ನವರಾತ್ರಿ ಹಬ್ಬದ ಸಂಭ್ರಮ ಎಲ್ಲಡೆ ಮನೆಮಾಡಿದೆ. ಹಬ್ಬ ಎಂದರೆ ನೆನಪಾಗೋದು, ಸಂಭ್ರಮ, ಉಡುಗೆ-ತೊಡುಗೆ ಜೊತೆಗೆ ಸಿಹಿತಿಂಡಿಗಳು. ಅಮ್ಮ ಮಾಡೋ ವಿವಿಧ ತರಹದ ಸ್ವೀಟ್ಗಳು ಎಲ್ಲರ ಫೇವರೆಟ್. ಆದರೆ ನಾವು ಇಂದು ಎರಿಯಪ್ಪ ಮಾಡುವ ವಿಧಾನವನ್ನು ಹೇಳಿಕೊಡಲಿದ್ದೇವೆ. ಟ್ರೈ ಮಾಡಿ ನೋಡಿ, ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಡೌಟೇ ಇಲ್ಲ. ಈ ವರ್ಷದ ನವರಾತ್ರಿ ಹಬ್ಬವನ್ನು ನೀವು ಈ ಸಿಹಿ ತಿಂಡಿ ಜೊತೆಗೆ ವಿಶೇಷವಾಗಿ ಆಚರಿಸಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
* ಅಕ್ಕಿ – 1 ಕಪ್
* ಕಾಯಿತುರಿ- ಅರ್ಧ ಕಪ್
* ಬೆಲ್ಲದ- 1 ಕಪ್,
* ಉಪ್ಪು- ಸ್ವಲ್ಪ
* ಗಸಗಸೆ- 1 ಟೀ ಚಮಚ
* ಏಲಕ್ಕಿ ಪುಡಿ-1 ಟೀ ಚಮಚ,
* ಅಡುಗೆ ಎಣ್ಣೆ- 2ಕಪ್
Advertisement
Advertisement
ಮಾಡುವ ವಿಧಾನ:
* ಅಕ್ಕಿಯನ್ನು 4-5 ಗಂಟೆಗಳ ಕಾಲ ನೆನೆ ಹಾಕಿ. ನಂತರ ಅಕ್ಕಿಯ ಜೊತೆಗೆ ತೆಂಗಿನತುರಿ, ಬೆಲ್ಲದ ಪುಡಿ, ಉಪ್ಪು ಮತ್ತು ಅರ್ಧ ಕಪ್ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
Advertisement
Advertisement
* ರುಬ್ಬಿದ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಇರಲಿ. ಹಿಟ್ಟಿಗೆ ಗಸಗಸೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
* ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಕಾದ ಎಣ್ಣೆಗೆ ಚಿಕ್ಕ ಸೌಟಿನಲ್ಲಿ 1 ಸೌಟು ಹಿಟ್ಟನ್ನು ಹಾಕಿ.
* ಈ ಮಿಶ್ರಣ ಹಿಟ್ಟು ಕಜ್ಜಾಯದ ರೀತಿಯಲ್ಲಿ ಎಣ್ಣೆಯಿಂದ ಮೇಲಕ್ಕೆ ತೇಲಿಕೊಂಡು ಬರುತ್ತದೆ. ಎರಡೂ ಬದಿಯನ್ನೂ ಕೆಂಬಣ್ಣ ಬರುವಂತೆ ಬೇಯಿಸಿ. ಇದನ್ನೂ ಓದಿ: ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ
* ಈಗ ರುಚಿಕರವಾದ ಎರಿಯಪ್ಪ ಸವಿಯಲು ಸಿದ್ಧವಾಗುತ್ತದೆ. ನೀವು ಇದನ್ನು ತುಪ್ಪದ ಜೊತೆಗೆ ತಿಂದರೆ ಇನ್ನಷ್ಟು ರುಚಿಯಾಗಿರುತ್ತದೆ.