ನವದೆಹಲಿ: ಭಾರತೀಯ ಸೇನೆಗೆ ನೂತನವಾಗಿ ಸೇರ್ಪಡೆಗೊಂಡ ಎಂಹೆಚ್ 60ಆರ್ ಸೀಹಾಕ್ (MH 60R Seahawk) ಹೆಲಿಕಾಪ್ಟರ್‌ಗಳನ್ನು ಬುಧವಾರ ಕೊಚ್ಚಿಯ (Kochi) ನೌಕಾ ನೆಲೆಯಲ್ಲಿ ನಿಯೋಜಿಸಲು ಸಿದ್ಧತೆ ನಡೆದಿದೆ. ಈ ಮಲ್ಟಿ ಟಾಸ್ಕ್ ಹೆಲಿಕಾಪ್ಟರ್ ಜಲಾಂತರ್ಗಾಮಿಗಳ ವಿರುದ್ಧ ಹೋರಾಡುವ ತಂತ್ರಜ್ಞಾನವನ್ನು ಒಳಗೊಂಡಿದ್ದು, ಕ್ಷಿಪಣಿಗಳು ಹಾಗೂ ಗುಂಡಿನಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಭಾರತದ ನೌಕಪಡೆಯ (Indian Navy) ಏಕೈಕ ಹೆಲಿಕಾಪ್ಟರ್ ಇದಾಗಿದೆ.
ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ಭಾರತದ ನೌಕಪಡೆಯ ಸಾಮಥ್ರ್ಯಗಳನ್ನು ಹೆಚ್ಚಿಸಲಿದೆ. ಅಲ್ಲದೇ ನೌಕಾಪಡೆಯ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ವಿಶಾಲವಾದ ಕಡಲ ಗಡಿಯಲ್ಲಿ ನಿರಂತರ ನೌಕಾ ಕಾರ್ಯಾಚರಣೆಗೆ ಈ ಹೆಲಿಕಾಪ್ಟರ್ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್‌ಗಳನ್ನು ಭಾರತ ಸರ್ಕಾರವು 2020 ರ ಫೆಬ್ರವರಿಯಲ್ಲಿ ಅಮೆರಿಕಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದರಲ್ಲಿ ಆರು ಹೆಲಿಕಾಪ್ಟರ್‌ಗಳು ಇದುವರೆಗೆ ಭಾರತೀಯ ನೌಕಾಪಡೆಗೆ ಸಿಕ್ಕಿವೆ. ಎಲ್ಲಾ ರೀತಿಯಾಗಿಯೂ ಹೆಲಿಕಾಪ್ಟರ್‌ಗಳನ್ನು ಪರಿಶೀಲಿಸಲಾಗಿದ್ದು, ಸಮರ್ಥವಾಗಿವೆ. ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ಟಾರ್ಪಿಡೊಗಳು, ಕ್ಷಿಪಣಿಗಳು ಮತ್ತು ರಾಕೆಟ್‍ಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ದಾಳಿಯನ್ನು ವಿಫಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
Advertisement
Advertisement
ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಸೀಹಾಕ್‍ನ ನಿಯೋಜನೆಯು ಭಾರತೀಯ ನೌಕಾಪಡೆಯನ್ನು ಬಲಪಡಿಸುತ್ತದೆ. ಸಂಭಾವ್ಯ ಬೆದರಿಕೆಗಳನ್ನು ತಡೆಯುತ್ತದೆ. ಅಲ್ಲದೇ ಈ ಆಯಕಟ್ಟಿನ ನಿರ್ಣಾಯಕ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.