ಮುಂದಿನ ವರ್ಷ ಕೆಲ ಶಾಲೆಗಳಲ್ಲಿ NEP ಜಾರಿ: ಬಿ.ಸಿ.ನಾಗೇಶ್

Advertisements

ಬೆಳಗಾವಿ: ರಾಜ್ಯದಲ್ಲಿ ಮುಂದಿನ ವರ್ಷ ಕೆಲ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಗೊಳಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

Advertisements

ವಿಧಾನಸಭೆಯಲ್ಲಿ ಮಹಾಂತೇಶ್ ಕೌಜಲಗಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಪ್ರಕ್ರಿಯೆ ಈಗಾಗಲೇ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಅನುಷ್ಠಾನ ಕಾರ್ಯಪಡೆಯ ಶಿಫಾರಸಿನಂತೆ ಹಂತ ಹಂತವಾಗಿ ಸಂಪೂರ್ಣ ಜಾರಿಗೊಳಿಸಲಾಗುವುದು. ಪ್ರಾಥಮಿಕ ಹಂತದ ಶಿಕ್ಷಣ ಮಾತ್ರ ಆರಂಭಿಸುತ್ತೇವೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಸಚಿವರಿಗೆ ಬಿಜೆಪಿ ಶಾಸಕರಿಂದಲೇ ಶಾಕ್..!

Advertisements

NEP ಅನುಷ್ಠಾನ ಹಂತದಲ್ಲಿ ವಿವಿಧ ವಿಷಯಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನೇಮಕಾತಿಗೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಕೌಜಲಗಿ ಅವರು, ಒಮ್ಮಿಂದೊಮ್ಮೆಯೇ ಜಾರಿಯಾದರೆ ಸಮಸ್ಯೆಯಾಗುತ್ತದೆ. ಪೂರ್ವತಯಾರಿಯಿಲ್ಲದೆ ಆರಂಭ ಮಾಡುವುದು ಬೇಡ ಎಂದರು. ಇದಕ್ಕುತ್ತರಿಸಿದ ಸಚಿವರು, ಟಾಟಾ ಸಂಸ್ಥೆ ಮೂಲಕ ಈಗಾಗಲೇ ತರಬೇತಿ ಆರಂಭವಾಗಿದೆ. ತರಬೇತಿ ನೀಡದೇ NEP ಜಾರಿ ಮಾಡಲ್ಲ ಎಂದು ಭರವಸೆ ನೀಡಿದರು. 2030ರೊಳಗೆ NEP ಸಂಪೂರ್ಣವಾಗಿ ಜಾರಿಗೊಳಿಸಲು ಹೇಳಿದ್ದಾರೆ. ಆದರೆ ತುಂಬಾ ಶಿಕ್ಷಕರ ಕೊರತೆಯಾಗಲ್ಲ ಎಂದು ಹೇಳಿದರು.  ಇದನ್ನೂ ಓದಿ: ನಮ್ಮಿಂದ ಸಚಿವರಾಗಿರೋದು, ನೀವು ಮೇಲಿಂದ ಇಳಿದು ಬಂದಿಲ್ಲ- ಮಿನಿಸ್ಟರ್ಸ್ ವಿರುದ್ಧ ಶಾಸಕರ ಆಕ್ರೋಶ

Advertisements

ವಿವಿಧ ಕ್ಷೇತ್ರಗಳ ಪಾಲುದಾರರಿಗೆ NEP ಪರಿಚಯಿಸಿ ಅವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಕುರಿತು ರಾಜ್ಯದ ಪ್ರಸ್ತುತ ಸ್ಥಿತಿ ಅವಲೋಕಿಸಲು ರಾಜ್ಯ ಶಿಕ್ಷಣ ಕ್ಷೇತ್ರದ ಪೊಸಿಷನ್ ಪೇಪರ್ ಸಿದ್ಧಪಡಿಸಲು ವಿವಿಧ ಸಮಿತಿ ರಚಿಸಲಾಗಿದೆ. ಇದು ಸಿದ್ಧಗೊಂಡ ಬಳಿಕ ಪಠ್ಯಕ್ರಮ ಹಾಗೂ ಪಠ್ಯಸೂಚಿ ರಚಿಸಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ.

ಖಾಲಿ ಹುದ್ದೆಗಳ ಲೆಕ್ಕ:
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 41,869, ಸರ್ಕಾರಿ ಪ್ರೌಢಶಾಲೆಗಳಲ್ಲಿ 8292, ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ 3539 ಉಪನ್ಯಾಸಕರ ಹುದ್ದೆಗಳು ಖಾಲಿಯಿದೆ ಎಂದು ಸಚಿವ ನಾಗೇಶ್ ಹೇಳಿದ್ದಾರೆ. ಇದನ್ನೂ ಓದಿ:ಬದುಕಿದ್ದೀವಿ ಎಂದು ತೋರಿಸಲು ಕಾಂಗ್ರೆಸ್ ಪ್ರತಿಭಟನೆ: ಈಶ್ವರಪ್ಪ

Advertisements
Exit mobile version