ಲಕ್ನೋ: ನೇಪಾಳದಲ್ಲಿ ಭೀಕರ ಪ್ರವಾಹ (Nepal Floods) ಉಂಟಾಗಿ ನದಿಯ ನೀರಿನ ಹರಿವು ತೀವ್ರವಾಗಿ ಏರಿಕೆಯಾಗಿದ್ದು, ಉತ್ತರ ಪ್ರದೇಶದ (Uttar Pradesh) ಮಹಾರಾಜಗಂಜ್ ಮತ್ತು ಕುಶಿನಗರ ಜಿಲ್ಲೆಗಳ ಗಂಡಕ್ (ನಾರಾಯಣಿ) ನದಿಯಿಂದ ಕನಿಷ್ಠ ಏಳು ಅಪರಿಚಿತ ಶವಗಳು ಪತ್ತೆಯಾಗಿವೆ.
ಮೃತರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಜ್‌ಗಂಜ್ ಜಿಲ್ಲೆಯ ತೆಲ್ಫಾಲ್ ಪ್ರದೇಶದಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷನ ಶವಗಳು ಪತ್ತೆಯಾಗಿವೆ. ಇದನ್ನೂ ಓದಿ: ನೇಪಾಳದಲ್ಲಿ ವಿನಾಶಕಾರಿ ಪ್ರವಾಹ – 700ರ ಗಡಿ ದಾಟಿದ ಸಾವಿನ ಸಂಖ್ಯೆ; 2,500 ಮಂದಿ ಇನ್ನೂ ಕಣ್ಮರೆ
ನದಿಯ ಉದ್ದಕ್ಕೂ ಕಣ್ಗಾವಲು ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಸಿಬ್ಬಂದಿ ಮೋಟಾರ್ ದೋಣಿಯಲ್ಲಿ ಸ್ಥಳಕ್ಕೆ ತಲುಪಿ ಶವಗಳನ್ನು ಹೊರತೆಗೆದಿದ್ದಾರೆ.
ಕುಶಿನಗರದ ಗಂಡಕ್ ನದಿಯ ಛಿತೌನಿ ದಂಡೆಯ ಸಿಸ್ವಗೋಪಾಲ್ ಗ್ರಾಮದ ಬಳಿ ಮೂರು ಶವಗಳು ಪತ್ತೆಯಾಗಿವೆ. ಗುರುವಾರ ರಾತ್ರಿ ನದಿಯಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನ ಶವಗಳನ್ನು ಗ್ರಾಮಸ್ಥರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪ್ರವಾಹದ ನೀರಿನಲ್ಲಿ ಕೊಚ್ಚಿ ಬಂದ ಕಂತೆ ಕಂತೆ ನೋಟು ತುಂಬಿದ್ದ ಬ್ಯಾಂಕ್ ಲಾಕರ್; ಹಣ ದೋಚಿದ್ದ 29 ಮಂದಿ ಅರೆಸ್ಟ್
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಸರ್ವೇಶ್ ಕುಮಾರ್ ಗೌರ್, ಖಡ್ಡಾ ವೃತ್ತ ಅಧಿಕಾರಿ, ಪ್ರದೇಶದ ಸ್ಟೇಷನ್ ಹೌಸ್ ಅಧಿಕಾರಿ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಶವಗಳನ್ನು ಹೊರತೆಗೆದು ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.
