ಆಪರೇಷನ್ ಸಿಂಧೂರ ವೇಳೆ ನೌಕಾದಳದಿಂದ ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು – ಆದ್ರೆ ಅಂತಿಮ ಆದೇಶ ಬರಲಿಲ್ಲ

Public TV
3 Min Read
Indian Navy

– ಅಂತಿಮ ಆದೇಶ ಬಂದಿದ್ದರೆ ಪಾಕಿಸ್ತಾನದ ಪೋರ್ಟ್‌ಗಳು ಮಿಸೈಲ್ ದಾಳಿಗೆ ಭಸ್ಮವಾಗುತ್ತಿದ್ದವು

ನವದೆಹಲಿ: ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಗೆ ಸಂಬಂಧಪಟ್ಟ ಸ್ಫೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಆಪರೇಷನ್ ಸಿಂಧೂರ (Operation Sindoor) ವೇಳೆ ಪಾಕಿಸ್ತಾನದ ವಿರುದ್ಧ ನೌಕಾದಳದಿಂದ (Indian Navy ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು. ಆದರೆ, ದಾಳಿಗೆ ಅಂತಿಮ ಆದೇಶ ಬರಲಿಲ್ಲ. ಬಂದಿದ್ದರೆ ಪಾಕ್ ಬಂದರುಗಳು, ಅಲ್ಲಿದ್ದ ನೌಕೆಗಳು ಧ್ವಂಸವಾಗುತ್ತಿತ್ತು ನೌಕಾಪಡೆಯ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

Mig 29K

ಉತ್ತರ ಅರಬ್ಬೀ ಸಮುದ್ರದಲ್ಲಿ ಮಿಗ್-29 ಎಂಕೆ ಫೈಟರ್‌ಜೆಟ್‌ಗಳನ್ನು (Fighter Jets) ಹೊತ್ತು ಐಎನ್‌ಎಸ್ ವಿಕ್ರಾಂತ್ ಸಜ್ಜಾಗಿತ್ತು (ಹಾಟ್-ಸ್ಟ್ಯಾಂಡ್‌ಬೈನಲ್ಲಿ). ಒಂದೊಮ್ಮೆ ದಾಳಿಗೆ ಸಿಗ್ನಲ್ ಸಿಕ್ಕಿದ್ದಲ್ಲಿ ದಕ್ಷಿಣ ಪಾಕಿಸ್ತಾನದ ಬಂದರುಗಳು (Pakistan Port) ಭಸ್ಮ ಆಗ್ತಿತ್ತು ಅಂತ ಹೇಳಲಾಗಿದೆ. ಇದನ್ನೂ ಓದಿ: ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಸುಧಾರಿಸಲು 4 ಹಂತದ ಯೋಜನೆ ಪ್ರಸ್ತಾಪಿಸಿದ ರಾಜನಾಥ್ ಸಿಂಗ್

Pakistan Navy

ಹೌದು. ಪಾಕಿಸ್ತಾನದ ಕರಾಚಿ ಬಂದರಿನಲ್ಲಿರುವ ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಹಾಗೂ ಭೂಸೇನೆ ಸೇರಿದಂತೆ ನೌಕಾದಳದಿಂದ ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು. ಬ್ರಹ್ಮೋಸ್‌ ಕ್ಷಿಪಣಿ ಮತ್ತು ಜಲಾಂತರ್ಗಾಮಿ ನೌಕೆಗಳಿಂದ ದಾಳಿ ಮಾಡಲು ನಿರ್ಧರಿಸಲಾಗಿತ್ತು. ಇವು ಭಾರತದ ರಷ್ಯಾ ನಿರ್ಮಿತ ಕಿಲೋ ವರ್ಗದ ಜಲಾಂತರ್ಗಾಮಿ ನೌಕೆಗಳೊಂದಿಗೆ ಸಂಯೋಜಿಸಲ್ಪಟ್ಟ ಕ್ಲಬ್ ಸರಣಿಯವು ಎಂದು ನಂಬಲಾಗಿದೆ. ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳು ಎರಡೂ ಹಡಗು ವಿರೋಧಿ ಮತ್ತು ಭೂ-ದಾಳಿ ಕ್ಷಿಪಣಿಗಳನ್ನು ಉಡಾಯಿಸುವ ಸ್ಥಿತಿಯಲ್ಲಿದ್ದವು. ಆದ್ರೆ ಅಂತಿಮ ಆದೇಶ ಬರಲೇ ಇಲ್ಲ. ಬಂದಿದ್ದರೆ ಪಾಕಿಸ್ತಾನದ ಪೋರ್ಟ್‌ಗಳು ಮಿಸೈಲ್ ದಾಳಿಗೆ ಭಸ್ಮವಾಗುತ್ತಿದ್ದವು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಂತರಿಕ್ಷ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ – ಭಾರತದಿಂದ ‘ಸಪ್ತ ಸಂಶೋಧನೆ’

INS Vikrant 1

ಉತ್ತರ ಅರಬ್ಬೀ ಸಮುದ್ರದಲ್ಲಿ ನಿಯೋಜನೆಯಾಗಿದ್ದ ಐಎನ್‌ಎಸ್‌ ವಿಕ್ರಾಂತ್‌ ನೌಕೆ ಹೊತ್ತಿದ್ದ ಮಿಕ್‌ 29K ಯುದ್ಧ ವಿಮಾನವು ಪಾಕಿಸ್ತಾನದ ದಕ್ಷಿಣ ಕರಾವಳಿ ವಾಯುಪ್ರದೇಶದ ಪ್ರಾಬಲ್ಯವನ್ನು ಖಚಿತಪಡಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಯುದ್ಧಗಳು ಕೊನೆಗೊಂಡ ಕೆಲ ದಿನಗಳ ನಂತರ ATR-72 ಟರ್ಬೊ-ಪ್ರಾಪ್ ವಿಮಾನದ ಆವೃತ್ತಿ RAS-72 ಸೀ ಈಗಲ್ ಅನ್ನು INS ವಿಕ್ರಾಂತ್ ಟ್ರ್ಯಾಕ್‌ ಮಾಡಿತು. ಇದು ಕಡಲ ತೀರದ ಕಣ್ಗಾವಲು ವಿಮಾನವಾಗಿದೆ. ಅದಕ್ಕಾಗಿ ಪಾಕ್ ನೌಕಾಪಡೆಯ ವಿಮಾನದಿಂದ ಕೆಲ ಮೀಟರ್‌ಗಳ ಅಂತರದಷ್ಟು ದೂರದಲ್ಲಿ ಮಿಗ್-29ಕೆ ವಿಮಾನವನ್ನು ಕಣ್ಗಾವಲಿಗೆ ಇರಿಸಲಾಗಿತ್ತು. ಈ ಮೂಲಕ ಪಾಕ್ ನೌಕಾಪಡೆಯ ವಿಮಾನವನ್ನು ಹಿಮ್ಮೆಟ್ಟಿಸುವಲ್ಲಿ ನೌಕಾಪಡೆ ಯಶಸ್ವಿಯಾಯಿತು. ಇದನ್ನೂ ಓದಿ: ಹನಿಮೂನ್ ಮರ್ಡರ್‌ನಂತೆಯೇ ಆಂಧ್ರದಲ್ಲೂ ಮರ್ಡರ್ – ಮೇಘಾಲಯ ಹತ್ಯೆ ವಿಚಾರದ ಬಗ್ಗೆಯೂ ಮಾತಾಡಿದ್ರಂತೆ ಆರೋಪಿಗಳು

BrahMos Missile 2

ಇನ್ನೂ, ಭಾರತದ ಜೊತೆ ಶೀಘ್ರವೇ ಅತಿದೊಡ್ಡ ವ್ಯಾಪಾರ ಒಪ್ಪಂದ ನಡೆಯಲಿದೆ ಅಂತ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಇನ್ನು, ಟ್ಯಾಕ್ಸ್ ವಾರ್ ಬಳಿಕ ಚೀನಾ ಜೊತೆ ಅಮೆರಿಕ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಇನ್ನು, ಇರಾನ್ ಜೊತೆ ಮತ್ತೆ ಮಾತುಕತೆಗೆ ಟ್ರಂಪ್ ಮುಂದಾಗಿದ್ದಾರೆ. ನಾಗರಿಕ ಪರಮಾಣು ಇಂಧನದಲ್ಲಿ 30 ಬಿಲಿಯನ್ ಡಾಲರ್ ಹೂಡಿಕೆ, ಫಂಡ್ ರಿಲೀಸ್, ನಿರ್ಬಂಧ ವಾಪಸ್ ಬಗ್ಗೆ ಮಾತುಕತೆ ನಡೆಸೋಣ ಅಂತ ಇರಾನ್‌ಗೆ ಅಮೆರಿಕ ಆಹ್ವಾನ ಕೊಟ್ಟಿದೆ. ಇರಾನ್-ಇಸ್ರೇಲ್‌ನಿಂದ ಈವರೆಗೂ 4,415 ಭಾರತೀಯರು ತಾಯ್ನಾಡಿಗೆ ವಾಪಸ್ ಬಂದಿದ್ದಾರೆ. ‘ಆಪರೇಷನ್ ಸಿಂಧು’ ಕಾರ್ಯಾಚರಣೆ ಮೂಲಕ ಇರಾನ್‌ನಿಂದ 3,597, ಇಸ್ರೇಲ್‌ನಿಂದ 818 ಮಂದಿಯನ್ನು ಕರೆತರಲಾಗಿದೆ ವಿದೇಶಾಂಗ ಇಲಾಖೆ ಹೇಳಿದೆ. ಇದಕ್ಕಾಗಿ 19 ವಿಶೇಷ ವಿಮಾನಗಳು, ವಾಯುಪಡೆಯ 3 ವಿಮಾನಗಳನ್ನು ಬಳಕೆ ಮಾಡಲಾಗಿದೆ. ಈ ಮಧ್ಯೆ, ಇರಾನ್ ಸುಪ್ರೀಂಲೀಡರ್ ಖಮೇನಿ ಹತ್ಯೆಗೆ ತುಂಬಾ ಹುಡುಕಾಟ ನಡೆಸಿದ್ದೆವು. ಆದರೆ, ಆತ ಅಜ್ಞಾತವಾಸಿಯಾಗಿಬಿಟ್ಟ. ನಮ್ಮ ಕಣ್ಣಿಗೆ ಬಿದ್ದಿದ್ದರೆ ಆತನನ್ನು ಕಗ್ಗೊಲೆ ಮಾಡುತ್ತಿದ್ದೆವು ಅಂತ ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಹೇಳಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಬೆಂಗಾವಲು ಪಡೆಯ 19 ವಾಹನಗಳಿಗೆ ನೀರು ಮಿಶ್ರಿತ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ!

Share This Article