– ಹಲವಾರು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಹೊಂದಿರೋದು ತನಿಖೆ ವೇಳೆ ದೃಢ
ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧನವಾಗಿದ್ದ ಯೋಗ ಗುರು ನಿರಂಜನಾ ಮೂರ್ತಿ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸರು (RajaRajeshwari Police) ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇದನ್ನೂ ಓದಿ: ಯುವಕನೊಂದಿಗೆ ಮೂರು ಮಕ್ಕಳ ತಾಯಿ ಕಾಮದಾಟ – ಅಡ್ಡಿಯಾದ ಗಂಡನಿಗೆ ಕಟ್ಟಿದ್ಳು ಚಟ್ಟ!
ಏನಿದು ಕೇಸ್?
ಯೋಗ ಗುರು ನಿರಂಜನಾ ಮೂರ್ತಿ ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರವೊಂದನ್ನ (Yoga Centre) ನಡೆಸುತ್ತಿದ್ದ. ಈ ಯೋಗ ಸೆಂಟರ್‌ಗೆ ಓರ್ವ ಅಪ್ರಾಪ್ತೆ ಬರುತ್ತಿದ್ದಳು. ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ದು, ನಿನ್ನ ಹೆಸರು ಬರುವಂತೆ ಮಾಡುತ್ತೇನೆ. ಅದರಿಂದ ನಿನಗೆ ಸರ್ಕಾರಿ ಕೆಲಸವೂ ಸಿಗಬಹುದು ಎಂದು ನಂಬಿಸಿ, ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಬಾಲಕಿ ನೀಡಿದ್ದ ದೂರನ್ನಾಧರಿಸಿ ಪೊಲೀಸರು ನಿರಂಜನಾ ಮೂರ್ತಿಯನ್ನ ಬಂಧಿಸಿದ್ದರು.
ತನಿಖೆ ವೇಳೆ ಅಪ್ತಾಪ್ರೆ ಮೇಲೆ ಅತ್ಯಾಚಾರ ಎಸಗಿರೋದಕ್ಕೆ ಸಾಕ್ಷಿ ಲಭ್ಯವಾಗಿದೆ. ಕೆಲ ವಿಡಿಯೋ, ಫೋಟೋಗಳು ಲಭ್ಯವಾಗಿದೆ. ಅಲ್ಲದೇ ಹಲವಾರು ಮಹಿಳೆಯರ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿರುವುದೂ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೇಸ್‌ನಿಂದ ಹೆಸರು ಬಿಡಲು ಲಂಚವಾಗಿ ʻಶೂʼ ಪಡೆದ ಪೊಲೀಸರು
ಪೊಲೀಸರು ಹಲವಾರು ಮಹಿಳೆಯರನ್ನ ಸಂಪರ್ಕಿಸಿದ್ದರು, ಆದ್ರೆ ಹೇಳಿಕೆ ದಾಖಲಿಸಲು ಮಹಿಳೆಯರು ಹಿಂದೇಟು ಹಾಕಿದ್ದಾರೆ. ಓರ್ವ ಅಪ್ರಾಪ್ತೆ ಹೊರತುಪಡಿಸಿ ಉಳಿದವರು ದೂರು ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ಓರ್ವ ದೂರುದಾರೆ ನೀಡಿದ ಹೇಳಿಕೆ ಆಧಾರದಲ್ಲೇ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಇನ್ನಷ್ಟೇ ಬರಬೇಕಿದೆ. ಬಳಿಕ ತೀರ್ಪು ಪ್ರಕಟ ಸಾಧ್ಯತೆಯಿದೆ. ಇದನ್ನೂ ಓದಿ: ವಿದೇಶದಲ್ಲಿ ಹರಿಯಾಣ ಪೊಲೀಸರ ಕಾರ್ಯಾಚರಣೆ – ಬಿಷ್ಣೋಯ್ ಗ್ಯಾಂಗ್ ಸಂಪರ್ಕದಲ್ಲಿದ್ದ ದರೋಡೆಕೋರರು ಅರೆಸ್ಟ್



