ಕರುನಾಡ ಶೋಕ್ದಾರ್ ಅಂತ ಹೆಸರುವಾಸಿ ಆಗಿರುವ ಧನ್ವೀರ್ (Dhanveer ) ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಘೋಷಣೆಯಾಗಿದೆ. ಇದು ಧನ್ವೀರ್ ನಾಯಕರಾಗಿ ನಟಿಸುತ್ತಿರುವ ಐದನೇ ಸಿನಿಮಾ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಯುವ ನಿರ್ದೇಶಕ ರಘುಕುಮಾರ್ ಓ ಆರ್ (Raghukumar) ನಿರ್ದೇಶಿಸುತ್ತಿದ್ದಾರೆ. ಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಇದು ರಘುಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರ.
ಈ ಚಿತ್ರ ‘ಸಮೃದ್ಧಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. ರಘುಕುಮಾರ್ ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ರಂಗಾಯಣ ರಘು (Rangayana Raghu), ರವಿಶಂಕರ್, ತಬಲನಾಣಿ, ಸಾಧುಕೋಕಿಲ ಇನ್ನಿತರ ಕಲಾವಿದರು ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಶುರು ಮಾಡುತ್ತೇವೆ ಎಂದು ಸಮೃದ್ಧಿ ಫಿಲಂಸ್ ನಿರ್ಮಾಣ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ:ಕೈಯಲ್ಲಿ ಎದೆಮುಚ್ಚಿಕೊಂಡು ಸೋನು ಪೋಸ್- ಮತ್ಸ್ಯ ಕನ್ಯೆ ಅಂದ್ರು ಫ್ಯಾನ್ಸ್
ನಿರ್ದೇಶಕ ರಘುಕುಮಾರ್ ಓ ಆರ್ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇವರು ‘ಕೋಟಿಗೊಬ್ಬ 3’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮತ್ತು ‘ದಿ ಬೆಲ್’ ಎಂಬ ಕಿರುಚಿತ್ರ ನಿರ್ಮಿಸಿ ನಿರ್ದೇಶಿಸಿದ್ದಾರೆ. ದಿ ಬೆಲ್ ಕಿರುಚಿತ್ರ ಪಿ ಆರ್ ಕೆ ಆಡಿಯೋ ಯೂಟ್ಯೂಬ್ ಅಲ್ಲಿ ಬಿಡುಗಡೆ ಆಗಿದ್ದು ಒಳ್ಳೆಯ ಪ್ರಶಂಸೆ ಗಳಿಸಿಕೊಂಡು ಶಾರ್ಟ್ ಫಿಲ್ಮ್ ಫೆಸ್ಟಿವಲ್ಸ್ ಅಲ್ಲಿ ತುಂಬಾನೇ ಮೆಚ್ಚುಗೆ ಪಡೆದು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಚಿತ್ರದ ತಾಂತ್ರಿಕವರ್ಗ ಅದ್ಭುತವಾಗಿದ್ದು ಛಾಯಾಗ್ರಾಹಕರಾಗಿ ಕಾರ್ತಿಕ್ ಎಸ್ ಹಿನ್ನೆಲೆ ಸಂಗೀತ ಜುಡಾ ಸ್ಯಾಂಡಿ, ಶಬ್ದ ವಿನ್ಯಾಸ ರಾಜನ್ ಹಾಗೂ ಸಂಕಲನ ಉಮೇಶ್ ಆರ್ ಬಿ ಮಾಡುತ್ತಿದ್ದಾರೆ.
Web Stories