ಕೀವ್/ಲಂಡನ್: ಶಸ್ತ್ರಾಸ್ತ್ರ ಪೂರೈಸುವ ಮೂಲಕ ಹಿಂದಿನಿಂದ ಉಕ್ರೇನ್ ಬೆಂಬಲಕೊಂಡುತ್ತಿರುವ ನ್ಯಾಟೋ ಪಡೆಗಳು, ನೇರವಾಗಿ ರಷ್ಯಾವನ್ನು ಎದಿರುಹಾಕಿಕೊಳ್ಳಲು ಮತ್ತೆ ಹಿಂದೇಟು ಹಾಕಿದೆ.
ರಷ್ಯಾ ಮತ್ತು ಉಕ್ರೇನ್ ದಾಳಿ ಇಂದಿಗೆ 10ನೇ ದಿನಕ್ಕೆ ಮುಟ್ಟಿದ್ದು, ಇಂದು 6 ಗಂಟೆಗಳ ಕಾಲ ರಷ್ಯಾ ಕದನ ವಿರಾಮವನ್ನು ಘೋಷಿಸಿತ್ತು. ಇಂದು ರಷ್ಯಾ ದಾಳಿ ತಡೆಯಲು ನೋ ಫ್ಲೈ ಜೋನ್ ಘೋಷಣೆ ಮಾಡುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಮಾಡಿದ ಮನವಿಯನ್ನು ನ್ಯಾಟೋ ಪುರಸ್ಕರಿಸಿಲ್ಲ. ಇದನ್ನೂ ಓದಿ: ಭಾರತದ ಮೇಲೆ ಯುದ್ಧದ ಎಫೆಕ್ಟ್: ಖಾದ್ಯತೈಲ, ಗೋಧಿ, ಸಿಮೆಂಟ್, ಕಬ್ಬಿಣ ದುಬಾರಿ
Advertisement
Advertisement
ನಾವು ನೋ ಫ್ಲೈ ಜೋನ್ ಎಂದು ಘೋಷಿಸಿದರೆ ಉಕ್ರೇನ್‍ಗೆ ನ್ಯಾಟೋ ಯುದ್ಧ ವಿಮಾನ ಕಳಿಸಿ ರಷ್ಯಾದ ವಿಮಾನ ತಡೆಯಬೇಕಾಗುತ್ತದೆ. ಇದು ನೇರವಾಗಿ ಯುದ್ಧಕ್ಕೆ ಧುಮುಕಿದಂತೆ. ಇದು ಮೂರನೇ ಮಹಾಯುದ್ಧಕ್ಕೂ ನಾಂದಿ ಹಾಡಬಹುದು. ನಾವಿದಕ್ಕೆ ತಯಾರಿಲ್ಲ. ನಾವು ನೋ ಫ್ಲೈ ಜೋನ್ ಎಂದು ಘೋಷಿಸಲ್ಲ ಎಂದು ನ್ಯಾಟೋ ದೇಶಗಳು ಪ್ರಕಟಿಸಿವೆ.
Advertisement
Advertisement
ಈ ಪ್ರಕಟನೆ ಕೇಳಿ ಝೆಲೆನ್‍ಸ್ಕಿ ಗರಂ ಆಗಿದ್ದಾರೆ. ನ್ಯಾಟೋ ತೀರ್ಮಾನ ರಷ್ಯಾಗೆ ಇನ್ನಷ್ಟು ದಾಳಿ ಮಾಡಲು ಗ್ರೀನ್ ಸಿಗ್ನಲ್ ನೀಡಿದಂತಾಗಿದೆ. ಇದನ್ನು ನ್ಯಾಟೋದಿಂದ ನಿರೀಕ್ಷೆ ಮಾಡಿರಲಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ನಾನೇಲ್ಲೂ ಓಡಿಹೋಗಿಲ್ಲ. ಕೀವ್‍ನಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ರಷ್ಯಾದ ಮೇಲಿನ ದಿಗ್ಬಂಧನ ಯುದ್ಧಕ್ಕೆ ಸಮ. ಇದಕ್ಕೆ ತಕ್ಕ ಮೌಲ್ಯ ತೆರುತ್ತೀರಿ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಸಿದ್ದಾರೆ. ಈ ಯುದ್ಧದಲ್ಲಿ ಗೆಲ್ಲೋದು ಉಕ್ರೇನ್ ದೇಶ ಎಂದು ಅಮೆರಿಕ ಭವಿಷ್ಯ ಹೇಳಿದೆ. ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಮುಂದಿನ ವಾರ ಪೋಲೆಂಡ್, ರೋಮೇನಿಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದನ್ನೂ ಓದಿ: ರಾಜವಂಶಗಳು ತಮ್ಮ ಸ್ವಾರ್ಥಕ್ಕೆ ಉಕ್ರೇನ್ ಸಮಸ್ಯೆಯನ್ನ ಬಳಸಿಕೊಳ್ಳುತ್ತೀವೆ: ಮೋದಿ ಕಿಡಿ