ದಾವಣಗೆರೆ: ಸಹೋದರನ ಪುತ್ರ ಚಂದ್ರಶೇಖರ್ (Chandrashekhar) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಅವರು ಪೊಲೀಸರ ವಿರುದ್ಧವೇ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 7 ನಿಮಿಷದಲ್ಲಿ 6 ಕಿ.ಮೀ ಹಳ್ಳಿ ರಸ್ತೆಯನ್ನು ಕ್ರಮಿಸಿತ್ತು ಚಂದ್ರು ಕಾರು
Advertisement
ನರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ನನ್ನ ಮಗನ ಶವದ ಮೇಲೆ ನೂರಾರು ಕಾರುಗಳನ್ನು ಹಾಕಿಕೊಂಡು ಓಡಾಡಿದರು. ಆದರೆ ನನ್ನ ಮಗನನ್ನು ಪತ್ತೆ ಮಾಡಿದ್ದು ನನ್ನ ಕ್ಷೇತ್ರದ ಜನರು. ಡ್ರೋಣ್ (Drone) ಮೂಲಕ ನನ್ನ ಮಗನನ್ನು ಹುಡುಕಾಟ ನಡೆಸಿದ್ದಾರೆ. ಆದರೆ ನಿನ್ನೆ ಒಬ್ಬ ಅಧಿಕಾರಿ ಬಂದು ಓವರ್ ಸ್ಪೀಡ್ ನಲ್ಲಿ ಬಂದು ಬಿದ್ದಿದ್ದಾನೆ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ಅವನ ಕೈಗೆ ಯಾರು ಹಗ್ಗ ಕಟ್ಟಿದ್ದರು ಹೇಳಿ. ಪೊಲೀಸರ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದೆ, ಕನಿಷ್ಠ ಪಕ್ಷ ಆ ಅಧಿಕಾರಿ ನನ್ನ ಬಳಿ ಮಾಹಿತಿ ಪಡೆಯಲು ಕೂಡ ಬಂದಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ (Alok Kumar) ವಿರುದ್ಧ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಅಲೋಕ್ ಕುಮಾರ್ ಏನೇನು ಮಾಡಿದ್ದಾನೆ ಎನ್ನುವುದು ನಮಗೇನು ಗೊತ್ತಿಲ್ವಾ..?, ನನ್ನ ಮೇಲೆ ಕೊಲೆ ಬೆದರಿಕೆ ಹಾಕಿದ್ದರು, ಕರೆ ಮಾಡಿ ಕೂಡ ಬೆದರಿಕೆ ಹಾಕಿದ್ದರು. ಆಗ ಯಾವ ಅಧಿಕಾರಿ ಬಂದು ನನ್ನ ಹತ್ತಿರ ಮಾಹಿತಿ ಪಡೆಯಲಿಲ್ಲ. ಈಗ ಸ್ಪೀಡ್ ಆಗಿ ಬಂದು ಬಿದ್ದಿರಬಹುದು ಎಂದು ಹೇಳುತ್ತಿದ್ದಾರೆ. ಒಬ್ಬ ಶಾಸಕ ಮಗನಿಗೆ ಈ ರೀತಿಯಾದ್ರೆ ಸಾಮಾನ್ಯ ಜನರ ಗತಿ ಏನು ಎಂದು ಜನರು ಮಾತನಾಡುತ್ತಿದ್ದಾರೆ. ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ವೈಫಲ್ಯ ಕಾಣಿಸುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಗ ಗೌರಿಗದ್ದೆಗೆ ಹೋಗಿದ್ದು ನನಗೆ ಗೊತ್ತಿರಲಿಲ್ಲ: ಮೃತ ಚಂದ್ರಶೇಖರ್ ತಾಯಿ
Advertisement
ನಾವು ಮಾಹಿತಿ ಕೊಟ್ಟ ಕಡೆ ಮಾತ್ರ ಪೊಲೀಸರು ಹುಡುಕಾಟ ನಡೆಸಿದರು. ನಾನು ಸರ್ಕಾರದ ಒಂದು ಭಾಗ ಆದರೆ ನನ್ನ ಕುಟುಂಬಕ್ಕೆ ರಕ್ಷಣೆ ಇಲ್ಲ. ಗೃಹ ಸಚಿವರಿಗೆ ಸಿಎಂಗೆ ಮಾಹಿತಿ ನೀಡುತ್ತಾರೆ ವಿನಃ ಹುಡುಕಾಟದ ಕೆಲಸ ಮಾಡಿಲ್ಲ ಎಂದು ಹೇಳುವ ಮೂಲಕ ಪೊಲೀಸ್ ಇಲಾಖೆಯ ವಿರುದ್ಧ ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು.