ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಮತ್ತೆ ಟೋಯಿಂಗ್ (Towing) ಶುರು ಮಾಡಲು ಹೊರಟಿರುವ ಸರ್ಕಾರದ ನಡೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಸರ್ಕಾರದ ನಡೆ ಖಂಡಿಸಿರುವ ನಿಖಿಲ್, ಟೋಯಿಂಗ್ ಮರು ಪ್ರಾರಂಭ ವಸೂಲಿ ಉದ್ದೇಶ ಕಾಣಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ಕ್ಷಮೆ ಕೇಳದೇ ಹೋದ್ರೆ ಬ್ಯಾನ್ ಮಾಡಬೇಕು: ಶಿವರಾಜ್ ತಂಗಡಗಿ
ಎಕ್ಸ್‌ನಲ್ಲಿ ಏನಿದೆ?
ಬೆಂಗಳೂರು ನಗರ ವಾಸಿಗಳಿಗೆ ಕಿರಿಕಿರಿ ಮಾಡುತ್ತಿದ್ದ ಟೋಯಿಂಗ್ ಪ್ರಕ್ರಿಯೆಯನ್ನು ಜನಾಕ್ರೋಶದ ಮೇರೆಗೆ 2022ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಮರು ಆದೇಶ ಮಾಡಿರುವುದರ ಹಿಂದೆ, ವಸೂಲಿ ಉದ್ದೇಶ ಕಾಣುತ್ತಿದೆ. ಮೂಲಭೂತ ಸೌಕರ್ಯಗಳನ್ನು ಕೊಡದೇ ಜನರನ್ನು ಸತಾಯಿಸುತ್ತಿರುವ ಕಾಂಗ್ರೆಸ್ ಸರ್ಕಾರ ದಿಕ್ಕೆಟ್ಟು ಆದಾಯದ ಮೂಲಗಳನ್ನು ಹುಡುಕುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಇದನ್ನೂ ಓದಿ: ರಾಯಚೂರು | ಭಾವಚಿತ್ರ ಸುಟ್ಟು ಕಮಲ್ ಹಾಸನ್ ವಿರುದ್ಧ ಆಕ್ರೋಶ
ಇತ್ತೀಚೆಗೆ ನೋಂದಣಿ ಶುಲ್ಕ, ಮೆಟ್ರೋ-ಬಸ್ ಪ್ರಯಾಣ ದರ ಹೆಚ್ಚಳ, ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಬಿಯರ್ ಹಾಗೂ ಮದ್ಯದ ಮೂಲ ಬೆಲೆಗಿಂತ ದುಪಟ್ಟು ಟ್ಯಾಕ್ಸ್ ಏರಿಕೆಯಂತಹ ಅವೈಜ್ಞಾನಿಕ ರೀತಿ ಅನುಸರಿಸಿದರೂ ಕೂಡ, ರಾಜ್ಯದ ಖಾಲಿ ಬೊಕ್ಕಸ ಸರಿಯಾದಂತೆ ಕಾಣುತ್ತಿಲ್ಲ. ಸಂಚಾರಿ ಪೊಲೀಸ್ ಹಾಗೂ ಟೋಯಿಂಗ್ ಮೂಲಕ ‘ಕಲೆಕ್ಷನ್’ ಮಾಡಿ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಈ ಸರ್ಕಾರದ ಪಿತೂರಿ ನಡೆದಿದೆಯೇ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು 10 ಬಾರಿ ಇರಿದು ಕೊಂದ ಪತಿ
‘ಬ್ರಾಂಡ್ ಬೆಂಗಳೂರಿನ’ ಕನಸುಗಾರನಾದ ಡಿಕೆ ಶಿವಕುಮಾರ್ ಅವರೇ, ಟೋಯಿಂಗ್ ವಾಹನಗಳು ಅಡ್ಡಾಡುವುದಕ್ಕಾಗಿಯಾದರೂ ಬೆಂಗಳೂರಿನ ಗುಂಡಿಗಳನ್ನು ಸರಿ ಮಾಡುವಿರೇ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕಾರವಾರ: ಕಡಲ ತೀರಕ್ಕೆ ತೇಲಿಬಂದ ಹಡಗಿನ ರಾಫ್ಟ್ – ಕೇರಳ ಕೊಚ್ಚಿಯಲ್ಲಿ ಮುಳುಗಿದ್ದ ಹಡಗಿನದ್ದಾ?