ಸಿಡ್ನಿ: ಚಿಕ್ಕಮಕ್ಕಳಿಗೆ ಸಾಮಾನ್ಯವಾಗಿ ಬರುವ ಸೋಂಕುಗಳ (Antibiotic Resistant Bacteria) ನಿವಾರಣೆಗೆ ಬಳಸುವ ಔಷಧಿಗಳು ಆಸ್ಟ್ರೇಲಿಯಾ, ಭಾರತ (India) ಸೇರಿ ಅನೇಕ ಏಷ್ಯಾ ಪೆಸಿಫಿಕ್ ದೇಶಗಳಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ ಎಂಬ ಆತಂಕಕಾರಿ ವಿಚಾರ ಅಧ್ಯಯನವೊಂದರಲ್ಲಿ ಬಯಲಾಗಿದೆ. ಇದಕ್ಕೆ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಆಗ್ತಿರುವ ಆಂಟಿಬಯೋಟಿಕ್ ನಿರೋಧಕತೆ(AMR) ಕಾರಣ ಎಂದು ಸಿಡ್ನಿ ವಿವಿ ತಜ್ಞರು ತಿಳಿಸಿದ್ದಾರೆ.
ಜಗತ್ತಿನಾದ್ಯಂತ ಪ್ರತಿ ವರ್ಷ 30 ಲಕ್ಷ ಮಕ್ಕಳು ಸೆಪ್ಸಿಸ್‌ನಿಂದ ಬಳಲುತ್ತಿದ್ದಾರೆ. ಇವರಲ್ಲಿ 5.7 ಲಕ್ಷ ಮಕ್ಕಳು ಸಾವನ್ನಪ್ಪುತ್ತಿವೆ. ಮೊಂಡಾಟಕ್ಕೆ ಬಿದ್ದಿರುವ ಬ್ಯಾಕ್ಟಿರಿಯಾಗಳಿಗೆ ಚಿಕಿತ್ಸೆ ನೀಡಲು ಸಮರ್ಥ ಆಂಟಿ ಬಯೋಟಿಕ್ಸ್ ಲಭಿಸದಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣ ಎಂದು ತಿಳಿಸಿದೆ.
ಇದನ್ನೂ ಓದಿ: ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚು ಹೃದಯಾಘಾತ – ಅಕ್ಕಿರಾಜ ಖ್ಯಾತಿಯ ಗಂಡಾನೆ ಸಾವು
Advertisement
Advertisement
ಚಿಕ್ಕವಯಸ್ಸಲ್ಲಿ ಬರುವ ನ್ಯೂಮೋನಿಯಾ, ಸೆಪ್ಸಿಸ್‌ನಂತಹ ಸೋಂಕುಗಳ ಮೇಲೆ ಈಗಿರುವ ಆಂಟಿಬಯೋಟಿಕ್ಸ್ 50%ಕ್ಕಿಂತ ಕಡಿಮೆ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿವೆ ಎಂದು ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಉಲ್ಲೇಖವಾಗಿದೆ. ಮನುಕುಲಕ್ಕೆ ಕಂಟಕವಾಗಿ ಪರಿಣಮಿಸಿರುವ ಹತ್ತು ಅಂಶಗಳಲ್ಲಿ ಎಎಂಆರ್ ಕೂಡ ಒಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.
Advertisement
Advertisement
Web Stories