ಮಂಡ್ಯ: ರಾಜ್ಯದ ಜನತೆಗೆ ತಪ್ಪು ಸಂದೇಶವನ್ನು ಶಾಸಕ ಜಮೀರ್ ಅಹ್ಮದ್ ಖಾನ್ ನೀಡುತ್ತಿದ್ದಾರೆ. ಯಾರನ್ನೋ ಮೆಚ್ಚಿಸಲು ಈ ರೀತಿ ಮಾತನಾಡುತ್ತಿದ್ದಾರೆ. ಇದನ್ನು ಹೀಗೆ ಮುಂದುವರಿಸಿಕೊಂಡು ಹೋದರೆ ನಗೆಪಾಟಲು ಆಗುತ್ತದೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅವರು ಸರಿಯಾದ ಸಮಯದಲ್ಲಿ ಸರಿಯಾದ ತೀರ್ಪು ನೀಡುತ್ತಾರೆ ಎಂದು ನಟ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
Advertisement
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಸುದ್ದಿಗಾರರೋಮದಿಗೆ ಮಾತನಾಡಿದರು. ಇದೇ ವೇಳೆ ಸಿದ್ದರಾಮಯ್ಯರ ಜೆಡಿಎಫ್ ಹೇಳಿಕೆಗೆ ತಿರುಗೇಟು ನೀಡಿದ ನಿಖಿಲ್, ಸಿದ್ದರಾಮಯ್ಯ ಜೆಡಿಎಸ್‍ನಾ ಎಫ್ ಅನ್ನೋದಾದರೆ ಸಿದ್ದರಾಮಣ್ಣನ ಮಗನೂ ಶಾಸಕನಲ್ಲವಾ. ಅವರ ಮಗನೂ ರಾಜಕಾರಣದಲ್ಲಿ ಇಲ್ಲವೇ..? ಅವರು ಮೂಲತಃ ಡಾಕ್ಟರ್ ಅಲ್ಲವೇ…? ಅವರ ವೃತ್ತಿ ಡಾಕ್ಟರ್ ಆಗಿರುವಾಗ ರಾಜಕೀಯಕ್ಕೆ ಏಕೆ ಬಂದ್ರು ಅಂತಾ ನಾವು ಕೇಳಬಹುದಾ..? ಚರ್ಚೆ ಮಾಡಿಕೊಂಡು ಕೂತರೇ ಸಾಕಷ್ಟು ವಿಷಯಗಳು ಇವೆ ಎಂದರು. ಇದನ್ನೂ ಓದಿ: ಅಲ್ಪಸಂಖ್ಯಾತ ಮುಖಂಡರನ್ನ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡಲಿ – ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲು
Advertisement
Advertisement
ಮುಂದಿನ ಚುನಾವಣೆಯಲ್ಲಿ ನಿಖಿಲ್ ರಾಮನಗರದಲ್ಲಿ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ರಾಮನಗರದಲ್ಲಿ ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತೇನೆ ಎನ್ನುವ ವಿಚಾರ ಅಲ್ಲ. ನಮ್ಮ ಪಕ್ಷ 2023ಕ್ಕೆ ಜನರಿಗೆ ಕೊಡುವ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಬೇಕು. ಮುಂದಿನ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ನಾನು ಹೋರಾಟ ನಡೆಸುತ್ತೇನೆ. ರಾಮನಗರ ಅಥವಾ ಮಂಡ್ಯದಲ್ಲಿ ಸ್ಪರ್ಧೆ ಮಾಡೋದನ್ನಾ ಮುಂದೆ ಮಾತನಾಡುತ್ತೇನೆ. ಕ್ಷೇತ್ರ ಬದಲಾವಣೆ ಮಾಡುವ ವಿಚಾರದ ಬಗ್ಗೆ ಈಗ ಮಾತನಾಡುವುದು ಸೂಕ್ತ ಅಲ್ಲ ಎಮದು ಹೇಳಿದರು. ಇದನ್ನೂ ಓದಿ: ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು- ಸಿದ್ದುಗೆ ಸಿ.ಟಿ.ರವಿ ಪ್ರಶ್ನೆ