ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದರು. ಈ ಸಿನಿಮಾದ ಶೂಟಿಂಗ್ ಅನ್ನು ಸದ್ದಿಲ್ಲದೇ ಶುರು ಮಾಡಿದ್ದಾರೆ. ಈ ಚಿತ್ರಕ್ಕೆ ‘ದಿ ವ್ಯಾಕ್ಸಿನ್ ವಾರ್’ ಎಂದು ಹೆಸರಿಟ್ಟಿದ್ದು ಕೋವಿಡ್ ವೇಳೆಯಲ್ಲಿ ಭಾರತದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಸಿಗುವಂತೆ ಮಾಡಿದ ಸಾಹಸಗಾಥೆಯೇ ಸಿನಿಮಾವಂತೆ.
Advertisement
ಈ ಸಿನಿಮಾವನ್ನು 2024ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಆರೋಪವನ್ನೂ ಕೆಲವರು ಮಾಡುತ್ತಿದ್ದಾರೆ. ಇದು ಸಿನಿಮಾವಲ್ಲ ಬಿಜೆಪಿಯ ಪ್ರಚಾರದ ತಂತ್ರ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ. ಹೀಗಾಗಿ ವಿವೇಕ್ ಅಗ್ನಿಹೋತ್ರಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ನೆಗೆಟಿವ್ ಕಾಮೆಂಟ್ ಗಳನ್ನು ಎದುರಿಸುತ್ತಿದ್ದಾರೆ. ಬರುತ್ತಿರುವ ಸಂದೇಶಗಳನ್ನು ಅವರು ಮೌನವಾಗಿಯೇ ಸ್ವೀಕರಿಸುತ್ತಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಗನ ಜೊತೆ ಮಾಲ್ಡೀವ್ಸ್‌ಗೆ ಹಾರಿದ ಜಾನ್ವಿ
Advertisement
Advertisement
ದಿ ಕಾಶ್ಮೀರ ಫೈಲ್ಸ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡುವುದರ ಜೊತೆ ಜೊತೆಗೆ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಸಾಕಷ್ಟು ಪರ ವಿರೋಧ ಚರ್ಚೆಗಳು ಕೂಡ ನಡೆದಿವೆ. ಬಿಜೆಪಿ ಆಡಳಿತ ಇರುವ ನಾನಾ ರಾಜ್ಯಗಳಲ್ಲಿ ಟ್ಯಾಕ್ಸ್ ಫ್ರಿ ಕೂಡ ಘೋಷಣೆ ಮಾಡಲಾಗಿತ್ತು. ಅಲ್ಲದೇ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿಯ ಅನೇಕ ಮುಖಂಡರ ಈ ಸಿನಿಮಾವನ್ನು ಬುಕ್ ಮಾಡಿ ಉಚಿತವಾಗಿ ತೋರಿಸಿದ್ದರು. ಈ ಕಾರಣದಿಂದಾಗಿ ವಿವೇಕ್ ಅವರ ಹೊಸ ಸಿನಿಮಾಗೆ ಈ ಪ್ರಮಾಣದಲ್ಲಿ ಕಾಮೆಂಟ್ ಹರಿದು ಬರುತ್ತಿವೆ.