ಹುಬ್ಬಳ್ಳಿ: ರಾಜ್ಯಾದ್ಯಂತ ಹಲವಡೆ ರಾಷ್ಟ್ರೀಯ ತನಿಖಾ ದಳ (NIA) ದಾಳಿ ಹಿನ್ನೆಲೆ, ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯ (Hubballi) ಎಸ್‍ಡಿಪಿಐ (SDPI) ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ, ಕಚೇರಿ ಮೇಲೆಯೂ NIA ಅಧಿಕಾರಿಗಳು ದಾಳಿ ಮಾಡಿದ್ದಾರೆ.
Advertisement
ಹಳೇ ಹುಬ್ಬಳ್ಳಿಯ ನೂರಾನಿ ಪ್ಲಾಟ್‍ನಲ್ಲಿರುವ ಎಸ್‍ಡಿಪಿಐ ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ ಮೇಲೆ ಇಂದು ಬೆಳಗಿನ ಜಾವ 5 ಗಂಟೆಗೆ NIA ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಚೇರಿಯ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮನೆ ಮತ್ತು ಕಚೇರಿಯನ್ನು ಸಂಪೂರ್ಣ ಪರಿಶೀಲನೆ ನಡೆಸಿ ಅಧಿಕಾರಿಗಳು ಅಗತ್ಯ ದಾಖಲಾತಿಗಳೊಂದಿಗೆ ವಾಪಸಾಗಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ – NIA ದಾಳಿ, ಮೂವರ ಬಂಧನ
Advertisement
Advertisement
ಅಧಿಕಾರಿಗಳ ನಿರ್ಗಮನದ ಬಳಿಕ ಮಾತನಾಡಿದ ಇಸ್ಮಾಯಿಲ್, ಕಳೆದ ಆರು ವರ್ಷದಿಂದ ಎಸ್‍ಡಿಪಿಐನಲ್ಲಿ ಕೆಲಸ ಮಾಡುತ್ತಿದ್ದೆ ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಐದು ಗಂಟೆಗೆ NIA ಅಧಿಕಾರಿಗಳು ಬಂದು ವಿಚಾರಣೆ ಮಾಡಬೇಕೆಂದರು. ನಾವು ಸಹಕಾರ ನೀಡಿದ್ದೇವೆ. ಅವರು ಸೌಜನ್ಯ ಪೂರ್ವಕವಾಗಿ ನಮ್ಮನ್ನು ನಡೆಸಿಕೊಂಡಿದ್ದಾರೆ. ಆದರೆ ಅವರು ನನ್ನ ಕಿರಿಯ ಮಗನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಆತ ಊರಿನಲ್ಲಿ ಇಲ್ಲ ಹೀಗಾಗಿ ನ.7 ರಂದು ಬೆಂಗಳೂರಿನಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮಗನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ: ರೇಣುಕಾಚಾರ್ಯ ಅನುಮಾನ