ಬೆಂಗಳೂರು: ಯುಕೆ (UK) ದೇಶದಲ್ಲಿ ಕೆಲಸ ಕೊಡಿಸೋದಾಗಿ ಹಣ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದ ನೈಜೀರಿಯಾ (Nigeria) ಪ್ರಜೆ ನೋಕೋಚಾ ಕಾಸ್ಮೀರ್‌ನ ಬಂಧನವಾಗಿದೆ.
ಕಾಸ್ಮೀರ್ ಶೆಲ್ ಆಯಿಲ್ ಕಂಪನಿಗಳಲ್ಲಿ ಮ್ಯಾನೆಜ್ಮೆಂಟ್ ಹುದ್ದೆ, ಸ್ಟಾಫ್ ನರ್ಸ್ (Nurse), ಮುಂತಾದ ಹುದ್ದೆ ಕೊಡಿಸುವುದಾಗಿ ಮೋಸ ಮಾಡಿರುವುದು ಕಂಡುಬಂದಿದೆ. ಇದನ್ನೂ ಓದಿ: ಮಹಿಳಾ ಪಿಎಸ್‌ಐ ಜೊತೆ ಅಸಭ್ಯ ವರ್ತನೆ – ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಬಂಧನ
Advertisement
Advertisement
ಆರೋಪಿ ದೊಡ್ಡಗುಬ್ಬಿ ಮೂಲದ ಮಹಿಳೆಗೆ ಯುಕೆ ನಲ್ಲಿ ಸ್ಟಾಫ್ ನರ್ಸ್ ಕೆಲಸ ಕೊಡಿಸುವುದಾಗಿ ಇ-ಮೇಲ್ ಕಳಿಸಿದ್ದಾನೆ. ನಂತರ ಆ ಮಹಿಳೆಯಿಂದ ವಿವಿಧ ಶುಲ್ಕ ಹಾಗೂ ಕ್ಲಿಯರೆನ್ಸ್ ಶುಲ್ಕ ಅಂತಾ 35 ಲಕ್ಷ ಹಣವನ್ನ ಪೀಕಿದ್ದಾನೆ. ಹಣ ಬಂದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ.
Advertisement
ಈ ಬಗ್ಗೆ ಈಶ್ಯಾನ ವಿಭಾಗದ ಸೈಬರ್ ಕ್ರೈಂ (Cyber Crime) ಪೊಲೀಸ್ ಠಾಣೆಗೆ ದೂರು ವಂಚನೆಗೊಳಗಾದ ಮಹಿಳೆ ದೂರು ನೀಡಿದ್ದಾರೆ. ತನಿಖೆ ವೇಳೆ ಆರೋಪಿ ಹೈದರಾಬಾದ್ ಮತ್ತು ತಮಿಳುನಾಡಿನ ಕರೂರಿನಲ್ಲೂ ಇದೇ ರೀತಿ ಮಹಿಳೆಯರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಾವಿರಾರು ಮೈಲಿ ದೂರವಿದ್ದರೂ ಸಿಗುತ್ತೆ ನೈಜ ಮುತ್ತಿನ ಗಮ್ಮತ್ತು – ಏನಿದು ಕಿಸ್ಸಿಂಗ್ ಡಿವೈಸ್ ಕರಾಮತ್ತು?
Advertisement
ಸದ್ಯ ಆರೋಪಿಯನ್ನ ಬಂಧಿಸಿ ಲ್ಯಾಪ್‌ಟಾಪ್, ಪಾಸ್ ಪೋರ್ಟ್, ಸಿಮ್‌ಕಾರ್ಡ್ಗಳನ್ನ ವಶಪಡಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ.