ಪಾಟ್ನಾ: ಬಿಹಾರ (Bihar) ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಸಂಭ್ರಮಾಚರಣೆ ಗರಿಗೆದರಿದೆ. ಎಲ್ಲಾ ಸಮೀಕ್ಷೆಗಳಲ್ಲಿ ಎನ್‌ಡಿಎಗೆ (NDA) ಬಹುಮತ ಸಿಕ್ಕಿರುವುದು ಮೈತ್ರಿಕೂಟದ ನಾಯಕರಲ್ಲಿ ಹುರುಪು ಹೆಚ್ಚಿಸಿದೆ.
ಪಾಟ್ನಾದಲ್ಲಿ ಲಡ್ಡು ಮತ್ತು ಬೃಹತ್ ಔತಣಕೂಟಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣ ಸಿಂಗ್ ಕಲ್ಲು ಅವರು, 500 ಕೆಜಿ ಲಡ್ಡುಗಳಿಗೆ ಆರ್ಡರ್ ಮಾಡಿದ್ದಾರೆ. ದೊಡ್ಡ ಅಡುಗೆ ಪಾತ್ರೆಯ ಮುಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಚಿತ್ರಗಳನ್ನು ಇರಿಸಲಾಗಿದ್ದು, ಲಡ್ಡು ತಯಾರಿಸಲಾಗುತ್ತಿದೆ. ಇದನ್ನೂ ಓದಿ: Bihar Exit Polls: ಬಿಹಾರದಲ್ಲಿ ಎನ್‌ಡಿಎಗೆ ಬಹುಮತ
ಬಿಹಾರದ ಜನರು ಮತ್ತು ನಮ್ಮ ಸಮರ್ಪಿತ ಪಕ್ಷದ ಕಾರ್ಯಕರ್ತರ ಕಠಿಣ ಪರಿಶ್ರಮಕ್ಕೆ ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರತಿಫಲವಾಗಿವೆ. ಈ ಬಾರಿಯೂ ಎನ್‌ಡಿಎ ಮತ್ತೊಮ್ಮೆ ಸರ್ಕಾರ ರಚಿಸುತ್ತದೆ ಎಂದು ಕೃಷ್ಣ ಸಿಂಗ್ ತಿಳಿಸಿದ್ದಾರೆ.
ಅನಂತ್ ಸಿಂಗ್ ಅವರ ಕುಟುಂಬ ಸದಸ್ಯರು ಪಾಟ್ನಾದಲ್ಲಿ 50,000 ಜನರಿಗೆ ಅದ್ಧೂರಿ ಔತಣಕೂಟ ಆಯೋಜಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಅವರ ಪತ್ನಿ ನೀಲಂ ದೇವಿ ಅವರ ನಿವಾಸದಲ್ಲಿ ಸಿದ್ಧತೆಗಳು ನಡೆಯುತ್ತಿದೆ. ಐದು ಲಕ್ಷ ರಸಗುಲ್ಲಾ ಮತ್ತು ಗುಲಾಬ್ ಜಾಮೂನ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದನ್ನೂ ಓದಿ: Exit Polls: ಬಿಹಾರದಲ್ಲಿ ಮತ್ತಷ್ಟು ಕುಸಿದ ಮಹಾಘಟಬಂಧನ್ – ಕಳೆದ ಬಾರಿ ಸೀಟ್ ಎಷ್ಟಿತ್ತು, ಈಗ ಎಷ್ಟು?
ನ.14 ರಂದು ಮತ ಎಣಿಕೆಯ ದಿನದಂದು ಮೊಕಾಮಾ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಎಲ್ಲಾ ಎನ್‌ಡಿಎ ಕಾರ್ಯಕರ್ತರು, ಬೆಂಬಲಿಗರು ಮತ್ತು ಹಿತೈಷಿಗಳನ್ನು ಆಹ್ವಾನಿಸಲಾಗಿದೆ.


