾಯಕರು ಭೇಟಿಯಾದರು. ಸುಮಾರು 20 ನಿಮಿಷಗಳ ಕಾಲ ಸಚಿವೆ ಚರ್ಚಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಸಚಿವರನ್ನು ಗೌರವಿಸಲಾಯಿತು. ಇದನ್ನೂ ಓದಿ: ಉಡುಪಿ ಪ್ರವಾಸ ಕೈಗೊಂಡಿರುವ ನಿರ್ಮಲಾ ಸೀತಾರಾಮನ್
Advertisement
Advertisement
ಆಡಳಿತ ಮಂಡಳಿಯ ಅಧ್ಯಕ್ಷರು ಸದಸ್ಯರ ಜೊತೆ ಸಮಾಲೋಚನೆ ಮಾತುಕತೆ ಮಾಡಿದ ನಿರ್ಮಲಾ ಸೀತಾರಾಮನ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ದರ್ಶನ ಆಗಿದ್ದೇನೆ ದೇವರ ದರ್ಶನ, ಚಂಡಿಕಾಹೋಮದ ಸೇವೆಯಿಂದ ಮನಸ್ಸಿಗೆ ಖುಷಿಯಾಗಿದೆ ಎಂದು ಹೇಳಿದರು. ಮುಂದೆ ಮತ್ತೆ ಕ್ಷೇತ್ರಕ್ಕೆ ಭೇಟಿಕೊಡುವುದಾಗಿ ಹೇಳಿದರು. ಇದನ್ನೂ ಓದಿ: 2 ಗಂಟೆಗಳ ನಿರಂತರ ಕಾರ್ಯಾಚರಣೆಯಲ್ಲಿ ಬದುಕುಳಿದ ಕ್ಯಾಂಟರ್ ಚಾಲಕ