ಸಿಹಿ ಅಡುಗೆ ಇದ್ದರೆ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಕಳೆ ಬರುತ್ತದೆ. ನವರಾತ್ರಿ ಹಬ್ಬವನ್ನು 9 ದಿನ ಆಚರಣೆ ಮಾಡುವುದರಿಂದ ಪ್ರತಿ ದಿನ ಒಂದೊಂದು ಬಗೆಯ ಸಿಹಿ ಅಡುಗೆಯನ್ನು ಮಾಡುವುದು ಸಾಮಾನ್ಯ. ಎಳ್ಳು ಉಂಡೆ ಸರವಾಗಿ ಮಾಡುವ ರುಚಿಯಾದ ಅಡುಗೆಯಾಗಿದೆ. ಟ್ರೈ ಮಾಡಿ ನೋಡಿ, ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಡೌಟೇ ಇಲ್ಲ. ಈ ವರ್ಷದ ನವರಾತ್ರಿ ಹಬ್ಬವನ್ನು ನೀವು ಈ ಸಿಹಿ ತಿಂಡಿ ಜೊತೆಗೆ ವಿಶೇಷವಾಗಿ ಆಚರಿಸಬಹುದಾಗಿದೆ. 9 ದಿನ ಆಚರಿಸುವ ಈ ನವರಾತ್ರಿ ಹಬ್ಬಕ್ಕೆ ವಿಶೇಷವಾಗಿ ವಿವಿಧ ಸಿಹಿತಿಂಡಿಗಳನ್ನು ಮಾಡುತ್ತೇವೆ.
Advertisement
ಬೇಕಾಗುವ ಸಾಮಗ್ರಿಗಳು:
* ಬಿಳಿಎಳ್ಳು- 1 ಕಪ್
* ಬೆಲ್ಲ- 1ಕಪ್
* ತುಪ್ಪ- ಅರ್ಧ ಕಪ್
* ಏಲಕ್ಕಿ ಪುಡಿ- ಸ್ವಲ್ಪ
* ಪಿಸ್ತಾ (ಹುರಿದು ಪುಡಿ ಮಾಡಿದ್ದು)- ಸ್ವಲ್ಪ
Advertisement
ಮಾಡುವ ವಿಧಾನ:
* ಎಳ್ಳುನ್ನು ಒಂದು ಪಾತ್ರೆಗೆ ಹಾಕಿ ಮಧ್ಯಮ ಉರಿಯಲ್ಲಿ ಪರಿಮಳ ಬರುವವರೆಗೂ ಹಾಗೂ ಎಳ್ಳು ಕಂದು ಬಣ್ಣಕ್ಕೆ ಬರುವವರೆಗು ಹುರಿದು ಒಂದು ಕಡೆ ತೆಗೆದಿಟ್ಟುಕೊಳ್ಳಿ.
* ಈಗ ಅದೇ ಪಾತ್ರೆಗೆ ತುಪ್ಪ ಹಾಗೂ ಬೆಲ್ಲ ಸೇರಿಸಿ ಕರಗಿಸಿ ಚೆನ್ನಾಗಿ ಮಿಶ್ರಣವನ್ನು ಮಾಡಬೇಕು.
Advertisement
* ನಂತರ ಬೆಲ್ಲ ಇರುವ ಪಾತ್ರೆಗೆ ಹುರಿದ ಎಳ್ಳು, ಪಿಸ್ತಾ ಪುಡಿ, ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣ ದಪ್ಪವಾಗಿ ಉಂಡೆ ಮಾಡುವ ಹದಕ್ಕೆ ಬರುವರೆಗೂ ಬೇಯಿಸಿಕೊಳ್ಳಿ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?
Advertisement
* ನಂತರ ಮೇಲೆ ಸ್ವಲ್ಪ ತುಪ್ಪ ಹಾಕಿ. ಅದನ್ನು ತಕ್ಷಣಕ್ಕೆ ಬೇಕಾದ ಆಕಾರಕ್ಕೆ ಉಂಡೆ ಮಾಡಿಕೊಳ್ಳಿ.
* ಈಗ ರುಚಿಯಾದ ಎಳ್ಳು ಉಂಡೆ ಸವಿಯಲು ಸಿದ್ಧವಾಗುತ್ತದೆ. ಈ ಉಂಡೆಯನ್ನು ನೀವು 20 ದಿನ ಬೇಕಾದರು ಸಂಗ್ರಹಿಸಿ ಇಡಬಹುದಾಗಿದೆ. ಇದನ್ನೂ ಓದಿ: ನಿಮ್ಮ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಮಾಡಿ ಹುರಿಗಡಲೆ ಪೇಡಾ