ಬೆಂಗ್ಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ – ದೇಶದ 17 ಕಡೆ ಎನ್‌ಐಎ ದಾಳಿ

Public TV
2 Min Read
NIA 1

ಬೆಂಗಳೂರು/ ನವದೆಹಲಿ: ಜೈಲಿನಲ್ಲಿ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಕರ್ನಾಟಕ ಸೇರಿದಂತೆ ದೇಶದ 17 ಕಡೆ ದಾಳಿ ನಡೆಸಿದೆ.

ಕಳೆದ ಜುಲೈನಲ್ಲಿ ಆರ್‌ಟಿ ನಗರದ ಮನೆ ಮೇಲೆ ದಾಳಿ ಮಾಡಿದ ಬೆಂಗಳೂರು ಸಿಸಿಬಿ ಪೊಲೀಸರು (CCB Police)  ಐವರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಜೀವಂತ ಗ್ರೆನೇಡ್‌ ಪತ್ತೆಯಾಗಿತ್ತು. ಈ ಪ್ರಕರಣದ ಆರೋಪಿಗಳ ಜೊತೆ ಜೈಲಿನಲ್ಲಿದ್ದ ಉಗ್ರ ಟಿ.ನಾಸೀರ್ (T Naseer) ಸಂಪರ್ಕ ಬೆಳೆಸಿದ್ದ ವಿಚಾರ ತನಿಖೆಯಿಂದ ಬಯಲಾಗಿತ್ತು. ನಂತರ ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು.   ಇದನ್ನೂ ಓದಿ: ಸರ್‌, ನಾನು ನೂರಾರು ಕೋಟಿಗೆ ಬಾಳ್ತೀನಿ: ಪಾಕ್‌ ಪರ ಘೋಷಣೆ ಕೂಗಿದ್ದ ನಾಶಿಪುಡಿ ಯಾರು?

ಈ ವರ್ಷದ ಜನವರಿ 12 ರಂದು ಎನ್‌ಐಎ ಈ ಪ್ರಕರಣದ ಸಂಬಂಧ 8 ಮಂದಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿತ್ತು. ಚಾರ್ಜ್‌ಶೀಟ್ ಮಾಡಿರುವ ಆರೋಪಿಗಳಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಟಿ ನಾಸೀರ್ 2013 ರಿಂದ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಉಳಿದ ಇಬ್ಬರು ಆರೋಪಿಗಳಾದ ಜುನೈದ್ ಅಹ್ಮದ್ ಅಲಿಯಾಸ್ ಜೆಡಿ ಮತ್ತು ಸಲ್ಮಾನ್ ಖಾನ್ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

BENGALURU SUSPECTED TERRORIST 2

ಸಹ ಖೈದಿಗಳನ್ನ ಸೆಳೆದು ಉಗ್ರ ಕೃತ್ಯಕ್ಕೆ ಪ್ರೇರೇಪಣೆ ನೀಡಿದ ಹಿನ್ನೆಲೆಯಲ್ಲಿ ಇಂದು ಏಳು ರಾಜ್ಯದಲ್ಲಿ ಎನ್‌ಐಎ ದಾಳಿ ನಡೆಸಿದೆ. ಬೆಂಗಳೂರಿನ ಹೆಣ್ಣೂರು ಠಾಣಾ ವ್ಯಾಪ್ತಿಯ ತೂಬಾ ಲೇಔಟ್ ಮತ್ತು ಸರಾಯಿ ಪಾಳ್ಯದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.

ಚಾರ್ಜ್‌ಶೀಟ್‌ನಲ್ಲಿ ಏನಿದೆ?
ಆರ್‌ಟಿ ನಗರ ಮನೆಯಲ್ಲಿ ಶೋಧ ಕಾರ್ಯದ ವೇಳೆ ಆರೋಪಿಗಳ ಬಳಿ 7 ನಾಡ ಪಿಸ್ತೂಲ್, 45 ಜೀವಂತ ಗುಂಡು, ಗ್ರೆನೇಡ್ ಹಾಗೂ ವಾಕಿಟಾಕಿಗಳು ಸಿಕ್ಕಿದ್ದವು. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆಸಲು ಮುಂದಾಗಿದ್ದರು ಎಂಬ ವಿಚಾರ ತನಿಖೆಯಿಂದ ಬಯಲಾಗಿತ್ತು.

ಉಗ್ರರ ಮನೆಯಲ್ಲಿ ಪತ್ತೆಯಾದ ಗ್ರೆನೇಡ್‌ಗಳು
ಬೆಂಗಳೂರು ದಾಳಿಯ ವೇಳೆ ಉಗ್ರರ ಮನೆಯಲ್ಲಿ ಪತ್ತೆಯಾಗಿದ್ದ ಗ್ರೆನೇಡ್‌ಗಳು

ಪೌಡರ್ ರೂಪದ ಕೆಮಿಕಲ್ ಬಳಸಿ ಪೆಟ್ಟಿಗೆಯೊಂದರಲ್ಲಿ ಆರೋಪಿಗಳು ಅಡಗಿಸಿಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಂತರ ತನಿಖಾಧಿಕಾರಿಗಳು ಬಾಂಬ್ ನಿಷ್ಟ್ರೀಯ ದಳ (BDDS) ಮತ್ತು FSL ಅಧಿಕಾರಿಗಳ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಸಜೀವ ಗ್ರೇನೆಡ್‌ಗಳನ್ನ ಪತ್ತೆಮಾಡಿ ವಶಪಡಿಸಿಕೊಳ್ಳಲಾಗಿತ್ತು. ಗ್ರೆನೇಡ್ (Grenade) ಮೇಲಿದ್ದ ಮೇಡ್ ಇನ್ ವಿವರವನ್ನೇ ಆರೋಪಿಗಳು ಅಳಿಸಿ ಹಾಕಿದ್ದರು. ಇದನ್ನೂ ಓದಿ: ಆಪಲ್‌ ಐಫೋನ್‌ಗೆ ಭರ್ಜರಿ 16,584 ಕೋಟಿ ರೂ. ದಂಡ

ಸೆರೆ ಸಿಕ್ಕ ಶಂಕಿತರ ಉಗ್ರರ ಹಿಂದೆ ಬ್ಯಾಕ್ ಬೋನ್ ಆಗಿದ್ದ ಮಾಸ್ಟರ್ ಮೈಂಡ್ ಜುನೈದ್ ವಿದೇಶದಲ್ಲಿದ್ದುಕೊಂಡೇ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದವರನ್ನು ಸಾಕುತ್ತಿದ್ದ, ಬೆಂಗಳೂರಿನಲ್ಲಿದ್ದವರಿಗೆ ಲಕ್ಷ ಲಕ್ಷ ರೂ. ಫಂಡಿಂಗ್ ಮಾಡ್ತಿದ್ದ. ಜೊತೆಗೆ ಏನೇನು ಮಾಡಬೇಕು ಅಂತಾ ಟ್ರೈನಿಂಗ್ ಕೊಡ್ತಿದ್ದ. ಅದಕ್ಕಾಗಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೃತ್ಯ ಎಸಬೇಕು ಅನ್ನೋದರ ನೀಲನಕ್ಷೆಯನ್ನೂ (ಬ್ಲೂ ಪ್ರಿಂಟ್) ಸಿದ್ಧ ಮಾಡಿಕೊಂಡಿದ್ದ.

ಜುನೈದ್ ಕೊಡುವ ಮಾರ್ಗದರ್ಶನದಂತೆ ಸಿಲಿಕಾನ್ ಸಿಟಿಯಲ್ಲಿ ಶಂಕಿತರು ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು. ನಗರದಲ್ಲಿ 10ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿಕೊಂಡಿದ್ದರು ವಿಚಾರ ಅಂಶ ಚಾರ್ಜ್‌ಶೀಟ್‌ನಲ್ಲಿದೆ.

Share This Article