ಬೆಂಗಳೂರು: ನೀಟ್ ಮರು ಪರೀಕ್ಷೆ (NEET RE Exam) ತಕ್ಷಣವೇ ಆಗಲಿ ಅಂತ ಬಿಜೆಪಿ ನಾಯಕ,ಮಾಜಿ ಡಿಸಿಎಂ ಅಶ್ವಥ್ ನಾರಾಯಣ (Ashwath Narayan) ಒತ್ತಾಯ ಮಾಡಿದ್ದಾರೆ.
ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಮರು ಪರೀಕ್ಷೆ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೀಟ್ ಪರೀಕ್ಷೆ ವಿಚಾರದಲ್ಲಿ ಪೇಪರ್ ಲೀಕ್ ಆಗಿದೆ ಅಂತ ಕೆಲ ಪ್ರದೇಶದಲ್ಲಿ ವರದಿಯಾಗಿದೆ. ಮರು ಪರೀಕ್ಷೆ ಮಾಡೋದಾಗಿ NTA ಹೇಳಿದೆ. ರೀ ಷಡ್ಯೂಲ್ ಮಾಡಿ ಸಮಯ ವ್ಯರ್ಥವಾಗದಂತೆ ಮಾಡಿ ಎಂದರು. ಇದನ್ನೂ ಓದಿ: ಮೇ 3 ರಂದು ನಡೆದ ನೀಟ್ ಪರೀಕ್ಷೆ ರದ್ದು

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರೋರ ಮೇಲೆ ಕಠಿಣ ಕ್ರಮ ಆಗಲಿ. ಮೆರಿಟ್‌ಗೆ ಕಾಂಪ್ರಮೈಸ್ ಆಗಬಾರದು. ಸಮಸ್ಯೆ ಉದ್ಬವ ಆಗ್ತಿದೆ. ಮೆರಿಟ್ ಸ್ಟೂಡೆಂಟ್‌ಗೆ ಅನ್ಯಾಯ ಆಗಬಾರದು. ಎಲ್ಲರೂ ಸಹಕರಿಸಿ, ಮರು ಪರೀಕ್ಷೆ ತಕ್ಷಣ ಆಗಲಿ ಅಂತ ಒತ್ತಾಯ ಮಾಡಿದ್ರು. ಇದನ್ನೂ ಓದಿ: ಚಿನ್ನ, ಪೆಟ್ರೋಲ್ ಬಳಕೆಗೆ ಬ್ರೇಕ್ – ಮೋದಿ ಕರೆ ಹಿಂದಿದೆ 23 ಲಕ್ಷ ಕೋಟಿ ರೂ. ಉಳಿತಾಯದ ಗುರಿ!

