ಬೆಂಗಳೂರು: ಹೊಸವರ್ಷಕ್ಕೆ (New Year 2024) ಇನ್ನೆರಡು ದಿನ ಬಾಕಿಯಿದ್ದು, ಈ ಹೊತ್ತಿನಲ್ಲೇ ಸಿಬ್ಬಂದಿಗೆ ಬಿಎಂಟಿಸಿ (BMTC) ಗುಡ್‌ನ್ಯೂಸ್ ಕೊಟ್ಟಿದೆ. ಬಿಎಂಟಿಸಿ ಸಿಬ್ಬಂದಿ ಮೇಲೆ ನಿಗಮದಲ್ಲಿ ದಾಖಲಾದ ಎಲ್ಲಾ ಕೇಸ್‌ಗಳನ್ನು ಖುಲಾಸೆಗೊಳಿಸುವ ಮೂಲಕ ಸಿಬ್ಬಂದಿಗೆ ಹೊಸ ವರ್ಷದ ಉಡುಗೊರೆ ನೀಡಿದೆ.
ಬಿಎಂಟಿಸಿಯಲ್ಲಿ ಬಹಳ ವರ್ಷಗಳಿಂದಲೂ ಡಿಪೋ ಮ್ಯಾನೇಜರ್‌ಗಳ ಕಿರುಕುಳ, ಸಣ್ಣಪುಟ್ಟ ಪ್ರಕರಣಗಳಿಗೂ ಕೇಸ್ ದಾಖಲಾಗುತ್ತದೆ ಎಂಬ ಆರೋಪ ಕೇಳಿಬರುತ್ತಿತ್ತು. ಈ ಬಾರಿ ಸಿಬ್ಬಂದಿ ಮೇಲೆ ದಾಖಲಾದ ಒಟ್ಟು 6,960 ಕೇಸ್‌ಗಳನ್ನು ಖುಲಾಸೆ ಮಾಡುತ್ತಿದೆ. ಬಸ್‌ಗಳ ಆಪರೇಷನ್ ಕಾರ್ಯಾಚರಣೆ, ಮಾನವ ಸಂಪನ್ಮೂಲಗಳ ಸದ್ಬಳಕೆಯಿಂದ ಹಾಗೂ ಕಾರ್ಮಿಕರ ಹಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.
Advertisement
Advertisement
ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ರೂಲ್-23ರಲ್ಲಿ ಬರೋ 26 ಗೈರು ಹಾಜರಿ ಪ್ರಕರಣ, 284 ಅಶಿಸ್ತು ಪ್ರಕರಣ ಸೇರಿ ಒಟ್ಟು 544 ಗಂಭೀರ ಶಿಕ್ಷಾರ್ಹ ಪ್ರಕರಣಗಳು ಖುಲಾಸೆಯಾಗುತ್ತಿವೆ. ಇದರಲ್ಲಿ ಸಸ್ಪೆಂಡ್ ಆಗಿ ರಿವೋಕ್ ಆದ ಪ್ರಕರಣಗಳೂ ಸೇರಿವೆ. ಹಾಗೆಯೇ ಡಿಪೋಗಳಲ್ಲಿ ದಾಖಲಾದ ಒಟ್ಟು 2,276 ಗೈರು ಹಾಜರಿ, 4,140 ಅಶಿಸ್ತು ಪ್ರಕರಣಗಳು ಸೇರಿ ಒಟ್ಟು 6,416 ಪ್ರಕರಣಗಳನ್ನು ಕೈ ಬಿಡಲಾಗುತ್ತಿದೆ. ಇದನ್ನೂ ಓದಿ: ಅಸ್ಥಿಪಂಜರ ಪತ್ತೆ ಕೇಸ್: ಮಾನಸಿಕ ಅಸ್ವಸ್ಥತೆಯಿಂದ ಆತ್ಮಹತ್ಯೆಗೆ ಶರಣಾಗಿತ್ತಾ ಇಡೀ ಕುಟುಂಬ? – ಪೊಲೀಸರ ತನಿಖೆ ಚುರುಕು
Advertisement
Advertisement
ಒಟ್ಟಾರೆ 6,960 ಕೇಸ್‌ಗಳನ್ನು ಖುಲಾಸೆಯಾಗುತ್ತಿವೆ. ಈ ಕೇಸ್‌ಗಳಲ್ಲಿ ಟ್ರಾಫಿಕ್ ಸೆನ್ಸಾರ್ ಉಲ್ಲಂಘನೆ, ಎಲ್ಲೆಂದರಲ್ಲಿ ಬಸ್ ನಿಲುಗಡೆ, ಬಸ್ ಚಾಲನೆ ವೇಳೆ ಮೊಬೈಲ್ ಬಳಕೆ, ಕರ್ತವ್ಯದ ವೇಳೆ ಸಮವಸ್ತ್ರ ಧರಿಸದೇ ಇರೋದು ಹೀಗೆ ಹಲವು ಪ್ರಕರಣಗಳಿಗೆ ಲಘು ಹಾಗೂ ಏಕರೂಪದ ಶಿಕ್ಷೆ ಕೊಟ್ಟು ಖುಲಾಸೆಗೊಳಿಸಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ತಿಳಿಸಿದ್ದಾರೆ. ಇದನ್ನೂ ಓದಿ: ನಂದಗೊಂಡನಹಳ್ಳಿಯ 12 ಎಕರೆಯಲ್ಲಿ ಬೆಳೆದಿದ್ದ ಮರಗಳ ನಾಶ – ಐವರು ಅರಣ್ಯಾಧಿಕಾರಿಗಳ ಅಮಾನತು