ಬೆಂಗಳೂರು: ಇಂದಿನಿಂದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ (Electronics City Flyover) ಟೋಲ್ ದರ ಏರಿಕೆ ಮಾಡಲಾಗಿದೆ. ನಿರ್ವಾಹಣಾ ವೆಚ್ಚ ಸೇರಿದಂತೆ ಹಲವು ದರ ಏರಿಕೆ ಹಿನ್ನೆಲೆಯಲ್ಲಿ ಟೋಲ್ ದರವೂ ಏರಿದೆ.
ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಗೆ ಸಂಚರಿಸುವ ಕಾರುಗಳ ಟೋಲ್ ಶುಲ್ಕವನ್ನು 65 ರೂ.ನಿಂದ 72 ರೂ.ಗೆ ಹೆಚ್ಚಿಸಲಾಗಿದೆ. ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವೆ ಟೋಲ್ ಶುಲ್ಕವನ್ನು 70 ರೂ.ನಿಂದ 77 ರೂ.ಗೆ ಹೆಚ್ಚಿಸಲಾಗಿದೆ. ಪ್ರಯಾಣದ ದೂರವನ್ನು ಅವಲಂಬಿಸಿ, ಪ್ರತ್ಯೇಕ ವಿಭಾಗಗಳಲ್ಲಿ ಕಾರುಗಳಿಗೆ ಟೋಲ್ 3 ರಿಂದ 8 ರೂ.ಗಳಷ್ಟು ಹೆಚ್ಚಾಗಿದೆ. ಬಸ್‌ಗಳ ಟೋಲ್ ಕೂಡ ಹೆಚ್ಚಿಸಿರುವುದರಿಂದ, ಬಿಎಂಟಿಸಿ ಹೆಚ್ಚುವರಿ ವೆಚ್ಚವನ್ನು ಪ್ರಯಾಣಿಕರಿಗೆ ಹೊರಿಸುವ ಸಾಧ್ಯತೆ ಇದೆ. ಇದನ್ನೂ ಓದಿ: Gruha Jyothi| ಮನೆಗೆ ಬಂದು ನಡೆಯಲಿದೆ ಪರಿಶೀಲನೆ – ಮಾಲೀಕರು ಏನು ದಾಖಲೆ ಕೊಡಬೇಕು?
ಹೊಸೂರು ರಸ್ತೆ-ಬನ್ನೇರುಘಟ್ಟ ರಸ್ತೆ ಟೋಲ್ 65 ರಿಂದ 72 ಕ್ಕೆ ಏರಿಕೆ ಮಾಡಲಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಇದೇ ಮಾರ್ಗದ ಟೋಲ್ ಶುಲ್ಕ 30 ರಿಂದ 33 ರೂ.ಗೆ ಹೆಚ್ಚಿಸಲಾಗಿದೆ. ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ 15 ರಿಂದ 17 ಕ್ಕೆ ಏರಿಕೆ ಮಾಡಲಾಗಿದೆ.
ಬಸ್‌ಗಳು ಮತ್ತು ಟ್ರಕ್‌ಗಳು
ಹೊಸೂರು ರಸ್ತೆ-ಬನ್ನೇರುಘಟ್ಟ ರಸ್ತೆ ಬಸ್‌ಗಳ ಟೋಲ್ ಶುಲ್ಕ 195 ರಿಂದ 215 ರೂ. ಕ್ಕೆ ಹೆಚ್ಚಳ ಮಾಡಲಾಗಿದೆ. ಟ್ರಕ್‌ಗಳಿಗೆ, 128 ರಿಂದ 141 ರೂ. ಏರಿಕೆ ಮಾಡಲಾಗಿದೆ.
ಹೊಸ ದರ ಪರಿಷ್ಕರಣ ಹೇಗಿದೆ?
ವಿಭಾಗ ಕಾರು ಬಸ್ ಬೈಕ್ ಟ್ರಕ್
* ಹೊಸುರು ಟು ಬನ್ನೇರುಘಟ್ಟ: 72 215 33 141
* ಬ.ಘಟ್ಟ ಟು ಕನಕಪುರ: 53 171 17 108
* ಕನಕಪುರು-ಕ್ಲೋವರ್ ಲೀಫ್ ಜಂಕ್ಷನ್: 39 105 11 66
* ಕ್ಲೋವರ ಲೀಫ್-ಮೈಸೂರು ರೋಡ್: 36 94 11 55
* ಮೈಸೂರು ರೋಡ್-ಮಾಗಡಿ ರೋಡ್: 77 226 33 154
* ಮಾಗಡಿ-ತುಮಕೂರು ರೋಡ್: 61 176 17 116
* ಲಿಂಕ್ ರೋಡ್: 83 220 25 146
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ದರವೂ ಏರಿಕೆ
ಸಿಂಗಲ್ ಟ್ರಿಪ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಒಂದಕ್ಕಿಂತ ಹೆಚ್ಚು ಬಾರಿ ಸಂಚರಿಸುವವರಿಗೆ ದರ ಏರಿಕೆ ಬಿಸಿ ತಟ್ಟಲಿದೆ. ಮಲ್ಟಿಪಲ್ ಓಡಾಟ ಸವಾರಿಗೆ 5 ರೂ ಏರಿಕೆ. ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಡೆಡ್ಲಿ ಆಕ್ಸಿಡೆಂಟ್ ಜಂಕ್ಷನ್; ಒಂದೇ ಜಾಗದಲ್ಲಿ 6 ಬಾರಿ ಅಪಘಾತ
ವಾಹನ ಏಕಮುಖ ಪ್ರಯಾಣ ಬಹು ಪ್ರಯಾಣ
* ದ್ವಿಚಕ್ರ: 25 40
* ಕಾರು, ಜೀಪ್, ವ್ಯಾನ್‌ಗಳು: 65 100
* ಲಘು ವಾಣಿಜ್ಯ ವಾಹನಗಳು: 90 130
