ನವದೆಹಲಿ: ಗಂಗಾ ನದಿ ನೀರನ್ನು ಕ್ಲಿನಿಕಲ್ ಟೆಸ್ಟ್ ನಡೆಸಲು ಸಾಧ್ಯವಿಲ್ಲ ಎಂದು ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಸ್ಪಷ್ಟಪಡಿಸಿದೆ. ಕೇಂದ್ರ ಜಲ ಶಕ್ತಿ ಸಚಿವಾಲಯದ ಮನವಿಗೆ ಪ್ರತಿಕ್ರಿಯೆ ನೀಡಿರುವ ಐಸಿಎಂಆರ್ ಮತ್ತಷ್ಟು ವೈಜ್ಞಾನಿಕ ಕಾರಣಗಳನ್ನು ನೀಡುವಂತೆ ಸೂಚಿಸಿದೆ.
ಗಂಗಾ ನದಿ ನೀರು ಕೊರೊನಾ ವೈರಸ್ ಸೋಂಕಿಗೆ ಔಷಧಿಯಾಗಿ ಬಳಕೆ ಮಾಡಬಹುದು. ರುದ್ರಪ್ರಯಾಗ್ ಮತ್ತು ಮಧ್ಯಪ್ರದೇಶ ತೆಹ್ರಿ ಭಾಗದಲ್ಲಿ ಹರಿಯುವ ಗಂಗಾ ನದಿ ನೀರಲ್ಲಿ ಬ್ಯಾಕ್ಟೀರಿಯಾಫೇಜ್ ಎನ್ನುವ ಸೂಕ್ಷ್ಮಾಣು ಪ್ರಬೇಧಗಳಿದ್ದು ಇದು ಮನುಷ್ಯ ಪ್ರಾಣಿ ಮತ್ತು ನೀರಿನ ಕೊಳವೆಯಲ್ಲಿರುವ ವೈರಸ್ ಗಳನ್ನು ತಿನ್ನುತ್ತದೆ. ಕೊರೊನಾ ವೈರಸ್ ಅನ್ನು ತಿನ್ನುವ ಸಾಧ್ಯತೆಗಳಿದೆ ಹೀಗಾಗಿ ಈ ಬಗ್ಗೆ ಕ್ಲಿನಿಕಲ್ ಟೆಸ್ಟ್ ನಡೆಸುವಂತೆ ಕೇಂದ್ರ ಜಲ ಶಕ್ತಿ ಸಚಿವಾಲಯ ಮನವಿ ಮಾಡಿಕೊಂಡಿತ್ತು.
Advertisement
Advertisement
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಐಸಿಎಂಆರ್, ಗಂಗಾನದಿಯಲ್ಲಿ ಸೂಕ್ಷ್ಮ ವೈರಸ್‍ಗಳ ವಿರುದ್ಧ ಹೋರಾಡುವ ಬ್ಯಾಕ್ಟೀರಿಯಾಫೇಜ್ ಎನ್ನುವ ಸೂಕ್ಷ್ಮಾಣು ಪ್ರಬೇಧಗಳು ಮತ್ತು ವೈರಸ್ ಗಳನ್ನು ತಿನ್ನುವ ಬಗ್ಗೆ ಇನ್ನಷ್ಟು ವೈಜ್ಞಾನಿಕ ಸಾಕ್ಷ್ಯಗಳನ್ನು ನೀಡುವಂತೆ ಕೋರಿದ್ದು, ಸದ್ಯ ಇದನ್ನು ಕ್ಲಿನಿಕಲ್ ಟೆಸ್ಟ್ ನಡೆಸಲು ಸಾಧ್ಯವಿಲ್ಲ ಎಂದಿದೆ.