ಮೈಸೂರು: ಸಂಬಂಧದಲ್ಲಿ ಸಹೋದರಿಯಾದವಳನ್ನು ಪ್ರೀತಿಸಿ ಮದುವೆಯಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೋಚನಹಳ್ಳಿಯಲ್ಲಿ ನಡೆದಿದೆ.
ಸುತ್ತೂರು ನಿವಾಸಿ ರಸಿಕ (23) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಸಿಕ ತನ್ನ ತಾಯಿಯ ಅಕ್ಕನ ಮಗಳನ್ನು ಪ್ರೀತಿಸುತ್ತಿದ್ದನು. ಈ ವಿಚಾರ ಮನೆಯವರಿಗೆ ತಿಳಿದು ಅವರು ಈ ಪ್ರೀತಿಗೆ ಅಡ್ಡಬಂದಿದ್ದು, ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.
Advertisement
Advertisement
ಕುಟುಂಬದವರ ವಿರೋಧವನ್ನ ಲೆಕ್ಕಿಸದೇ 3 ತಿಂಗಳ ಹಿಂದೆ ನಂಜನಗೂಡು ದೇವಸ್ಥಾನದಲ್ಲಿ ರಸಿಕ ಮತ್ತು ಕಾವ್ಯ ವಿವಾಹವಾಗಿದ್ದರು. ಮದುವೆಯಾದ 3 ತಿಂಗಳಲ್ಲೇ ದಂಪತಿಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಬೇಸತ್ತ ರಸಿಕ ಕಾವ್ಯಾಳ ಸ್ವಗ್ರಾಮವಾದ ಕೋಚನಹಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
Advertisement
ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಇದನ್ನು ಓದಿ: ಪ್ರೇಮ ವೈಫಲ್ಯ: ಕೊನೆ ಆಸೆ ಬರೆದಿಟ್ಟು ಒಂದೇ ಮರದಲ್ಲಿ ನೇಣಿಗೆ ಶರಣಾದ ಅಪ್ರಾಪ್ತ ಜೋಡಿ
ಇದನ್ನು ಓದಿ: ಪ್ರೀತಿಸಿ ಮದ್ವೆಯಾಗಿ, ಏಳೇ ತಿಂಗಳಿಗೆ ನವದಂಪತಿ ಆತ್ಮಹತ್ಯೆ-ಡೆತ್ ನೋಟ್ ನಲ್ಲಿ ಮನಕಲಕುವ ಮಾತು