ದೊಡ್ಮನೆ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮನೆಯ ಆಟ ರೋಚಕ ತಿರುವು ಪಡೆಯುತ್ತಿದ್ದಂತೆ ಒಬ್ಬಬ್ಬರೇ ಮನೆಯಿಂದ ಔಟ್ ಆಗುತ್ತಿದ್ದಾರೆ. ಇದೀಗ ಬಿಗ್ ಬಾಸ್ (Bigg Boss Kannada) ಮನೆಯಿಂದ ನೀತು ವನಜಾಕ್ಷಿ ಆಟ 7ನೇ ವಾರಕ್ಕೆ ಅಂತ್ಯವಾಗಿದೆ.
ಟಾನ್ಸ್ ಜೆಂಡರ್ ಮಿಸ್ ವರ್ಲ್ಡ್ ಕಾಂಪಿಟೇಶನ್, ರಿಯಾಲಿಟಿ ಶೋ, ಸಿನಿಮಾ ಸೇರಿದಂತೆ ಸಕ್ರಿಯರಾಗಿದ್ದ ನೀತು ವನಜಾಕ್ಷಿ (Neetu Vanajakshi) ಬಿಗ್ ಬಾಸ್ ಮನೆಗೆ ಕಾಲಿಟ್ಟ ಬಳಿಕ ಅನೇಕರಿಗೆ ಪರಿಚಿತರಾಗಿದ್ದರು. 7ನೇ ವಾರಕ್ಕೆ 2ನೇ ಬಾರಿ ಮನೆಯ ಕ್ಯಾಪ್ಟನ್ ಆಗಿ ಪಟ್ಟ ಏರಿದ್ದರು. ಈಗ ಅವರ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ.
ಸ್ನೇಕ್ ಶ್ಯಾಮ್, ಗೌರೀಶ್, ರಕ್ಷಕ್, ಇಶಾನಿ, ಭಾಗ್ಯಶ್ರೀ ಅವರ ಬಿಗ್ ಬಾಸ್ ಜರ್ನಿ ಮುಗಿದು ಎಲಿಮಿನೇಟ್ ಆಗಿದ್ದಾರೆ. ಈಗ ನೀತು ಎಲಿಮಿನೇಷನ್ (Elimination) ಮನೆಮಂದಿಗೆ ಶಾಕ್ ಕೊಟ್ಟಿದೆ.
ಸದಾ ಒಂದಲ್ಲಾ ಒಂದು ಕಿರಿಕ್ ಮಾಡುವ ಹೈಲೆಟ್ ಆಗಿದ್ದ ನೀತು.. ನೊಂದವರ ಗುಂಪಿನಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು. ಅಂದರೆ ತುಕಾಲಿ ಸಂತೂ- ವರ್ತೂರು ಸಂತೋಷ್‌ಗೆ ಆತ್ಮೀಯರಾಗಿದ್ದರು. ಇದಕ್ಕೂ ಮುನ್ನ ವಿನಯ್ ಟೀಮ್‌ನಲ್ಲಿದ್ರೂ ನೀತು.
ಬಿಗ್ ಬಾಸ್ ಮನೆಗೆ ಬಂದ ಹೊಸತರಲ್ಲಿ ನೀತು ಆಟ ನೋಡಿ ಸುದೀಪ್ ಕಡೆಯಿಂದ ಕಿಚ್ಚನ (Sudeep) ಚಪ್ಪಾಳೆ ಸಿಕ್ಕಿತ್ತು. ಈಗ ನೀತು ಎಲಿಮಿನೇಟ್ ಆಗಿರೋದು ಅವರ ಫ್ಯಾನ್ಸ್ಗೆ ಶಾಕ್ ಕೊಟ್ಟಿದೆ.