ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಲೇ ಪ್ರವಾಹ ಸಮಸ್ಯೆ ಎದುರಾಗಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ಹೀಗೆ ಆಗುತ್ತಿರಲಿಲ್ಲ. ಇಂತಹ ಅವೈಜ್ಞಾನಿಕ ಕಾಮಗಾರಿ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್ ಗುಡುಗಿದ್ದಾರೆ.
Advertisement
ಮಂಡ್ಯದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ. ಅವೈಜ್ಞಾನಿಕ ಕಾಮಗಾರಿಯಿಂದಲೇ ಪ್ರವಾಹದ ಸಮಸ್ಯೆ ಎದುರಾಗಿದೆ. ಇದು ಯಾರ ಯೋಜನೆಯೂ ಅಲ್ಲ, ಇದು ಇದು ಎನ್‌ಹೆಚ್‌ಎ ಅವರ ಯೋಜನೆ. ಇದಕ್ಕೆ ಎಲ್ಲರೂ ಜನಪ್ರತಿನಿಧಿಗಳು ಅಷ್ಟೇ ಎಂದು ಕುಟುಕಿದ್ದಾರೆ.
Advertisement
ಆಗುತ್ತಿರುವ ಸಮಸ್ಯೆ ಬಗ್ಗೆ ನಾವು ಧ್ವನಿ ಎತ್ತಬೇಕು. ನಾನಿಲ್ಲಿ ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ. ಅಥವಾ ಯಾರನ್ನೂ ಸಹ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಆದ್ರೆ ರಾಜಕೀಯ ಮಾಡುತ್ತಿದ್ದೀರಾ ಎಂದು ಹೇಳೋರಿಗೆ ನಾನು ಕೇರ್ ಮಾಡಲ್ಲ. ಹೆದ್ದಾರಿ ವ್ಯಾಪ್ತಿಯಲ್ಲಿ 16 ಕಡೆ ಸಮಸ್ಯೆಗಳಾಗಿದೆ. ಸಮರ್ಥನೆ ಮಾಡಿಕೊಳ್ಳೋರು ಮೊದಲು 16 ಕಡೆ ಸರಿಪಡಿಸಿ ಎಂದು ತಿರುಗೇಟು ನೀಡಿದ್ದಾರೆ.
Advertisement
Advertisement
ಈ ಹಿಂದೆ ಇಂದಿಗಿಂತಲೂ ದೊಡ್ಡ ಪ್ರಮಾಣದ ಮಳೆ ಬಿದ್ದಿದೆ. ಆದರೆ ಈ ಬಾರಿಯ ಮಳೆಯಿಂದ ಹೆದ್ದಾರಿ ವ್ಯಾಪ್ತಿಯಲ್ಲಿ ಹೊಸ ಸಮಸ್ಯೆಗಳು ಉದ್ಭವಾಗಿವೆ. ಇದಕ್ಕೆ ಪ್ರಮುಖ ಕಾರಣ ಅವೈಜ್ಞಾನಿಕ ಕಾಮಗಾರಿ. ಈ ಯೋಜನೆಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತದೆ. ಆದ್ರೆ ಈ ಕಾಮಗಾರಿಯಿಂದ ಈ ಭಾಗದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಎಲ್ಲರೂ ನೋಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಗಸ್ಟ್ ಜಿಎಸ್‌ಟಿ ಶೇ.28 ಏರಿಕೆ – 1.43 ಲಕ್ಷ ಕೋಟಿ ರೂ.ನಲ್ಲಿ ಯಾವ ರಾಜ್ಯದ ಪಾಲು ಎಷ್ಟು?
ನಾನು ಯಾರನ್ನು ಸಹ ಟಾರ್ಗೆಟ್ ಮಾಡುತ್ತಿಲ್ಲ. ಕಾಲುವೆಗಳನ್ನು ಮುಚ್ಚಿ ಪೈಪ್‌ಗಳನ್ನು ಹಾಕಿರೋದಾಗಿ ಎಂಜಿಯರ್‌ಗಳೇ ಒಪ್ಪಿಕೊಂಡಿದ್ದಾರೆ. ಈ ಪೈಪ್‌ಗಳು ಕಟ್ಟಿಕೊಂಡು ಹೆದ್ದಾರಿ ವ್ಯಾಪ್ತಿಯಲ್ಲಿ ಪ್ರವಾಹ ಬಂದಿದೆ. ಇದಕ್ಕೆಲ್ಲಾ ಯಾರು ಜವಾಬ್ದಾರಿಯಾಗುತ್ತಾರೆ? ಇದರ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುನರಾರಂಭಗೊಂಡ ಮೈಶುಗರ್ ಸಕ್ಕರೆ ಕಾರ್ಖಾನೆ – ರೈತರ ಮುಖದಲ್ಲಿ ಮಂದಹಾಸ
ಟೈಮ್ ಅಥವಾ ದುಡ್ಡು ಉಳಿಸೋಕೆ ಈ ಕಾಮಗಾರಿ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಎನ್‌ಹೆಚ್‌ಎಗೆ ಸಿಎನ್‌ಎನ್‌ಎಲ್‌ನಿಂದ 21 ಪತ್ರಗಳು ಬಂದಿದೆ. ಆದರೆ ಒಂದಕ್ಕೂ ಉತ್ತರ ನೀಡಿಲ್ಲ. ಅವೈಜ್ಞಾನಿಕ ಕಾಮಗಾರಿ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದ್ದಾರೆ.
ನಾನು ಈ ಹಿಂದೆ ಅವೈಜ್ಞಾನಿಕ ಕಾಮಗಾರಿ ಎಂದು ಹೋರಾಟ ಮಾಡಿದಾಗ ಇದು ರಾಜಕೀಯ ಎಂದು ಹೇಳಿದ್ರು. ಈಗ ಸಮಸ್ಯೆಗಳು ಎಲ್ಲರಿಗೂ ಗೊತ್ತಾಗುತ್ತಿದೆ. ನಾವು ಮಾಡುವ ಕೆಲಸವನ್ನು ಪ್ರಮಾಣಿಕವಾಗಿ ಮಾಡಿದ್ರೆ ಹೀಗೆ ಆಗುತ್ತಿರಲಿಲ್ಲ. ಇಂತಹ ದೊಡ್ಡ ಕಾಮಗಾರಿಯನ್ನು ಶೇ.100 ರಷ್ಟು ಸರಿಯಾಗಿ ಮಾಡೋಕೆ ಆಗಲ್ಲ. ಆದ್ರೆ ಗೊತ್ತಿದ್ದೂ ಅವೈಜ್ಞಾನಿಕಚವಾಗಿ ಕಾಮಗಾರಿ ಮಾಡಿದ್ದಾರೆ. ಈ ಸಮಸ್ಯೆಯನ್ನು ಯಾರೇ ಸಮರ್ಥನೆ ಮಾಡಿದ್ರೂ ಅದನ್ನು ಒಪ್ಪಿಕೊಳ್ಳೋದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ.